Thursday, October 26, 2023

ಸ್ಕೂಟರ್‌ – ಕಾರು ಮುಖಾಮುಖಿ ಡಿಕ್ಕಿ : ಸ್ಕೂಟರ್ ಸವರನಿಗೆ ಗಾಯ

Must read

ಸ್ಕೂಟರ್‌ ಮತ್ತು ಕಾರುಗಳ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಬಂಟ್ವಾಳ ತಾಲೂಕು ಸಜೀಪಮುನ್ನೂರು ಗ್ರಾಮದಲ್ಲಿ ನಡೆದಿದೆ.

ಅಬೂಬಕ್ಕರ್ ಕೋಡಿಜಾಲ್ ಎಂಬವರು ಗಾಯಗೊಂಡ ಸ್ಕೂಟರ್ ಸವಾರರಾಗಿದ್ದು, ಅವರು ಸ್ಕೂಟರ್ ನಲ್ಲಿ ಸಂಜೆವೇಳೆ ಮೆಲ್ಕಾರ್ ನಿಂದ ಬರುತ್ತಿದ್ದ ವೇಳೆ ಕಂದೂರು ಎಂಬಲ್ಲಿ ಈಅಪಘಾತ ನಡೆದಿದೆ‌

ಅಬೂಬಕ್ಕರ್ ಕೋಡಿಜಾಲ್ ಅವರು ನರಿಕೊಂಬು ‌ಎಂಬಲ್ಲಿ ಅಡಿಕೆ ತೋಟವೊಂದರ ಅಡಿಕೆಯ ವ್ಯವಹಾರ ಕುದುರಿಸಿದ್ದು, ಅಲ್ಲಿ ಹೋಗಿಬರುತ್ತಿದ್ದ ವೇಳೆ ಬಂಟ್ವಾಳ ತಾಲೂಕಿನ ಸಜೀಪಮುನ್ನೂರು ಗ್ರಾಮದ ಕಂದೂರು ಎಂಬಲ್ಲಿಗೆ ತಲುಪುತ್ತಿದ್ದಂತೆ ಮುಡಿಪು ಕಡೆಯಿಂದ ನಿರ್ಲಕ್ಷ್ಯತನದಿಂದ ಅತೀ ವೇಗದಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಕೂಟರ್ ಸವಾರ ಅಬೂಬಕ್ಕರ್ ಕೋಡಿಜಾಲ್ ರವರಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ

More articles

Latest article