Tuesday, October 31, 2023

ಬಿಎಂಟಿಸಿ ಬಸ್‌ ಹರಿದು ಎಲ್‌ಕೆಜಿ ಬಾಲಕಿ ಸಾವು

Must read

ಬೆಂಗಳೂರು: ಬಿಎಂಟಿಸಿ ಬಸ್ ಹರಿದು ನಾಲ್ಕೂವರೆ ವರ್ಷದ ಬಾಲಕಿ ಸಾವನ್ನಪ್ಪಿರೋ ದಾರುಣ ಘಟನೆ ಉತ್ತರಹಳ್ಳಿ ಮುಖ್ಯರಸ್ತೆಯಲ್ಲಿ ನಡೆದಿದೆ.

ನಾಲ್ಕೂವರೆ ವರ್ಷದ ಪೂರ್ವಿ ಬಾಲಕಿ ಮೃತ ದುರ್ದೈವಿ.

ತಂದೆ ಪ್ರಸನ್ನ ಅವರು ಮಗಳನ್ನ ಶಾಲೆಗೆ ಬಿಡಲು ಬೈಕ್​ನಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಬಿಎಂಟಿಸಿ ಬಸ್, ಬೈಕ್​ಗೆ ಡಿಕ್ಕಿ ಹೊಡೆದಿದೆ.

ಬಸ್​ ಡಿಕ್ಕಿ ರಭಸಕ್ಕೆ ಬೈಕ್​ ಚಾಲನೆ ಮಾಡುತ್ತಿದ್ದ ಬಾಲಕಿ ತಂದೆ ಎಡಬದಿ ಬಿದ್ದಿದ್ರೆ, ಬಾಲಕಿ ಬಲ ಬದಿ ಬಿದ್ದಿದ್ದಾಳೆ. ಪರಿಣಾಮ ಬಾಲಕಿ ಮೇಲೆ ಬಸ್ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ಈ ಘಟನೆ ಸಂಬಂಧ ಕುಮಾರಸ್ವಾಮಿ ಲೇಔಟ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಾಲಕನನ್ನ ವಶಕ್ಕೆ ಪಡೆದು ಪೊಲೀಸರು ತನಿಖೆ ಮಾಡುತ್ತಿದ್ದಾರೆ.

More articles

Latest article