Thursday, April 11, 2024

ಬಾಳ್ತಿಲ: ನೂತನ ಗ್ರಾ.ಪಂ.ಅಧ್ಯಕ್ಷ ಅಣ್ಣು ಪೂಜಾರಿ ಬಿ.ಕೆ ಹಾಗೂ ಉಪಾಧ್ಯಕ್ಷೆ ರಂಜಿನಿ ಅವರ ಪದಗ್ರಹಣ ಸಮಾರಂಭ

ಬಂಟ್ವಾಳ: ಬಾಳ್ತಿಲ ಗ್ರಾ.ಪಂ.ನ ನೂತನ ಅಧ್ಯಕ್ಷ ಅಣ್ಣು ಪೂಜಾರಿ ಬಿ.ಕೆ. ಹಾಗೂ ಉಪಾಧ್ಯಕ್ಷೆ ರಂಜಿನಿ ಅವರ ಪದಗ್ರಹಣ ಸಮಾರಂಭ ಶುಕ್ರವಾರ ಬಾಳ್ತಿಲ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು.

ಜಿ.ಪಂ.ಮಾಜಿ ಸದಸ್ಯ ಚೆನ್ನಪ್ಪ ಆರ್.ಕೋಟ್ಯಾನ್ ಮಾತನಾಡಿ, ಸಾಕಷ್ಟು ಮಂದಿ ಬಾಳ್ತಿಲ ಪಂಚಾಯತ್ ಅಧ್ಯಕ್ಷರಾಗಿ ಆಡಳಿತ ನಡೆಸಿ ಗ್ರಾಮವನ್ನು ನಿಕಟಪೂರ್ವ ಅಧ್ಯಕ್ಷೆ ಹಿರಣ್ಮಯಿ ಅವರು ಗ್ರಾಮದ ಅಭಿವೃದ್ಧಿಯ ಜತೆಗೆ ಬಿಜೆಪಿಯ ಪ್ರತಿ ಕಾರ್ಯಕ್ರಮಗಳಲ್ಲೂ ಯಶಸ್ವಿಯಾಗಿ ಮುನ್ನಡೆಸಿದ ಕೀರ್ತಿ ಸಲ್ಲುತ್ತಿದ್ದು, ನಿಕಟಪೂರ್ವ ಉಪಾಧ್ಯಕ್ಷರು ಕೂಡ ಸಮರ್ಥವಾಗಿ ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ. ಸಂಘ, ಸಂಘಟನೆ, ಬಿಜೆಪಿ ಹೀಗೆ ಎಲ್ಲದಕ್ಕೂ ತನ್ನ ಮನೆಯನ್ನೇ ಸಮರ್ಪಿಸಿದ ಅಣ್ಣು ಪೂಜಾರಿಯವರ ಸೇವೆಯನ್ನು ಗುರುತಿಸಿ ಪಕ್ಷ ಅವರಿಗೆ ಅವಕಾಶ ನೀಡಿದೆ. ಶಾಸಕರು, ತಾಲೂಕು ಕಚೇರಿ, ಪಕ್ಷದ ಅಧ್ಯಕ್ಷರ ಜತೆ ಸಂಪರ್ಕವನ್ನಿರಿಸಿ ಗ್ರಾಮದ ಅಭಿವೃದ್ಧಿ ಸಹಕಾರ ನೀಡಬೇಕು ಎಂದರು.

ತಾ.ಪಂ.ಮಾಜಿ ಉಪಾಧ್ಯಕ್ಷ ದಿನೇಶ್ ಅಮ್ಟೂರು ಮಾತನಾಡಿ, ಸರಕಾರದ ಯೋಜನೆಗಳನ್ನು ಪ್ರಾಮಾಣಿಕವಾಗಿ ಗ್ರಾಮದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ಮಹತ್ತರ ಜವಾಬ್ದಾರಿ ಪಂಚಾಯತ್ ಆಡಳಿತದ ಮೇಲಿದ್ದು, ಅಣ್ಣು ಪೂಜಾರಿಯವರ ನೂತನ ತಂಡ ಅದನ್ನು ಯಶಸ್ವಿಯಾಗಿ ನಿರ್ವಹಿಸುತ್ತದೆ ಎಂಬ ವಿಶ್ವಾಸವಿದೆ. ಬಂಟ್ವಾಳ ಶಾಸಕರು ಕೋಟ್ಯಾಂತರ ಅನುದಾನ ನೀಡಿದ ಫಲವಾಗಿ ಬಾಳ್ತಿಲ ಗ್ರಾಮದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಅನುಷ್ಠಾನಗೊಂಡಿದ್ದು, ಈ ಅವಧಿಯಲ್ಲೂ ಅದು ಮುಂದುವರಿಯಲಿದೆ ಎಂದರು.

ಗ್ರಾಮಕ್ಕೆ ಯಾವುದೇ ಕಪ್ಪುಚುಕ್ಕೆ ಬಾರದ ರೀತಿಯಲ್ಲಿ ಅಭಿವೃದ್ಧಿಯ ದೃಷ್ಟಿಯಿಂದ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ನೂತನ ಅಧ್ಯಕ್ಷ ಅಣ್ಣು ಪೂಜಾರಿ ಅವರು ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.

ವೇದಿಕೆಯಲ್ಲಿ ಗ್ರಾ.ಪಂ.ನಿಕಟಪೂರ್ವ ಉಪಾಧ್ಯಕ್ಷೆ ಜ್ಯೋತಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂಧ್ಯಾ, ಕಾರ್ಯದರ್ಶಿ ಸುರೇಖಾ, ಗ್ರಾಮ ಆಡಳಿತ ಅಧಿಕಾರಿ ಯಶ್ವಿತಾ, ಗ್ರಾ.ಪಂ.ಮಾಜಿ ಅಧ್ಯಕ್ಷರಾದ ರಾಮಣ್ಣ ಶೆಟ್ಟಿ, ಯಮುನಾ, ಮರಾಠಿ ಸಮಾಜದ ಅಧ್ಯಕ್ಷ ಕೇಶವ ನಾಯ್ಕ್,

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಲೀಲಾವತಿ, ಆರೋಗ್ಯ ಸುರಕ್ಷಾಧಿಕಾರಿ ಸರಸ್ವತಿ, ಗ್ರಾ.ಪಂ.ಸದಸ್ಯರು, ಮಾಜಿ ಸದಸ್ಯರು ಮೊದಲಾದವರಿದ್ದರು.

ಗ್ರಾ.ಪಂ.ನಿಕಟಪೂರ್ವ ಅಧ್ಯಕ್ಷೆ ಹಿರಣ್ಮಯಿ ಸ್ವಾಗತಿಸಿದರು.‌ ಗ್ರಾ.ಪಂ.ಸದಸ್ಯ ವಿಠಲ ನಾಯ್ಕ್ ಕಾರ್ಯಕ್ರಮ ನಿರ್ವಹಿಸಿದರು.

More from the blog

ಲೋಕಸಭಾ ಚುನಾವಣೆಯ ಹಿನ್ನೆಲೆ : ಚಾರ್ಮಾಡಿಯ ಮೂವರು ಗಡಿಪಾರು

ಬೆಳ್ತಂಗಡಿ: ಚುನಾವಣ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಹಾಗೂ ಕೋಮು ಗಲಭೆಗಳಲ್ಲಿ ಭಾಗವಹಿಸುವ ಸಾಧ್ಯತೆ ಇರುವ ಕಾರಣ ಮೂವರು ರೌಡಿಶೀಟರ್‌ಗಳನ್ನು ಧರ್ಮಸ್ಥಳ ಪೊಲೀಸರು ಗಡಿಪಾರು ಮಾಡಿದ್ದಾರೆ. ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ನಿವಾಸಿಗಳಾದ...

ಹಿತೈಷಿ ತರಬೇತಿ ಕೇಂದ್ರದ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಫಲಿತಾಂಶದೊಂದಿಗೆ ತೇರ್ಗಡೆ

2023-24ನೇ ಸಾಲಿನ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಪಾಣೆಮಂಗಳೂರು, ನರಿಕೊಂಬುವಿನಲ್ಲಿರುವ ಹಿತೈಷಿ ತರಬೇತಿ ಕೇಂದ್ರದ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ. ಕು.ಕೀರ್ತನ ಶೇ.95.6% ಅಂಕಗಳೊಂದಿಗೆ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ ಎಂದು ಸಂಸ್ಥೆಯ ಪ್ರಕಟನೆಯಲ್ಲಿ ತಿಳಿಸಲಾಗಿದೆ. 2024-25ನೇ...

ಬಂಟ್ವಾಳದ ಉಳಿ ಗ್ರಾಮದಲ್ಲಿ ಮತದಾರರ ಮನೆಗೆ ಭೇಟಿ ನೀಡಿ ಮತಯಾಚನೆ ನಡೆಸಿದ ಶಾಸಕ ರಾಜೇಶ್ ನಾಯ್ಕ್

ಲೋಕ ಸಭಾ ಚುನಾವಣೆಯ ಹಿನ್ನಲೆಯಲ್ಲಿ ಕ್ಯಾ.ಬ್ರಿಜೇಶ್ ಚೌಟ ಅವರ ಗೆಲುವಿಗಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಗ್ರಾಮ,ಮನೆ,ಮನ ಅಭಿಯಾನದ ಅಂಗವಾಗಿ ಬಂಟ್ವಾಳದ ಉಳಿ ಗ್ರಾಮದಲ್ಲಿ ಮತದಾರರ ಮನೆಗೆ ಬೇಟಿ ನೀಡಿ...

ವಿಟ್ಲ ಕೇಂದ್ರ ಜುಮಾ ಮಸೀದಿ, ಈದುಲ್ ಫಿತರ್

ವಿಟ್ಲ; ವಿಟ್ಲ ಕೇಂದ್ರ ಜುಮಾ ಮಸೀದಿಯಲ್ಲಿ ಈದುಲ್ ಫಿತರ್ ನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಖತೀಬ್ ಮಹಮ್ಮದ್ ನಸೀಹ್ ದಾರಿಮಿ ಉಸ್ತಾದ್ ರವರು ಖುತುಬಾ ಹಾಗೂ ಈದ್ ನಮಾಝ್ ನಿರ್ವಹಿಸಿದರು. ಈದ್ ಸಂಸೇಶ ನೀಡಿದ ಖತೀಬರು "...