ವಿಟ್ಲ: ಮಾಣಿ ವಲಯದ ನೆಟ್ಲಮುಡ್ನೂರು ಕಾರ್ಯಕ್ಷೇತ್ರದಲ್ಲಿ ಹೊಸಬೆಳಕು ನೂತನ ಜ್ಞಾನ ವಿಕಾಸ ಕೇಂದ್ರವನ್ನು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ಜನಜಾಗೃತಿ ಕಾರ್ಯಕ್ರಮದ ಸದಸ್ಯರು ತನಿಯಪ್ಪ ಗೌಡ ಅವರು ಉದ್ಘಾಟಿಸಿದರು.
ಕ್ಷೇತ್ರದ ಅನೇಕ ಕಾರ್ಯಕ್ರಮಗಳನ್ನು. ತಿಳಿಸಿ, ಮಹಿಳೆಯರ ಅಭಿವೃದ್ಧಿಗಾಗಿ ರೂಪಿಸಿದ ಕಾರ್ಯಕ್ರಮವನ್ನು ಉತ್ತಮ ರೀತಿಯಲ್ಲಿ. ನಡೆಸಿಕೊಂಡು ಹೋಗುವಂತೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು. ನೇರಳಕಟ್ಟೆ. ಒಕ್ಕೂಟದ ಅಧ್ಯಕ್ಷರಾದ ಲೀಲಾವತಿ ವಹಿಸಿದ್ದರು.
ಮಾಣಿ ವಲಯದ ಮೇಲ್ವಿಚಾರಕಿ ಆಶಾ ಪಾರ್ವತಿ ಕಾರ್ಯಕ್ರಮ ನಿರೂಪಿಸಿದರು. ವಿಟ್ಲ ತಾಲೂಕು ಜ್ಞಾನ ವಿಕಾಸ ಸಮನ್ವಯಾಧಿಕಾರಿ ವಿಜಯಲಕ್ಷ್ಮಿ ಸ್ವಾಗತಿಸಿ, ಜ್ಞಾನ ವಿಕಾಸ ಕೇಂದ್ರಸಭೆ. ನಡೆಸುವ ಬಗ್ಗೆ ಮಾಹಿತಿ ನೀಡಿದರು. ಸೇವಾಪ್ರತಿನಿಧಿ ಗಣೇಶ್ ವಂದಿಸಿದರು.ಕಾರ್ಯಕ್ರಮದಲ್ಲಿ. ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.