Tuesday, October 17, 2023

ವಿಮಾನದಲ್ಲಿ ಗಗನಸಖಿ ಮೈ ಮೇಲೆ ಕೈ ಹಾಕಿದ ಆರೋಪಿ ಅರೆಸ್ಟ್

Must read

ಬೆಂಗಳೂರು: ವಿಮಾನದಲ್ಲಿ ಗಗನಸಖಿಗೆ ಲೈಂಗಿಕ ಕಿರುಕುಳ ಕೊಟ್ಟ ಪ್ರಕರಣ ದೇವನಹಳ್ಳಿ ಇಂಟರ್‌ ನ್ಯಾಷನಲ್‌ ಏರ್‌ಪೋರ್ಟ್‌ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಮಾಲ್ಡೀವ್ಸ್‌ನಿಂದ ಬೆಂಗಳೂರಿಗೆ ಬರ್ತಿದ್ದ ವಿಮಾನದಲ್ಲಿ ಈ ಘಟನೆ ನಡೆದಿದೆ.

ಆರೋಪಿ ಕುಳಿತಿದ್ದ ಸೀಟ್ ಬಳಿ ಗಗನಸಖಿ ನಡೆದು ಹೋಗುವಾಗ ಮೈಮೇಲೆ ಕೈ ಹಾಕಿದ ಎಂದು ಆರೋಪಿಸಲಾಗಿದೆ. ಬಳಿಕ ಗಗನಸಖಿಗೆ ನಿನ್ನ ರೇಟ್ ಎಷ್ಟು? ಎಷ್ಟು ಡಾಲರ್ ಕೊಟ್ರೆ ನೀನು ಬರ್ತಿಯಾ ಎಂದು ಕೇಳಿದ್ದಾನೆ. ನೂರು ಡಾಲರ್ ಕೊಟ್ರೆ ಸಾಕಾ ಇನ್ನು ಬೇಕಾ ಎಂದೆಲ್ಲಾ ಕೇಳಿದ್ದಾನೆ ಎಂದು ಆರೋಪಿಸಲಾಗಿದೆ. ಕೂಡಲೇ ಅಕ್ರಂ ಅಹ್ಮದ್ ಎಂಬ ಆರೋಪಿಯನ್ನ ದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಇನ್ನು ಗಗನಸಖಿ ದೂರಿನ ಅನ್ವಯ ದೇವನಹಳ್ಳಿ ಇಂಟರ್‌ ನ್ಯಾಷನಲ್‌ ಏರ್‌ಪೋರ್ಟ್‌ ಪೊಲೀಸರು ವಿಚಾರಣೆ ನಡೆಸಿದ್ದಾರೆ.

More articles

Latest article