ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪ್ರಾರಂಭವಾಗಿ 25 ವರ್ಷದ ಬೆಳ್ಳಿ ಹಬ್ಬದ ಪ್ರಯುಕ್ತ ಸುಜ್ಞಾನ ನಿಧಿ ಶಿಷ್ಯವೇತನ ಮಂಜೂರಾತಿ ಪತ್ರವನ್ನು ವಿಚಾರಣಾ ಕಾರ್ಯಕ್ರಮ ಯೋಜನಾ ಕಚೇರಿ ಬಂಟ್ವಾಳ ದಲ್ಲಿ ಜರಗಿತು.
ಬಂಟ್ವಾಳ ಯೋಜನಾ ಕಚೇರಿ ವ್ಯಾಪ್ತಿಯಲ್ಲಿ ತಾಲೂಕಿನ ಪ್ರಥಮ ಹಂತದ 95 ವಿದ್ಯಾರ್ಥಿಗಳಿಗೆ ಶಿಷ್ಯವೇತನ ಮಂಜೂರಾಗಿದ್ದು ಮಂಜೂರಾತಿ ಪತ್ರವನ್ನು ನಿರ್ದೇಶಕರಾದ ಮಹಾಬಲ ಕುಲಾಲ್, ಜಿಲ್ಲಾ ಜನ ಜಾಗೃತಿ ವೇದಿಕೆಯ ಅಧ್ಯಕ್ಷರಾದ ಪದ್ಮನಾಭ ಶೆಟ್ಟಿ ,ಪತ್ರಿಕಾ ವರದಿಗಾರರಾದ ಮೋಹನ್ ಶ್ರೀಯಾನ್, ಬಂಟ್ವಾಳ ತಾಲೂಕು ಯೋಜನಾಧಿಕಾರಿ ಮಾಧವ ಗೌಡ ಹಾಗೂ ವಿದ್ಯಾರ್ಥಿಗಳು ಮತ್ತು ಅವರ ಪೋಷಕರ ಉಪಸ್ಥಿತಿಯಲ್ಲಿ ವಿತರಣೆ ಮಾಡಲಾಯಿತು.
ಪೂಜ್ಯ ಖಾವಂದರು ಪ್ರಾರಂಭ ಮಾಡಿದ ಈ ಯೋಜನೆಯಿಂದ ಈವರೆಗೆ 4763 ವಿದ್ಯಾರ್ಥಿಗಳಿಗೆ 59.49 ಕೋಟಿ ವಿತರಣೆ ಮಾಡಲಾಗಿದೆ.