ಮಂಗಳೂರು: ಹುಡುಗಿ ಹೆಸರಿನಲ್ಲಿ ಇನ್‌ಸ್ಟಾಗ್ರಾಂ ಖಾತೆ ತೆರೆದು ಹಣ ಪಡೆದು ವಂಚಿಸಿರುವ ಬಗ್ಗೆ ನಗರದ ಸೆನ್ ಅಪರಾಧ ಠಾಣೆಯಲ್ಲಿ ದೂರು ದಾಖಲಾಗಿದೆ.
ಇನ್‌ಸ್ಟಾಗ್ರಾಂ ಖಾತೆಯ ಮೂಲಕ ಪರಿಚಯ ಮಾಡಿಕೊಂಡ ಅಪರಿಚಿತ ವ್ಯಕ್ತಿಯು ತನ್ನ ಹೆಸರು ನಿಹಾರಿಕಾ (nihari-kaaa) ಎಂದು ಪರಿಚಯಿಸಿಕೊಂಡಿದ್ದ. ಬೇಕರಿಯಲ್ಲಿ ತಾಯಿಯ ಬ್ಯಾಂಕ್ ಖಾತೆಯಿಂದ ಹಣ ಪಾವತಿಸಲು ಅಸಾಧ್ಯವಾಗಿರುವುರಿಂದ 3800 ರೂ. ವರ್ಗಾಯಿಸುವಂತೆ ಕ್ಯೂಆರ್‌ಕೋಡ್ ಕಳುಹಿಸಿದ್ದ ಎನ್ನಲಾಗಿದೆ. ಅದನ್ನು ನಂಬಿದ ಫಿರ್ಯಾದಿದಾರರು ಹಣ ಪಾವತಿಸಿದ್ದರು. ಆ ಬಳಿಕ ತಾನು ಅಪಘಾತಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದು 28000 ರೂ. ನೀಡುವಂತೆ ತಿಳಿಸಿದ. ಮತ್ತೆ ಆಸ್ಪತ್ರೆ ಖರ್ಚಿಗೆ ಹಣ ಬೇಕೆಂದು ಕೇಳಿ ಹಂತ ಹಂತವಾಗಿ 98700 ರೂ.ಗಳನ್ನು ವರ್ಗಾಯಿಸಿ ವಂಚಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.