Friday, October 27, 2023

ಅಡಿಕೆ ಬೆಳೆಗಾರರಿಗೆ ಗುಡ್‌ ನ್ಯೂಸ್‌ : 500ರ ಗಡಿಯತ್ತ ಅಡಿಕೆ ಧಾರಣೆ

Must read

ಮಂಗಳೂರು: ಅಡಿಕೆ ಧಾರಣೆ ಏರುಗತಿಯಲ್ಲಿ ಸಾಗುತ್ತಿದ್ದು, 500ರ ಗಡಿ ಸಮೀಪಿಸುತ್ತಿದೆ. ಉತ್ತಮ ದರ ಸಿಗುತ್ತಿರುವ ಕಾರಣ ಬೆಳೆಗಾರರು ಮಂದಹಾಸ ಬೀರುತ್ತಿದ್ದಾರೆ.

3 ತಿಂಗಳಿನಿಂದ ಅಡಿಕೆ ಧಾರಣೆಯಲ್ಲಿ ಏರಿಕೆಯಾಗುತ್ತಲೇ ಇದೆ. ಪ್ರಸ್ತುತ ಮಂಗಳೂರು ಚಾಲಿ ಹೊಸ ಅಡಿಕೆ ದರ ಕೆ.ಜಿ.ಗೆ 447 ರೂ ಇದ್ದು, ಹಳೆ ಅಡಿಕೆ ಧಾರಣೆ ಕೆ.ಜಿ.ಗೆ 485 ರೂ ರಿಂದ 487 ರೂ. ಇದೆ. ಕಳೆದ ಬಾರಿ ಕೆ.ಜಿ.ಗೆ 370ರೂ. ಇದ್ದ ದರ ಪ್ರಸ್ತುತ 487 ರೂ. ಇದ್ದು, 80 ರೂ. ಏರಿಕೆ ಕಂಡಿದೆ. ಇನ್ನುಳಿದಂತೆ ಪಟೋರ ಅಡಿಕೆ ಕೆ.ಜಿ.ಗೆ 400 ರೂ. ದರ ಇದ್ದು, ಕರಿಗೋಟು ದರ ಕೆ.ಜಿ.ಗೆ 340 ರೂ., ಚೆಪ್ಪುಗೋಟು 325 ರೂ.– 330 ರೂ. ಇದೆ.

ಕ್ಯಾಂಪ್ಕೊದಲ್ಲಿ ಪ್ರಸ್ತುತ ಹಳೆ ಅಡಿಕೆ ಕ್ವಿಂಟಲ್‌ಗೆ 43,500 ರೂ. ರಿಂದ 47,000 ರೂ. ದರ ಇದ್ದು, ಹೊಸ ಅಡಿಕೆಗೆ 30 ಸಾವಿರದಿಂದ 45 ಸಾವಿರ ಇದೆ. ಕೋಕಂಗೆ ಕ್ವಿಂಟಲ್‌ಗೆ 23 ಸಾವಿರದಿಂದ 31 ಸಾವಿರ ಇದೆ. ಕಳೆದ ವರ್ಷ ಮಂಗಳೂರು ಎಪಿಎಂಸಿಯಲ್ಲಿ ಒಟ್ಟು 1 ಲಕ್ಷದ 76 ಸಾವಿರದ 7 ಕ್ವಿಂಟಲ್‌ ಅಡಿಕೆ ವಹಿವಾಟು ನಡೆದಿದೆ. ಈ ವರ್ಷ ಏಪ್ರಿಲ್‌ನಲ್ಲಿ 15,678 ಕ್ವಿಂ., ಮೇನಲ್ಲಿ 22,131 ಕ್ವಿಂ., ಜೂನ್‌ನಲ್ಲಿ 19,009 ಕ್ವಿಂ. ಹಾಗೂ ಜುಲೈನಲ್ಲಿ 13,958 ಕ್ವಿಂಟಲ್‌ ವಹಿವಾಟು ನಡೆದಿದೆ.

 

More articles

Latest article