ರೋಟರಿ ಸಮುದಾಯದ ದಳ ಕಡೇಶಿವಾಲಯ ಇದರ 2023-24 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಇಂದು ರೋಟರಿ ಭವನದಲ್ಲಿ ರೋಟರಿ ಕ್ಲಬ್ ಬಂಟ್ವಾಳ ಇದರ ಅಧ್ಯಕ್ಷರಾದ ರೊ|PHF ಪ್ರಕಾಶ್ ಬಾಳಿಗ ಇವರು ನೆರವೇರಿಸಿದರು.
ವೇದಿಕೆಯಲ್ಲಿ ರೋಟರಿ ಕ್ಲಬ್ ಬಂಟ್ವಾಳ ಇದರ ಕಾರ್ಯದರ್ಶಿ ರೊ| ಸದಾಶಿವ ಬಾಳಿಗ ,ಸಾಹಿತಿ ಮತ್ತು ಸಮಾಜ ಸೇವಕರಾದ ವಿಂಧ್ಯಾ ಎಸ್. ರೈ ,ರೋಟರಿ ಕ್ಲಬ್ ಬಂಟ್ವಾಳ ಇದರ ನಿಕಟ ಪೂರ್ವ ಅಧ್ಯಕ್ಷರಾದ ಪುಷ್ಪರಾಜ್ ಹೆಗ್ಡೆ ಸತ್ತಿಕಲ್ಲು, ದಳದ ನಿಕಟ ಪೂರ್ವ ಅಧ್ಯಕ್ಷರಾದ ಯೋಗೀಶ್ ನಾಯ್ಕ್ ಡಿ ದಾಳಿಂಬ ಮತ್ತು ದಳದ ಕಾರ್ಯದರ್ಶಿಯವರಾದ ಜಹೀರ್ ಪ್ರತಾಪನಗರ ಉಪಸ್ಥಿತರಿದ್ದರು.
ರೋಟರಿ ಸಮುದಾಯ ದಳದ ಸಲಹಾ ಸಮಿತಿಯ ಚೇರ್ಮನ್ ಕೆ.ಕೆ.ಶೆಟ್ಟಿ ಕುರುಂಬ್ಲಾಜೆ ಸ್ವಾಗತಿಸಿ, ನೂತನ ಅಧ್ಯಕ್ಷರಾದ ಕಿಶೋರ್ ಕುಮಾರ್ ಬಿ. ವಂದಿಸಿ, ದಳದ ಸದಸ್ಯರಾದ ನವೀನ್ ನಾಯ್ಕ್ ಪಿಳಿಂಗಳ ಕಾರ್ಯಕ್ರಮ ನಿರೂಪಿಸಿದರು.