ಬಂಟ್ವಾಳ: ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಚೇತನ್ ಅಮೀನ್ ಬಜ ಅವರು ಆಯ್ಕೆಯಾಗಿದ್ದಾರೆ.
ದೇವಸ್ಥಾನದಲ್ಲಿ ಹಿರಿಯರಾದ ಕೆ.ಕುಸುಮಾಕರ ಶೆಟ್ಟಿ ಕುರ್ಯಾಳ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಿತಿ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಕಾರ್ಯದರ್ಶಿಯಾಗಿ ಸುರೇಶ್ ಶೆಟ್ಟಿ, ಕೋಶಾಽಕಾರಿ ಕಿಶನ್ ಭಂಡಾರಿ ಸರಪಾಡಿ, ಉಪಾಧ್ಯಕ್ಷರಾಗಿ ನಾರಾಯಣ ಶೆಟ್ಟಿ ಎಚ್, ಹರೀಶ್ ಶೆಟ್ಟಿ ಪಿ, ಜತೆ ಕಾರ್ಯದರ್ಶಿ ಸತೀಶ್ ಬೊಳ್ಳೂರು, ಸಮಿತಿ ಸದಸ್ಯರಾಗಿ ನೋಣಯ್ಯ ಕಲ್ಕೊಟ್ಟೆ, ಜಗದೀಶ ಪೂಜಾರಿ ಕೋಡಿ, ಸಂದೀಪ್ ದೇವಾಡಿಗ, ಯೋಗೀಶ್ ಗೌಡ, ತಿಮ್ಮಪ್ಪ ನಾಯ್ಕ್ ಮಿಯಾರುಪಲ್ಕೆ, ಚಂದ್ರಶೇಖರ ನಾಯ್ಕ್, ಡೀಕಯ್ಯ ಪೂಜಾರಿ ಬೊಳ್ಳೂರು, ದಯಾನಂದ ಕೋಟ್ಯಾನ್ ದರ್ಕಾಸು ಅವರನ್ನು ಆರಿಸಲಾಯಿತು.
ಸಭೆಯಲ್ಲಿ ಪ್ರಧಾನ ಅರ್ಚಕ ಶಂಕರನಾರಾಯಣ ಹೊಳ್ಳ, ಪ್ರಮುಖರಾದ ಉಮೇಶ್ ಆಳ್ವ ಕೊಟ್ಟುಂಜ, ಚಂದ್ರಹಾಸ ಶೆಟ್ಟಿ ಎಚ್, ರಾಹುಲ್ ಕೋಟ್ಯಾನ್, ಸಂತೋಷ್ ಶೆಟ್ಟಿ ಪಿ, ವಚನ್ ಅಮೀನ್, ಚರಣ್, ಗುರುಪ್ರಸಾದ್, ಸಂದೀಪ್, ಕೊರಗಪ್ಪ ನಾಯ್ಕ್, ಹರೀಶ್ ಪಿ, ನಿತಿನ್ ಬಜ, ವಿಜೇತ್ ಶೆಟ್ಟಿ, ಕೀರ್ತನ್ ಭಂಡಾರಿ, ಗಿರೀಶ್ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು.