Thursday, October 26, 2023

ನರಿಕೊಂಬು ಶಾಲೆಯಲ್ಲಿ ಜಿಲ್ಲಾ ಮಟ್ಟದ ಪ್ರಾರ್ಥಮಿಕ ಹಾಗೂ ಪ್ರೌಢಶಾಲಾ ಬಾಲಕರ ಮತ್ತು ಬಾಲಕಿಯರ “ಜಂಪ್ ರೋಫ್’ ಹಾಗೂ “ರೋಫ್ ಸ್ಕಿಪ್ಪಿಂಗ್” ಪಂದ್ಯಾಟ

Must read

ಬಂಟ್ವಾಳ: ಕ್ರೀಡೆಯಲ್ಲಿ ಜೀವನವನ್ನು ಕೂಡ ಕಟ್ಟಿಕೊಳ್ಳಬಹುದು, ಹಳ್ಳಿಯ ಮಕ್ಕಳಿಗೆ ಸರಿಯಾದ ತರಬೇತಿ ನೀಡಿದರೆ ಅವರು ಯಾವ ಮಟ್ಟಕ್ಕೂ ಹೋಗಲು ಸಿದ್ದರಾಗಿರುತ್ತಾರೆ. ಪೇಟೆಯ ಮಕ್ಕಳು ಮೊಬೈಲ್ ಆಟದಲ್ಲಿ ಬಿಸಿ ಆಗಿರುವಾಗ ಗ್ರಾಮೀಣಪ್ರದೇಶದ ಮಕ್ಕಳು ಗ್ರಾಮೀಣ ಆಟದಲ್ಲಿ ತೊಡಗಿಸಿಕೊಂಡು ಆರೋಗ್ಯದಲ್ಲಿ ಬಲಿಷ್ಠವಾಗಿದ್ದಾರೆ ಎಂದು ಬಂಟ್ವಾಳ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್ ಹೇಳಿದರು.

ಅವರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉಪನಿಷಕರ ಕಛೇರಿ ಮಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ, ನರಿಕೊಂಬು ಇದರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಪ್ರಾರ್ಥಮಿಕ ಹಾಗೂ ಪ್ರೌಢಶಾಲಾ ಮಕ್ಕಳ 14 ರಿಂದ 17 ವರ್ಷ ವಯಮಿತಿ ಒಳಗಿನ ಬಾಲಕರ ಮತ್ತು ಬಾಲಕಿಯರ “ಜಂಪ್ ರೋಫ್’ ಹಾಗೂ “ರೋಫ್ ಸ್ಕಿಪ್ಪಿಂಗ್” ಪಂದ್ಯಾಟವನ್ನು ಬಂಟ್ವಾಳ ತಾಲೂಕಿನ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ ಹಿರಿಯ ಪ್ರಾಥಮಿಕ ಶಾಲೆ ನರಿಕೊಂಬು ಇಲ್ಲಿ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿನುತಾ ಪುರುಷೋತ್ತಮ ವಹಿಸಿಕೊಂಡಿದ್ದರು.

ಮುಖ್ಯ ಅತಿಥಿಗಳಾದ ಬಂಟ್ವಾಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜ್ಞಾನೇಶ್, ಕ್ರೀಡೆ ದೈಹಿಕ ಮಾನಸಿಕ ಶಕ್ತಿಯನ್ನು ಗಟ್ಟಿಗೊಳಿಸುವ ಸಾಧನವಾಗಿದೆ. ಇಲಾಖೆಯಿಂದ ಮಾಡುವ ಕ್ರೀಡೆ ಹಾಗೂ ಪ್ರತಿಭಾ ಕಾರಂಜಿ ಕಾರ್ಯಕ್ರಮಗಳು ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರಹಾಕಲು ಸಹಕಾರಿಯಾ ಗಿದೆ ಎಂದರು.

ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ವಿವಿಧ ಶಾಲೆಗಳಿಂದ ಒಟ್ಟು 429 ಮಂದಿ ಸ್ಪರ್ಧಾಳುಗಳು ಭಾಗವಹಿಸಿದ್ದರು.

ವೇದಿಕೆಯಲ್ಲಿ ನರಿಕೊಂಬು ಶಾಲಾ ಸ್ಥಳದಾನಿಗಳಾದ ಗುರುದತ್ ಭಟ್, ನರಿಕೊಂಬು ಪಂಚಾಯತ್ ಉಪಾಧ್ಯಕ್ಷರಾದ ಪ್ರಕಾಶ್ ಮಡಿಮುಗೆರು, ಸದಸ್ಯರುಗಳಾದ ರಂಜಿತ್ ಕೆದ್ದೇಲ್, ಕಿಶೋರ್ ಶೆಟ್ಟಿ, ಚಿತ್ರಾಕ್ಷಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಿವು ಬಿರಾದಾರ್, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರವಿ ಅಂಚನ್, ಉಪಾಧ್ಯಕ್ಷರಾದ ಉಷಾಲಾಕ್ಷಿ,ಬಿ ಆರ್ ಪಿ ರಾಘವೇಂದ್ರ ಬಲ್ಲಾಲ್, ನರಿಕೊಂಬು ಗ್ರಾಮ ಪಂಚಾಯತಿ ನ ನಿಕಟಪೂರ ಅಧ್ಯಕ್ಷರಾದ ಯಶೋಧರ ಕರ್ಬೆಟ್ಟು, ಬಂಟ್ವಾಳ ತಾಲೂಕು ದೈಹಿಕ ಪರಿವೀಕ್ಷಣಾಧಿಕಾರಿ ವಿಷ್ಣು ನಾರಾಯಣ ಹೆಬ್ಬಾರ್, ಬಂಟ್ವಾಳ ತಾಲೂಕು ಶಿಕ್ಷಣ ಸಂಯೋಜಕಿಯರಾದ ಸುಜಾತ ಹಾಗೂ ಸುದಾ, ಬಾಲ್ತಿಲ ಕ್ಲಸ್ಟರ್ ಸಿ ಆರ್ ಪಿ ಸತೀಶ್ ರಾವ್, ರಾಜ್ಯ ಸರಕಾರಿ ನೌಕರರ ಸಂಘದ ಬಂಟ್ವಾಳ ಅಧ್ಯಕ್ಷರಾದ ಉಮನಾಥ ರೈ ಮೇರಾವ್,ದಕ್ಷಿಣ ಕನ್ನಡ ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಶಿವಪ್ರಸಾದ್ ಶೆಟ್ಟಿ, ಉಪಾಧ್ಯಕ್ಷರಾದ ನವೀನ್ ಪಿ ಎಸ್, ರಾಜ್ಯ ಸರಕಾರಿ ನೌಕರರ ಸಂಘದ ಕಾರ್ಯದರ್ಶಿಗಳಾದ ಸಂತೋಷ್ ಕುಮಾರ್,ದಕ್ಷಿಣ ಕನ್ನಡ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ಲಿಲ್ಲಿ ಪಾಯಸ್, ಉಪಾಧ್ಯಕ್ಷರಾದ ಜಗದೀಶ್ ರೈ ತುಂಬೆ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ರತ್ನಾವತಿ ಕಾರ್ಯದರ್ಶಿ ಸಂತೋಷ್ ಚೆನ್ನೈ ತೋಡಿ, ಸ್ಪರ್ಧೆಯ ನಿರ್ಣಾಯಕರಾಗಿ ಭಾಗವಹಿಸಿದ ಸ್ವಾಮಿ ವಿವೇಕಾನಂದ ಕಾಲೇಜ್ ಎಡಪದವಿನ ಉಪನ್ಯಾಸಕರಾದ ಪ್ರೇಮನಾಥ್ ಶೆಟ್ಟಿ, ನಿರಂಜನ ಸ್ವಾಮಿ ಪದವಿ ಪೂರ್ವ ಕಾಲೇಜ್ ಸುಂಕದಕಟ್ಟೆಯ ಉಪನ್ಯಾಸಕರಾದ ನವೀನ್, ಮೊದಲಾದವರು ಉಪಸ್ಥಿತರಿದ್ದರು.

ದಕ್ಷಿಣ ಕನ್ನಡ ಜಿಲ್ಲಾ ದೈಹಿಕ ಶಿಕ್ಷಣ ಪರೀಕ್ಷಾಧಿಕಾರಿ ಭುವನೇಶ್ ಕಾರ್ಯಕ್ರಮದ ಪ್ರಸ್ತಾವಿಕ ಮಾಡಿದರು, ನರಿಕಂಬು ಶಾಲಾ ಮುಖ್ಯ ಶಿಕ್ಷಕಿ ಪ್ರೇಮ ಸ್ವಾಗತಿಸಿ, ಶಿಕ್ಷಕಿವಿಮಲಾ ಪ್ರಸಿಲ್ಲ ಪಿಂಟೋ ವಂದಿಸಿದರು. ಶಿಕ್ಷಕಿ ಶೋಭಾ ಕಾರ್ಯಕ್ರಮ ನೀರೂಪಿಸಿದರು.

More articles

Latest article