Monday, April 22, 2024

ವಿಠಲ್ ಜೇಸೀಸ್ ಶಾಲೆಯಲ್ಲಿ ಪೋಷಕರ ಸಭೆ

ವಿಟ್ಲ: ವಿಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 2023-24ನೇ ಸಾಲಿನ ಶೈಕ್ಷಣಿಕ ವರ್ಷದ ಪೋಷಕರ ಸಭೆ ಹಾಗೂ ಶಾಲಾ ಸಭಾಂಗಣ ಜೇಸಿ ಪೆವಿಲಿಯನ್ ನ ನೂತನ ವೇದಿಕೆಯ ಉದ್ಘಾಟನೆ ಕಾರ್ಯಕ್ರಮ ನೆರವೇರಿತು.ಶಿಶುವಿಹಾರ, ನರ್ಸರಿ,ಪೂರ್ವ ಪ್ರಾರ್ಥಮಿಕ, ಪ್ರಾರ್ಥಮಿಕ ಮತ್ತು ಪ್ರೌಢಶಾಲಾ ವಿಭಾಗಗಳಾಗಿ ಸಭೆಯನ್ನು ನಡೆಸಲಾಯಿತು.

ಶಿಶುವಿಹಾರ, ನರ್ಸರಿ ಮತ್ತು ಪೂರ್ವ ಪ್ರಾಥಮಿಕ ವಿಭಾಗದ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮನಶಾಸ್ತ್ರಜ್ಞರಾದ ಅಕ್ಷತಾ ರವರು ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರ ಹಾಗೂ ಪೋಷಕರ ಪಾತ್ರದ ಬಗ್ಗೆ ವಿವರಿಸಿದ್ದರು. ಲೀಡ್ ಶೈಕ್ಷಣಿಕ ಸಲಹೆಗಾರರಾದ ಮಹಮ್ಮದ್ ನಾಸಿರ್ ಪೋಷಕರಿಂದ ಬಂದ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಪರಿಹಾರ ಸೂಚಿಸಿದರು.
ಪ್ರಾಥಮಿಕ ವಿಭಾಗದ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪ್ರವಚನಕಾರ, ಆಧ್ಯಾತ್ಮಿಕ ಚಿಂತಕ ಕಿರಣ್ ಕುಮಾರ್ ಪಡು ಪಣಂಬೂರುರವರು ಮಾತನಾಡಿ, ಮಗು ಭವಿಷ್ಯದಲ್ಲಿ ಏನು ಆಗಬೇಕು ಎಂಬ ತೀರ್ಮಾನ ಪೋಷಕರ ಕೈಯಲ್ಲಿದೆ,ಮಕ್ಕಳು ಧರ್ಮದ ಮಾರ್ಗದಲ್ಲಿ ಮುಂದುವರೆದು ಜೀವನ ಯಶಸ್ವಿಯಾಗುವಂತೆ ಪ್ರೇರೇಪಿಸಬೇಕಾಗಿದೆ. ಮಕ್ಕಳು ಹದಿಹರೆಯದವರಾದ್ದರಿಂದ ಪೋಷಕರು ಅತ್ಯಂತ ತಾಳ್ಮೆ ಹೊಂದಿಸಿಕೊಂಡು ತಮ್ಮ ಮಕ್ಕಳೊಂದಿಗೆ ವ್ಯವಹರಿಸಬೇಕು, ವಿವೇಕವಿಲ್ಲದ ವಿದ್ಯೆ ವಿನಾಶಕ್ಕೆ ಕಾರಣ ಆದುದರಿಂದ ವಿದ್ಯೆ ಜೊತೆಗೆ ವಿವೇಕವನ್ನು ಬೆಳೆಸಿ, ಶುದ್ಧ ಮನಸ್ಸು ಮತ್ತು ಜ್ಞಾನವನ್ನು ಗಟ್ಟಿಗೊಳಿಸುತ್ತಾ ಹೋಗುವಂತೆ ದಾರಿ ತೋರಬೇಕು ಎಂದರು.

ಸಭಾ ವೇದಿಕೆಯಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರಾದ ಎಲ್ ಎನ್ ಕೂಡೂರುರವರು ಹೆತ್ತವರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಉತ್ತಮ ಶಿಕ್ಷಣ ನೀಡುತ್ತಿರುವ ಶಿಕ್ಷಣ ಸಂಸ್ಥೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು, ಸಂಸ್ಥೆಯು ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯ ರೂಡಿಸಿಕೊಂಡು,ಪ್ರತಿ ಮಗುವಿನ ಬಗ್ಗೆ ಕಾಳಜಿ ವಹಿಸುವುದಾಗಿ ಸಂತಸ ವ್ಯಕ್ತಪಡಿಸಿದರು.
ಉಪಾಧ್ಯಕ್ಷರಾದ ಶ್ರೀ ಶ್ರೀಧರ್ ಶೆಟ್ಟಿ, ಕಾರ್ಯದರ್ಶಿಗಳಾದ ಪ್ರಭಾಕರ್ ಶೆಟ್ಟಿ, ಜೊತೆ ಕಾರ್ಯದರ್ಶಿ ಶ್ರೀ ಪ್ರಕಾಶ್, ಹಿರಿಯ ನಿರ್ದೇಶಕರಾದ ಶ್ರೀ ಮೋನಪ್ಪ ಶೆಟ್ಟಿ, ಆಡಳಿತಾಧಿಕಾರಿ ಶ್ರೀ ರಾಧಾಕೃಷ್ಣ ಎ ಮತ್ತು ಉಪಪ್ರಾಂಶುಪಾಲೆ ಶ್ರೀಮತಿ ಜ್ಯೋತಿ ಶೆಣೈ ಉಪಸ್ಥಿತರಿದ್ದರು.

ಸಭೆಗಳಲ್ಲಿ ಕ್ರಮವಾಗಿ ಪ್ರಾರ್ಥನೆಯನ್ನು ಶಿಕ್ಷಕಿ ರಶ್ಮಿ ಕೆ ಎನ್, ಶಿಕ್ಷಕಿ ಪ್ರಶಾಂತಿ,ಸಹಶಿಕ್ಷಕಿ ತೇಜಸ್ವಿನಿ ನೆರವೇರಿಸಿ, ಸ್ವಾಗತ ಮತ್ತು ಪ್ರಾಸ್ತವಿಕತೆಯನ್ನು ಕ್ರಮವಾಗಿ ಪ್ರಾಂಶುಪಾಲರಾದ ಜಯರಾಮ ರೈ ಯವರು, ಶಿಕ್ಷಕಿಯಾದ ಶಶಿಕಲಾ, ಶಿಕ್ಷಕಿಯಾದ ಸರಸ್ವತಿಯವರು ನೆರವೇರಿಸಿದರು. ಮೂರು ವಿಭಾಗಗಳಲ್ಲಿ ಪೋಷಕರಿಗೆ ಸೂಕ್ತ ಸಲಹೆ ಸೂಚನೆಗಳನ್ನು ಶಿಕ್ಷಕಿಯರಾದ ರೂಪ, ಪವಿತ್ರ, ದೀಪ್ತಿ ಮತ್ತು ನಯನಾಕ್ಷಿ ಪೋಷಕರಿಗೆ ವಿದ್ಯಾರ್ಥಿಗಳು ಶಾಲೆಯಲ್ಲಿ ಪಾಲಿಸಬೇಕಾದ ನಿಯಮಗಳ ಬಗ್ಗೆ ವಿವರಿಸಿದರು. ವಂದನಾರ್ಪಣೆಯನ್ನು ಶಿಕ್ಷಕಿ ವಿದ್ಯಾಶ್ರೀ ನಿರ್ವಹಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕಿಯರಾದ ದೇವಿಕಾ ಪ್ರವೀಣ್, ರಶ್ಮಿ ಕೆ, ಸೀಮಾ ಸಲ್ದಾನ ರವರು ನಡೆಸಿಕೊಟ್ಟರು.
ಹಿರಿಯ ಶಿಕ್ಷಕಿ ಐಡಾ ಲಸ್ರದೋ, ಪಾಕಪ್ರವೀಣ ವಿಜಯ ಭಟ್ ಬಳಗದವರು ಸಹಕರಿಸಿದರು .

More from the blog

ಅಕ್ರಮವಾಗಿ ಶ್ರೀಗಂಧ ತುಂಡುಗಳ ಸಾಗಾಟ : ಆರೋಪಿ ವಶಕ್ಕೆ

ಅಕ್ರಮವಾಗಿ ಶ್ರೀಗಂಧದ ಕೊರಡುಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಪೊಲೀಸರು ಅರೋಪಿ ಮತ್ತು ಸೊತ್ತನ್ನು ವಶಕ್ಕೆ ಪಡೆದ ಘಟನೆ ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಕಣಿಯಾರು ಎಂಬಲ್ಲಿ ನಡೆದಿದೆ. ಮಾನ್ಯ ಪೊಲೀಸ್ ಉಪ...

ನೇಹಾ ಕೊಲೆ ಪ್ರಕರಣ ಸಿಐಡಿ ತನಿಖೆಗೆ

ಹುಬ್ಬಳ್ಳಿಯ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ ಪ್ರಕರಣದ ತನಿಖೆಯನ್ನು ಅಪರಾಧ ತನಿಖಾ ಇಲಾಖೆಗೆ ವಹಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೃತ ವಿದ್ಯಾರ್ಥಿನಿ ನೇಹಾ...

ಎಲ್ಲರನ್ನು ಜೊತೆಗೆ ಕೊಂಡೊಯ್ಯುವ ಪದ್ಮರಾಜ್ ಆರ್. ಪೂಜಾರಿ ಸಮುದ್ರವಿದ್ದಂತೆ: ನಿಕೇತ್ ರಾಜ್ ಮೌರ್ಯ

ಮಂಗಳೂರು: ಪದ್ಮರಾಜ್ ಅವರ ಹಿಂದೆ ಎಲ್ಲಾ ವರ್ಗದ ಜನರೂ ಇದ್ದಾರೆ. ಹಾಗಾಗಿ ಎಲ್ಲಾ ನದಿಗಳು ಸೇರಿ ಸಮುದ್ರವಾದಂತೆ ಪದ್ಮರಾಜ್ ಆರ್. ಪೂಜಾರಿ. ಅವರನ್ನು ಮನೆಮನೆಗೆ ತಲುಪಿಸಿ, ಗೆಲ್ಲಿಸಬೇಕು ಎಂದು ಕೆಪಿಸಿಸಿ ವಕ್ತಾರ ನಿಕೇತ್...

ವಿಟ್ಲ ಪಟ್ಟಣ ಪಂಚಾಯತ್ 2ನೇ ವಾರ್ಡ್ ನಲ್ಲಿ ನೀರಿಗಾಗಿ ಹಾಹಾಕಾರ : ಬೋರ್ ವೆಲ್ ಇದ್ದರೂ ಪಂಪ್ ಅಳವಡಿಸದ ಪಂಚಾಯತ್ : ಮತದಾನ ಬಹಿಷ್ಕಾರಕ್ಕೆ ಸಿದ್ಧತೆ

ವಿಟ್ಲ: ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 2ನೇ ವಾರ್ಡ್ ಪೊನ್ನೊಟ್ಟು ಪರಿಸರದಲ್ಲಿ ಕುಡಿಯುವ ನೀರಿಗಾಗಿ ಜನರು ಪರದಾಟ ನಡೆಸುತ್ತಿದ್ದು, ರಸ್ತೆಯಲ್ಲಿ ಕೊಳವೆ ಬಾವಿ ಇದ್ದರೂ ಇದುವರೆಗೂ ಪಂಚಾಯತ್ ಪಂಪ್ ಅಳವಡಿಸದೇ ನಿರ್ಲಕ್ಷ್ಯ ವಹಿಸಿದೆ...