ಬಂಟ್ವಾಳ: ಕೆಲಿಂಜ ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 27 aವರ್ಷಗಳಿಂದ ಸೇವೆ ಸಲ್ಲಿಸಿ ವಯೋನಿವೃತ್ತರಾದ ಗಾಯತ್ರಿದೇವಿ ಹಾಗೂ ಕಳೆದ 12 ವರ್ಷಗಳಿಂದ ಸೇವೆ ಸಲ್ಲಿಸಿ ಸುರತ್ಕಲ್ ಶಾಲೆಗೆ ವರ್ಗಾವಣೆಯಾಗಿರುವ ಮಂಜುಳಾ ಅವರ ಗುರುವಂದನಾ ಕಾರ್ಯಕ್ರಮ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮ ಕೆಲಿಂಜ ಶಾಲೆಯಲ್ಲಿ ನಡೆಯಿತು.
ಹಳೆ ವಿದ್ಯಾರ್ಥಿ ಸಂಘದ ಹಾಗೂ ಶಾಲಾಭಿವೃದ್ದಿ ಸಮಿತಿ ವತಿಯಿಂದ ನಡೆದ ಕಾರ್ಯಕ್ರಮ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಪೆಲತ್ತಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಗ್ರಾಮಪಂಚಾಯತ್ ಉಪಾಧ್ಯಕ್ಷೆ ಶೀಲಾನಿರ್ಮಲ್ ವೇಗಸ್ , ಗ್ರಾ.ಪಂ.ಸದಸ್ಯರಾದ ಜಯಪ್ರಸಾದ್,ಸಂದೀಪ್,ಉಮಾವತಿ, ಶಿಕ್ಷಣ ಇಲಾಖೆಯ ಸಂಯೋಜಕಿ ಪ್ರತಿಮಾ, ಸಿ.ಆರ್.ಪಿ.ಜ್ಯೋತಿ, ಬಿ.ಐ.ಆರ್.ಟಿ. ರವೀಂದ್ರ, ನಿವೃತ್ತ ಬಿ.ಆರ್.ಪಿ.ನಾರಾಯಣ ಗೌಡ, ಎಸ್.ಡಿ.ಎಂ.ಸಿ.ಅಧ್ಯಕ್ಷೆ ಜಯಂತಿ, ಪ್ರಾ.ಶಾ.ಶಿ.ಸಂಘದ ಜಿಲ್ಲಾಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ನವೀನ್, ಬಂಟ್ವಾಳ ತಾಲೂಕು ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಯತೀಶ್, ಬಂಟ್ವಾಳ ತಾಲೂಕಿನ ಎನ್‌ಪಿ.ಎಸ್ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್, ಬಂಟ್ವಾಳ ಪ್ರಾ.ಶಾ.ಶಿ.ಸಂಘದ ಸದಸ್ಯರಾದ ವಿಶ್ವನಾಥ ಗೌಡ, ಇಸ್ಮಾಯಿಲ್ ಕೆ. ಉಪಸ್ಥಿತರಿದ್ದರು.
ಪ್ರಭಾರ ಮುಖ್ಯ ಶಿಕ್ಷಕ ತಿಮ್ಮಪ್ಪ ನಾಯ್ಕ್ ಸ್ವಾಗತಿಸಿದರು, ಅತಿಥಿ ಶಿಕ್ಷಕಿ ನಳಿನಾಕ್ಷಿ, ವಂದಿಸಿದರು.
ಶಿಕ್ಷಕಿ ಉಷಾಸುವರ್ಣ ಕಾರ್ಯಕ್ರಮ ನಿರೂಪಿಸಿದರು.