ಬಂಟ್ವಾಳ: ತೆಂಕಕಜೆಕಾರು ಗ್ರಾಮದ ಅಬುರ ಕೊಂಬೇಲುಗುತ್ತು ನಿವಾಸಿ, ನಾಟಿ ವೈದ್ಯ, ಪ್ರಗತಿಪರ ಕೃಷಿಕ ತಿಮ್ಮಪ್ಪ ಬಂಗೇರ ಅವರು ಅಸೌಖ್ಯದಿಂದ ಜು.29ರಂದು ರಂದು ಸ್ವ ಗೃಹ ದಲ್ಲಿ ನಿಧನ ಹೊಂದಿದರು.
ಅವರು ಬಿಲ್ಲವ ಸಮಾಜದ ಗುರಿಕಾರರಾಗಿದ್ದು, ಕೊಂಬೇಲುಗುತ್ತು ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಗಡಿಪ್ರಧಾನರಾಗಿದ್ದರು. ನಾಟಿ ವೈದ್ಯರಾಗಿದ್ದ ಅವರು ಚರ್ಮವ್ಯಾದಿ, ಹಾವು ಕಡಿತಕ್ಕೆ ಔಷಧಿ ನೀಡುವಲ್ಲಿ ನಿಷ್ಣಾತರಾಗಿದ್ದರು. ಹಾವು ಕಡಿತಕ್ಕೆ ಉಚಿತವಾಗಿ ಔಷಧಿ ನೀಡುತ್ತಿದ್ದರು.
ಮೃತರು ಪತ್ನಿ,ಐವರು ಪುತ್ರರನ್ನು ಅಗಲಿದ್ದಾರೆ.