ಬಂಟ್ವಾಳ: ಪುಂಜಾಲಕಟ್ಟೆಯಲ್ಲಿ ನೂತನವಾಗಿ ಸಾರ್ವಜನಿಕ ಶ್ರೀ ಗಣೇಶೋತ್ಸವ ನಡೆಸುವ ಉದ್ದೇಶದಿಂದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ರಚನೆ ಕಾರ್ಯಕ್ರಮ ಪುಂಜಾಲಕಟ್ಟೆ ಬಂಗ್ಲೆ ಮೈದಾನದ ಒಳಾಂಗಣ ಕ್ರೀಡಾಂಗಣದಲ್ಲಿ ಜು.9ರಂದು ನಡೆಯಿತು.
ಜಿ.ಪಂ. ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಶ್ರೀ ಗಣೇಶೋತ್ಸವ ಮೂಲಕ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಗಳು ನಡೆಸುವುದು ಪುಣ್ಯ ಕಾರ್ಯ. ಗಣೇಶೋತ್ಸವದಿಂದ ಎಲ್ಲರೂ ಒಗ್ಗಟ್ಟಾಗಿ ಬಾಳುವಂತಾಗಲಿ ಎಂದರು.
ಈ ಸಂದರ್ಭದಲ್ಲಿ ಪ್ರಥಮ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣೆಯ ಸಮಿತಿ ರಚಿಸಲಾಯಿತು. ನೂತನ ಸಮಿತಿಯ ಅಧ್ಯಕ್ಷರಾಗಿ ಚಿದಾನಂದ ಮಾಣಿಂಜ, ಪ್ರಧಾನ ಕಾರ್ಯದರ್ಶಿಯಾಗಿ ಪ್ರಕಾಶ್ ಅನಿಲಡೆ, ಗೌರವಾಧ್ಯಕ್ಷರಾಗಿ ಎಂ. ತುಂಗಪ್ಪ ಬಂಗೇರ, ಸರ್ವೋತ್ತಮ ಪ್ರಭು ಪುಂಜಾಲಕಟ್ಟೆ, ಗೌರವ ಸಲಹೆಗಾರರಾಗಿ ರಮೇಶ್ ಶೆಟ್ಟಿ ಮಜಲೋಡಿ , ತಾರಾನಾಥ್ ಕಜೆಕಾರ್, ಸ್ವಸ್ತಿಕ್ ಗೌಡ ಹಟ್ಟತ್ತೋಡಿ, ಕೋಶಾಧಿಕಾರಿಯಾಗಿ ಕೌಶಿಕ್ ಶೆಟ್ಟಿ ಕಾಡಿಮಾರು ಲೆಕ್ಕ ಪರಿಶೋಧಕರಾಗಿ ಉದಯಕುಮಾರ್ ಶೆಟ್ಟಿ ಮೆಲ್ಮನೆ, ಉಪಾಧ್ಯಕ್ಷರಾಗಿ ಸಂಜೀವ ಶೆಟ್ಟಿ ಸೋಣಂದೂರು ,ರಮಾನಂದ ಮೂರ್ಜೆಗುತ್ತು, ಗಿರೀಶ್ ಅನಿಲಡೆ, ಕಾರ್ಯದರ್ಶಿಯಾಗಿ ಹರೀಶ್ಚಂದ್ರ ಶೆಟ್ಟಗಾರ್ ಮತ್ತು ಹರೀಶ್ ಪ್ರಭು,ಜತೆ ಕಾರ್ಯದರ್ಶಿ ಚಂದ್ರಶೇಖರ್ ಶೆಟ್ಟಿಗಾರ್ ಅತ್ತಾಜೆ ಹಾಗೂ ಕಾರ್ಯಕಾರಿಣಿ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ಹರೀಶ್ ಪ್ರಭು ಅವರು ಸ್ವಾಗತಿಸಿ,ವಂದಿಸಿದರು