Monday, April 8, 2024

ಆ.20 ರಂದು ವಿವೇಕ ಜಾಗ್ರತ ಬಳಗಗಳು ಮಧ್ಯವಲಯ -3 ಇದರ ಯೋಗ ಪರ್ಯಟನ ಕಾರ್ಯಕ್ರಮ

ವಿವೇಕ ಜಾಗ್ರತ ಬಳಗಗಳು ಮಧ್ಯವಲಯ -3 ಬಂಟ್ವಾಳ, ಮೂಡಬಿದ್ರೆ, ಬೆಳ್ತಂಗಡಿ (ಡಿವೈನ್ ಪಾರ್ಕ್‌ ಟ್ರಸ್ಟ್ (ರಿ.) ಸಾಲಿಗ್ರಾಮ, ಇದರ ಅಂಗಸಂಸ್ಥೆಗಳು) ಯೋಗ ಪರ್ಯಟನ ಕಾರ್ಯಕ್ರಮ ಆ.20 ರಂದು ಬೆಳಿಗ್ಗೆ 11 ಗಂಟೆಗೆ ಲಯನ್ಸ್‌ ಸಭಾ ಭವನದಲ್ಲಿ ನಡೆಯಲಿದೆ.

ದಿವ್ಯ ಉಪಸ್ಥಿತಿಯನ್ನ ಡಾ.ವಿವೇಕ ಉಡುಪ, BNYS, MD (YOGA & REHAB) MD & CEO, ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಪ್ರತಿಷ್ಠಾನ, ಯೋಗಬನ, ಮೂಡುಗಿಳಿಯಾರು, ಕೋಟ ಇವರು ವಹಿಸಲಿದ್ದಾರೆ.

ಸರ್ವ ದೇವದೇವಿಯರ ನೆಲೆಯಾದ ಉಡುಪಿ ಜಿಲ್ಲೆಯ ಸಾಲಿಗ್ರಾಮದಲ್ಲಿರುವ ಡಿವೈನ್ ಪಾರ್ಕ್, ಅಂದಿನ ವೀರವೇದಾಂತಿ ಸ್ವಾಮಿ ವಿವೇಕಾನಂದರು, ಜಾಗೃತ ಚೇತನರಾಗಿ ಶ್ರೀ ಗುರೂಜಿ ಆಗಿಯೇ ನಿರ್ದೇಶಿಸಿ, ಕಟ್ಟಿಸಿಕೊಂಡ ಅವರ ವಿಶೇಷ ಆಧ್ಯಾತ್ಮಿಕ ಪ್ರಯೋಗ ಶಾಲೆ, ಕಳೆದ 38 ವರ್ಷಗಳಿಂದಲೂ ಈ ಕ್ಷೇತ್ರವು ಅವರ ದಿವ್ಯ ಲೀಲಾಕ್ಷೇತ್ರವಾಗಿ, ಜಗದಗಲ ಹಬ್ಬಿದ ನೂರಾರು ವಿವೇಕ ಜಾಗ್ರತ ಬಳಗಗಳ ಮೂಲಕ ವ್ಯಕ್ತಿತ್ವ ನಿರ್ಮಾಣ ಹಾಗೂ ಲೋಕೋದ್ಧಾರದ ಪವಿತ್ರ ಗುರಿಗಳತ್ತ ಸದ್ದಿಲ್ಲದೆ, ಅತ್ಯದ್ಭುತ ರೀತಿಯಲ್ಲಿ ದುಡಿಯುತ್ತಲೇ ಬಂದಿದೆ.

ಮುದ್ರಣ ಮಾಧ್ಯಮದಲ್ಲಿ ಕರ್ನಾಟಕದ ನಂ.1 ಆಧ್ಯಾತ್ಮಿಕ ಚಾತುರ್ಮಾಸಿಕವಾದ ‘ವಿವೇಕ ಸಂಪದ’ವೂ, ಆಂಗ್ಲ ಅರ್ಧವಾರ್ಷಿಕ ‘ವಿವೇಕ ವೀಣಾ’ವೂ, ಐದು ಭಾಷೆಗಳಲ್ಲಿನ ‘ವಿವೇಕ ಕಿರಣ’ ತ್ರೈಮಾಸಿಕವೂ, ಒಂದು ನಿಮಿಷದ ಕನ್ನಡ ಹಾಗೂ ಆಂಗ್ಲ ಸಂತವಾಣಿ (V3ಮತ್ತು V2)ಗಳೆಲ್ಲವೂ ಅನುಷ್ಠಾನ ವೇದಾಂತದ ವೀರಕಹಳೆಗಳೇ ಆಗಿವೆ.

ಈ ಆಧ್ಯಾತ್ಮಿಕ ಕ್ಷೇತ್ರದ ಸಂಘಟನಾತ್ಮಕ ವಿನೂತನ “ಯೋಗ ಪರ್ಯಟನ” ಕಾರ್ಯಕ್ರಮಕ್ಕೆ ಅತ್ಯಾದರದಿಂದಲೇ ಆಹ್ವಾನಿಸುತ್ತಿದ್ದೇವೆ ಎಂದು ವಿವೇಕ ಜಾಗ್ರತ ಬಳಗಗಳು, ಬಂಟ್ವಾಳ, ಮೂಡಬಿದ್ರೆ, ಬೆಳ್ತಂಗಡಿ ಇದರ ಅಧ್ಯಕ್ಷರು ಮತ್ತು ಸರ್ವಸದಸ್ಯರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

 

 

More from the blog

ವಿಶ್ವ ಹಿಂದೂ ಪರಿಷತ್, ಭಜರಂಗದಳ ಬಂಟ್ವಾಳ ಪ್ರಖಂಡ ವತಿಯಿಂದ “ನಮ್ಮನಡೆ ಪೊಳಲಿ ದೇವಸ್ಥಾನದ ಕಡೆ” ಬೃಹತ್ ಪಾದಯಾತ್ರೆ

ಬಂಟ್ವಾಳ: ವಿಶ್ವ ಹಿಂದೂ ಪರಿಷತ್,ಭಜರಂಗದಳ ಬಂಟ್ವಾಳ ಪ್ರಖಂಡ ವತಿಯಿಂದ ಲೋಕಕಲ್ಯಾಣಾರ್ಥವಾಗಿ "ನಮ್ಮನಡೆ ಪೊಳಲಿ ದೇವಸ್ಥಾನದ ಕಡೆ" ಬೃಹತ್ ಪಾದಯಾತ್ರೆಯು ಭಾನುವಾರ ಮುಂಜಾನೆ ನಡೆಯಿತು. ಬೆಳಗ್ಗಿನ ಜಾವ‌ 5.30 ರ ವೇಳೆಗೆ ಕಡೆಗೋಳಿ ಪೊಳಲಿ ದ್ವಾರ,...

ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಶ್ರಮಿಸಿದ ಸ್ವಯಂಸೇವಕರಿಗೆ ಕೃತಜ್ಞತಾ ಸಭೆ

ಬಂಟ್ವಾಳ: ದೇವಸ್ಥಾನದ ನಿರ್ಮಾಣ ಮಾಡಿದರೆ,ಸಾಲದು ಅದರ ಪ್ರಭಾವ ಇನ್ನಷ್ಟು ಬೆಳಗಬೇಕಾದರೆ ಭಕ್ತರು ಕ್ಷೇತ್ರಕ್ಕೆ ಬಂದು ದೇವರ ದರ್ಶನ ಮಾಡಬೇಕಾಗಿದೆ ಎಂದು ಶ್ರೀ ಧಾಮ ಮಾಣಿಲ ಕ್ಷೇತ್ರದ ಯೋಗಿ ಕೌಸ್ತುಭ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ...

ಪ್ರಶಾಂತ್ ಪುಂಜಾಲಕಟ್ಟೆ ಅವರಿಗೆ ಪಿತೃ ವಿಯೋಗ

ಬಂಟ್ವಾಳ: ನಮ್ಮ ಬಂಟ್ವಾಳ ಸಮೂಹ ಸಂಸ್ಥೆಯ ಮಾಲಕರಾದ ಪ್ರಶಾಂತ್ ಪುಂಜಾಲಕಟ್ಟೆ ಅವರ ತೀರ್ಥರೂಪರು, ಕುಕ್ಕಳ ಗ್ರಾಮದ ಪುಂಜಾಲಕಟ್ಟೆ ನಿವಾಸಿ ಸಂಜೀವ ಪೂಜಾರಿ( 83) ಅವರು ಅಲ್ಪಕಾಲದ ಅಸೌಖ್ಯದಿಂದ ಎ.6ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ...

ಬಂಟ್ವಾಳ: ನಿಯಮ ಮೀರಿ ಚಾಲನೆ ಮಾಡಿ ಪೋಲೀಸರ ಕೈಗೆ ಸಿಕ್ಕಿಬಿದ್ದರೆ ದಂಡ ಗ್ಯಾರಂಟಿ….

ಬಂಟ್ವಾಳ: ರಸ್ತೆಯಲ್ಲಿ ಟ್ರಾಫಿಕ್ ಪೋಲೀಸರು ದಂಡ ವಸೂಲಿ ಮಾಡುವ ವೇಳೆ ಸುಳ್ಳು ಹೇಳಿಬಚಾವಾಗಲು ಸಾಧ್ಯವಿಲ್ಲ, ಜೊತೆಗೆ ಅಸಭ್ಯ ವರ್ತನೆ ಮಾಡಿದರೆ ಜೋಕೆ, ಅವರ ಶರೀರದಲ್ಲಿ ಕಣ್ಗಾವಲು ಕ್ಯಾಮರಾ ಅಳವಡಿಸಿಲಾಗಿದ್ದು, ಸೂಕ್ಷ್ಮವಾಗಿ ಎಲ್ಲವನ್ನು ಸೆರೆ...