Sunday, October 22, 2023

ಬಡಗಕಜೆಕಾರು ಗ್ರಾಮ ಪಂಚಾಯತ್ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ, ಆಡಳಿತ ಬಿಜೆಪಿ ತೆಕ್ಕೆಗೆ

Must read

ಬಂಟ್ವಾಳ: ಬಂಟ್ವಾಳ ತಾ. ಬಡಗಕಜೆಕಾರು ಗ್ರಾಮ ಪಂಚಾಯತ್‌ನ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತರಾದ ದೇವದಾಸ ಅಬುರ ಮತ್ತು ಉಪಾಧ್ಯಕ್ಷರಾಗಿ ಸುಗಂಧಿ ಕೃಷ್ಣಪ್ಪ ಅವರು ಆಯ್ಕೆಯಾಗಿದ್ದು, ಈ ಬಾರಿ ಆಡಳಿತ ಬಿಜೆಪಿ ತೆಕ್ಕೆಗೆ ಜಾರಿದೆ.

ಬಡಗಕಜೆಕಾರು ಮತ್ತು ತೆಂಕಕಜೆಕಾರು ಗ್ರಾಮಗಳನ್ನೊಳಗೊಂಡ ಬಡಗಕಜೆಕಾರು ಗ್ರಾಮ ಪಂಚಾಯತ್‌ನಲ್ಲಿ ಒಟ್ಟು 12 ಸದಸ್ಯರಿದ್ದು, ತಲಾ ಐವರು ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿತ ಸದಸ್ಯರು ಮತ್ತು ಇಬ್ಬರು ಎಸ್‌ಡಿಪಿಐ ಬೆಂಬಲಿತರು. ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ಡೀಕಯ್ಯ ಬಂಗೇರ ಮತ್ತು ಬಿಜೆಪಿಯಿಂದ ದೇವದಾಸ ಅಬುರ ಸ್ಪರ್ಧಿಸಿದ್ದು, ತಲಾ ಆರು ಮತಗಳು ಪಡೆದಿದ್ದರು. ಬಳಿಕ ಚೀಟಿ ಎತ್ತುವಿಕೆಯಲ್ಲಿ ದೇವದಾಸ ಅಧ್ಯಕ್ಷರಾಗಿ ಆಯ್ಕೆಯಾದರು.

ಬಂಟ್ವಾಳ ಮೆಸ್ಕಾಂ ಸಹಾಯಕ ಅಭಿಯಂತರ ಪ್ರಶಾಂತ್ ಪೈ ಅವರು ಚುನಾವಣಾಧಿಕಾರಿಯಾಗಿ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಪಿಡಿಒ ದೇವಕಿ ಮತ್ತು ಸಿಬಂದಿಗಳು ಸಹಕರಿಸಿದರು.

More articles

Latest article