Wednesday, October 18, 2023

ಆ. 20ರಂದು ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ಧ್ವಜಸ್ತಂಭ ಸ್ವೀಕಾರ ಹಾಗೂ ದೇವಸ್ಥಾನದ ವೆಬ್ ಸೈಟ್ ಅನಾವರಣ ಸಮಾರಂಭ

Must read

ಬಂಟ್ವಾಳ: ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ದಾರು ಶಿಲ್ಪಿಗಳಿಂದ ಧ್ವಜಸ್ತಂಭ(ಕೊಡಿಮರ) ಸ್ವೀಕಾರ ಹಾಗೂ ದೇವಸ್ಥಾನದ ವೆಬ್ ಸೈಟ್ ಅನಾವರಣ ಸಮಾರಂಭ ಆ. 20ರಂದು ನಡೆಯಲಿದೆ.

ಸಂಜೆ ೩ಕ್ಕೆ ಮುಂಬಯಿ ಹೇರಂಭ ಇಂಡಸ್ಟ್ರೀಸ್ ಲಿ.ನ ಚೇರ್ ಮೆನ್ ಸದಾಶಿವ ಶೆಟ್ಟಿ ಕೂಳೂರು ಕನ್ಯಾನ ಅವರು ಸಮಾರಂಭ ಉದ್ಘಾಟಿಸಿ ಬ್ರಹ್ಮಕಲಶ ಸಿದ್ಧತೆಗೆ ಉಭಯ ಗ್ರಾಮಗಳ ಭಕ್ತರಿಗೆ ವೀಳ್ಯ ನೀಡಲಿದ್ದಾರೆ.

ಪುತ್ತೂರಿನ ಮೂಕಾಂಬಿಕಾ ಗ್ಯಾಸ್ ಏಜೆನ್ಸೀಸ್ ನ ಮಾಲಕ ಸಂಜೀವ ಆಳ್ವ ಪಡ್ಡಾಯಿಬೆಟ್ಟು, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಗುರುಕೃಪಾ, ಉಪಾಧ್ಯಕ್ಷ ಭುವನೇಶ್ ಪಚ್ಚಿನಡ್ಕ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಮಾರಂಭದ ಪ್ರಾರಂಭದಲ್ಲಿ ಮಧ್ಯಾಹ್ನ ೨ಕ್ಕೆ ಅಜಿಲಮೊಗರು ಯಕ್ಷಚಿಗುರು ಕಲಾತಂಡ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಶ್ರೀಕೃಷ್ಣ ಲೀಲೆ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಆ. ೩೦ರಂದು ಧ್ವಜಸ್ತಂಭದ ತೈಲಾಧಿವಾಸ ಕಾರ್ಯಕ್ರಮ ಜರಗಲಿದೆ ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಂ.ಎಸ್.ಶೆಟ್ಟಿ ಸರಪಾಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

More articles

Latest article