ದ.ಕ ಜಿಲ್ಲಾ ಆದಿದ್ರಾವಿಡ ಸಮಾಜ ಸೇವಾ ಸಂಘ (ರಿ) S.74. ಬಂಟ್ವಾಳ ತಾಲೂಕು ಘಟಕದ ವತಿಯಿಂದ 77ನೇ ಸ್ವಸಂತ್ರ ದಿನಾಚರಣೆಯ ಅಂಗವಾಗಿ ಪರಿಶಿಷ್ಟ ಜಾತಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯ ಪಾಣೆಮಂಗಳೂರು. ಮತ್ತು ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರ್ ವಸತಿ ಶಾಲೆ ಜೋಡು ಮಾರ್ಗ ಬಂಟ್ವಾಳ ತಾಲೂಕು ದ.ಕ ಇಲ್ಲಿನ ಮಕ್ಕಳಿಗೆ ಸಿಹಿ ತಿಂಡಿ ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷರಾದ ವಿಶ್ವನಾಥ್ ಚೆಂಡ್ತಿಮಾರ್, ಗೌರವ ಅಧ್ಯಕ್ಷರಾದ ದೇವದಾಸ್ ಕೃಷ್ಣಾಪುರ, ಮಾಜಿ ಅಧ್ಯಕ್ಷರಾದ ಚಂದಪ್ಪ ವಾಮದಪದವು,ಹಿರಿಯ ಸಲಹೆಗಾರ ಶೀನ ಚೆಂಡ್ತಿಮಾರ್, ಉಪಾಧ್ಯಕ್ಷರು ಜಯಪ್ರಕಾಶ್ ಪಿ.ವಿ ಪಂಜಿಕಲ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.