Sunday, October 22, 2023

ಸುಬ್ರಹ್ಮಣ್ಯ ಪಂಚಾಯತ್ ಗೆ ಬೇಟಿ ನೀಡಿದ ದ .ಕ. ಜಿ.ಪಂ ಉಪಕಾರ್ಯದರ್ಶಿ ರಘು. ಎ.ಇ.!! ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ ತೆರಿಗೆ ಬಾಕಿ ಬಗ್ಗೆ ಪ್ರಸ್ತಾಪ!! ದ .ಕ. ಜಿ.ಪಂ ಉಪಕಾರ್ಯದರ್ಶಿ ರಘು. ಎ.ಇ ಅವರಿಂದ ಭರವಸೆ!!

Must read

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ ಪಂಚಾಯತ್ ಗೆ ಭಾರೀ ಪ್ರಮಾಣದಲ್ಲಿ ತೆರಿಗೆ ಬಾಕಿಯಾಗಿರುವುದರ ಬಗ್ಗೆ
ಹಾಗೂ ಸುಬ್ರಹ್ಮಣ್ಯ ರಥಬೀದಿಯಲ್ಲಿ ವಾಣಿಜ್ಯ ಕಟ್ಟಡ ಹಿಂದೆ ಇದ್ದ ಗ್ರಾಮಪಂಚಾಯತ್ ಕಚೇರಿ ಕಟ್ಟಡವನ್ನು ಮಾಸ್ಟರ್ ಪ್ಲಾನ್ ಕಾಮಗಾರಿಗೆ ತೆರವು ಮಾಡಿದ್ದು ಇದರ ಬಾಬ್ತು ಪರಿಹಾರ ಹಣ ಪುತ್ತೂರು ಉಪವಿಭಾಗಧಿಕಾರಿ ಕಚೇರಿಗೆ ಹೋಗಿದ್ದು ಇನ್ನು ಸುಬ್ರಹ್ಮಣ್ಯ ಗ್ರಾಮಪಂಚಾಯಿತಿ ಖಾತೆಗೆ ಜಮ ಆಗದೆ ಅಭಿವೃದ್ದಿ ಕೆಲಸಗಳನ್ನು ಸಮರ್ಪಕವಾಗಿ ನಿರ್ವಹಿಸಲಾಹದೆ ಅಭಿವೃದ್ದಿ ಕುಂಟಿತವಾಗಿದೆ ಎಂದು ಪ್ರಸ್ತಾಪಿಸಿದ ಗ್ರಾಮಪಂಚಾಯಿತ್ ಉಪಾಧ್ಯಕ್ಷ ವೆಂಕಟೇಶ್ ಎಚ್.ಎಲ್.ಹಾಗೂ ಮಾಜೀ ಉಪಾಧ್ಯಕ್ಷ ಅಗ್ರಹಾರ ನಾರಾಯಣ.

ಗ್ರಾಮದ ಅಭಿವೃದ್ಧಿ ದೃಷ್ಟಿ ಯಿಂದ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ದ.ಕ ಜಿಲ್ಲಾ ಪಂಚಾಯತ್ ದ.ಕ ಜಿ.ಪಂ ಉಪಕಾರ್ಯದರ್ಶಿ ರಘು. ಎ.ಇ.ಅವರಿಗೆ ಮನವಿಯನ್ನು ಮಾಡಿದರು.

ಸುಬ್ರಹ್ಮಣ್ಯ ಪಂಚಾಯತ್ ಗೆ ದ .ಕ. ಜಿ.ಪಂ ಉಪಕಾರ್ಯದರ್ಶಿ ರಘು. ಎ.ಇ ಬೇಟಿ ನೀಡಿದ ಸಂದರ್ಭದಲ್ಲಿ ಕಡತಗಳನ್ನು ಪರಿಶೀಲನೆ ನಡೆಸಿ ತಕ್ಷಣ ಈ ನಿಟ್ಟಿನಲ್ಲಿ ಅಧಿಕಾರಿಗಳ ಜೊತೆ ಚರ್ಚಿಸಿ ಪರಿಹರಿಸುತ್ತೇನೆ ಎಂದು ಭರವಸೆ ನೀಡಿದರು ಎಂದು ತಿಳಿದು ಬಂದಿದೆ.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆಕಾಶ್. ಕೆ, ಗ್ರಾಮ ಪಂಚಾಯತ್ ಕಾರ್ಯದರ್ಶಿ ಮೋನಪ್ಪ. ಡಿ, ಮಾಜೀ ಗ್ರಾಮಪಂಚಾಯಿತಿ ಅಧ್ಯಕ್ಷರಾದ ಲಲಿತಾ ಗುಂಡಡ್ಕ, ಉಪಸ್ಥಿತರಿದ್ದರು.

More articles

Latest article