Saturday, October 28, 2023

ಬಂಟ್ವಾಳ ತಾಲೂಕು ಧ್ವನಿ ಬೆಳಕು ಸಂಯೋಜಕರ ಒಕ್ಕೂಟದ ವತಿಯಿಂದ ಧ್ವನಿ ಬೆಳಕು ಕುಟುಂಬ ಸಂಗಮ ಕಾರ್ಯಕ್ರಮ

Must read

ಬಂಟ್ವಾಳ: ಯಾರು ಹೆಚ್ಚು ಜನರಿಗೆ ಉದ್ಯೋಗ ನೀಡುತ್ತಾರೋ ಅವರು ಸಮಾಜದಲ್ಲಿ ದೊಡ್ಡ ವ್ಯಕ್ತಿಯಾಗಲು ಸಾಧ್ಯವಿದ್ದು, ಸದಾ ಸಮಾರಂಭಗಳಲ್ಲಿ ಬಿಝಿಯಾಗಿರುವ ಜಿಲ್ಲೆಯ ಪ್ರತಿ ಕಾರ್ಯಕ್ರಮಗಳ ಯಶಸ್ವಿಗೂ ಧ್ವನಿ-ಬೆಳಕು ಅತಿ ಅಗತ್ಯವಾಗಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದರು.

ಅವರು ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ಬಂಟ್ವಾಳ ತಾಲೂಕು ಧ್ವನಿ ಬೆಳಕು ಸಂಯೋಜಕರ ಒಕ್ಕೂಟದ ವತಿಯಿಂದ ಧ್ವನಿ ಬೆಳಕು ಕುಟುಂಬ ಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ತಾಲೂಕು ಸಂಘದ ಅಧ್ಯಕ್ಷ ಧನರಾಜ್ ಶೆಟ್ಟಿ ಫರಂಗಿಪೇಟೆ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಯೋಧರು, ಒಕ್ಕೂಟದ ಹಿರಿಯ ಸದಸ್ಯರು, ಹಿರಿಯ ಕಾರ್ಮಿಕರನ್ನು ಸಮ್ಮಾನಿಸಲಾಯಿತು. ವಲಯಗಳ ಪ್ರಾಯೋಜಕತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.

ಸಮಾರಂಭದಲ್ಲಿ ಒಕ್ಕೂಟದ ಕಾನೂನು ಸಲಹೆಗಾರ ಜಯರಾಮ್ ರೈ ಪಿ, ದ.ಕ.ಜಿಲ್ಲಾ ಧ್ವನಿವರ್ಧಕ ಮತ್ತು ದೀಪಾಲಂಕಾರ ಮಾಲಕರ ಸಂಘದ ಅಧ್ಯಕ್ಷ ರಾಜಶೇಖರ ಶೆಟ್ಟಿ, ಫರಂಗಿಪೇಟೆ ಶ್ರೀ ಹನುಮಾನ್ ದೇವಸ್ಥಾನ ನಿರ್ಮಾಣ ಸಮಿತಿಯ ಪ್ರಧಾನ ಕಾರ್ಯದರ್ಶಿ ಉಮೇಶ್ ಶೆಟ್ಟಿ ಬರ್ಕೆ, ಬಂಟ್ವಾಳ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಜೈನ್, ಮಂಗಳೂರಿನ ಉದ್ಯಮಿ ಮೂಸ, ಮಂಗಳೂರು ತಾಲೂಕು ಸಂಘದ ಅಧ್ಯಕ್ಷ ಬೆನೆಟ್ ಡಿಸಿಲ್ವಾ, ಪುತ್ತೂರು ಸಂಘದ ಅಧ್ಯಕ್ಷ ಶ್ಯಾಮ್ ಮಂಜುನಾಥಪ್ರಸಾದ್, ಬೆಳ್ತಂಗಡಿ ಸಂಘದ ಅಧ್ಯಕ್ಷ ಚಂದ್ರಶೇಖರ ಎಂ.,ಬಂಟ್ವಾಳ ತಾಲೂಕು ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಸುವರ್ಣ, ಉಪಾಧ್ಯಕ್ಷರಾದ ಕುಶಲ್‌ರಾಜ್, ಕಾರ್ಯದರ್ಶಿಗಳಾದ ಸಂತೋಷ್ ಕನ್ಯಾನ, ಧನಂಜಯ ಶೆಟ್ಟಿ ನಾಡಬೆಟ್ಟು, ಪದಾಧಿಕಾರಿಗಳಾದ ತ್ಯಾಗರಾಜ್, ಪ್ರಶಾಂತ್, ಲಿಂಗಪ್ಪ ನಾಯ್ಕ್ ಡಿ.ಟಿ, ದೇವದಾಸ್, ಶೇಖ್ ಸುಭಾನ್, ಆನಂದ, ವಲಯ ಸಮಿತಿಗಳ ಪ್ರಮುಖರು ಉಪಸ್ಥಿತರಿದ್ದರು.

ತಾಲೂಕು ಸಂಘದ ಕೋಶಾಧಿಕಾರಿ ಇಸ್ಮಾಯಿಲ್ ಬನಾರಿ ಸ್ವಾಗತಿಸಿದರು. ಬಿ.ಸಿ.ರೋಡು ವಲಯದ ಕಾರ್ಯದರ್ಶಿ ಲೋಹಿತ್ ವಂದಿಸಿದರು.

More articles

Latest article