Thursday, October 26, 2023

ಅಖಂಡ ಭಾರತ ಸಂಕಲ್ಪ ಅಂಗವಾಗಿ ವಿಶ್ವಹಿಂದೂ ಪರಿಷದ್ ,ಬಜರಂಗದಳ ವತಿಯಿಂದ ಬೃಹತ್ ಬೈಕ್ ಜಾಥ

Must read

ಬಂಟ್ವಾಳ: ಹಿಂದೂ ಸಮಾಜದ ಮೇಲೆ ನಡೆಯುವ ನಿರಂತರವಾದ ದಾಳಿಗೆ , ಅನಾಚರಗಳಿಗೆ ಕೊನೆಯನ್ನು ಕಾಣಿಸಿ, ಆಖಂಡ ಭಾರತ ನಿರ್ಮಾಣದ ಸಂಕಲ್ಪ ಮಾಡಬೇಕಾಗಿದೆ ಎಂದು ಅರ್.ಎಸ್.ಎಸ್.ಪ್ರಮುಖ ಡಾ| ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.

ಅವರು ಅಖಂಡ ಭಾರತದ ಸಂಕಲ್ಪದ ಅಂಗವಾಗಿ ವಿಶ್ವಹಿಂದೂ ಪರಿಷದ್ ,ಬಜರಂಗದಳ ಬಂಟ್ವಾಳ ತಾಲೂಕು ಘಟಕದ ವತಿಯಿಂದ ನಡೆದ ಬೃಹತ್ ಬೈಕ್ ಜಾಥ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಸಾಂಸ್ಕೃತಿಕ ಚಿಂತನೆ ಮಾಯವಾಗುತ್ತಿದೆ,ಲವ್ ಜಿಹಾದ್ ಹೆಚ್ಚಾಗುತ್ತಿದೆ,ದೇಶದ್ರೋಹದ ಕಾರ್ಯಗಳು ದಿನೇದಿನೇ ಹೆಚ್ಚುತ್ತಿದೆ, ಇದೆಲ್ಲದರ ಕೊನೆಯಾಗಬೇಕಾದರೆ ಹಿಂದೂ ಸಮಾಜ ಒಂದಾಗಬೇಕಾಗಿದೆ,ದೃಷ್ಟಿಕೋನ ಬದಲಾಗಬೇಕು ಎಂದು ಅವರು ತಿಳಿಸಿದರು.

ದೇಶವನ್ನು ತುಂಡು ಮಾಡಿದ ಮುಸ್ಲಿಂ ಲೀಗ್ ನ ಜೊತೆ ಕಾಂಗ್ರೆಸ್ ಸೇರಿಕೊಂಡು ಮತ್ತೆ ದೇಶದ್ರೋಹದ ಕೆಲಸದಲ್ಲಿ ತೊಡಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಮತ್ತೊಂದು ಪಾಕಿಸ್ತಾನ ಆಗುವ ಮೊದಲು ಹಿಂದೂ ಸಮಾಜ ವೈಯಕ್ತಿಕ ಗಲಾಟೆಯನ್ನು ದೂರ ಮಾಡಿ ಜೊತೆಯಾಗಿ ನಿಲ್ಲಬೇಕು ಎಂದು ಅವರು ತಿಳಿಸಿದರು.

ಹಿಂದು ಸಮಾಜವನ್ನು ಎಚ್ಚರಿಸುವ, ಜಾಗ್ರತಗೊಳಿಸುವ, ಸಂಘಟಿಸುವ, ಧಾರ್ಮಿಕ ಚಿಂತನೆಯನ್ನು ನೀಡುವ ಕೆಲಸ ಆಗಬೇಕು ಎಂದು ಅವರು ತಿಳಿಸಿದರು.

ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಜಾಥಕ್ಕೆ ಚಾಲನೆ ನೀಡಿದರು.

ವಿಶ್ವಹಿಂದೂ ಪರಿಷದ್, ಬಜರಂಗದಳ ತಾಲೂಕು ಅಧ್ಯಕ್ಷ ಪ್ರಸಾದ್ ಕುಮಾರ್,ಜಿಲ್ಲಾ ಪ್ರಮುಖ ರಾದ ಗುರುರಾಜ್ ಬಂಟ್ವಾಳ, ಭರತ್ ಕುಮ್ಡೆಲು, ಸಂತೋಷ್ ಸರಪಾಡಿ, ಸುರೇಶ್ ಬೆಂಜನಪದವು, ತಾಲೂಕು ಘಟಕದ ಪ್ರಮುಖ ರಾದ ದೀಪಕ್ ಅಜೆಕಲ, ಶಿವಪ್ರಸಾದ್ ತುಂಬೆ, ಚಂದ್ರಕಲಾಯಿ, ಪ್ರಸಾದ್ ಬೆಂಜನಪದವು, ಕಿರಣ್ ಕಾಪಿಕಾಡು, ಸಂದೇಶ್ ಕಾಡಬೆಟ್ಟು,ಪ್ರಶಾಂತ್ ಪೂಪಾಡಿಕಟ್ಟೆ, ರಂಜಿತ್ ತಲೆಂಬಿಲ ಮತ್ತಿತರರು ಉಪಸ್ಥಿತರಿದ್ದರು.

ಬಿಸಿರೋಡಿನ ಬ್ರಹ್ಮ ಶ್ರೀ ಗುರುನಾರಾಯಣ ಮಂದಿರದಿಂದ ಪೇಟೆಯಾಗಿ ಕೈಕಂಬ ರವರೆಗೆ ಕಾರ್ಯಕರ್ತರು ಬೈಕ್ ರ್ಯಾಲಿಯಲ್ಲಿ ಭಾಗವಹಿಸಿದರು.

More articles

Latest article