Wednesday, October 25, 2023

ಮಾರ್ನಬೈಲು ಮಾರಣ ಗುಳಿಗ ದೈವದ ಭಂಡಾರದ ಮನೆಯ ಚಂದ್ರಶೇಖರ್ ಗಟ್ಟಿ ನಿಧನ

Must read

ಬಂಟ್ವಾಳ: ಮಾರ್ನಬೈಲು ಮಾರಣ ಗುಳಿಗ ದೈವದ ಭಂಡಾರದ ಮನೆಯ ಚಂದ್ರಶೇಖರ್ ಗಟ್ಟಿ ಅವರು ಅಲ್ಪಕಾಲದ ಅಸೌಖ್ಯದಿಂದ ಆಸ್ಪತ್ರೆಯಲ್ಲಿ ಇಂದು ನಿಧನರಾಗಿದ್ದಾರೆ.

 

ಪಿತ್ತಜನಕಾಂಗದ ತೊಂದರೆಯಿಂದ ಬಳಲುತ್ತಿದ್ದ ಇವರು ಕಳೆದ ಕೆಲವು ದಿನಗಳಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು,ಇಂದು ಚಿಕಿತ್ಸೆಗೆ ಸ್ಪಂದಿಸಿದೆ ನಿಧನರಾಗಿದ್ದಾರೆ.

ಇವರು ಮಾರಣಗುಳಿಗ ದೈವದ ಸಮತಿಯ ಮಾಜಿ ಅಧ್ಯಕ್ಷರಾಗಿ ,ಕಾರ್ಯದರ್ಶಿಯಾಗಿ ಹಲವು ವರ್ಷಗಳ ಕಾಲ ನಿಷ್ಠಾವಂತರಾಗಿ ಸೇವೆ ಸಲ್ಲಿಸಿದ್ದಾರೆ.

ಮೃತರು ಪತ್ನಿ ಮತ್ತು ಎರಡು ಮಕ್ಕಳ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

More articles

Latest article