ಬಂಟ್ವಾಳ: ರೋಟರಿ ಕ್ಲಬ್ ಬಿ.ಸಿ.ರೋಡ್ ಸಿಟಿ ನೂತನ ಪದಾಧಿಕಾರಿಗಳ ಪದಗ್ರಹಣ ಜುಲೈ 12ರಂದು ಬಿ.ಸಿ.ರೋಡಿನ ರೋಟರಿ ಕ್ಲಬ್ ಸಭಾಂಗಣದಲ್ಲಿ ನಡೆಯಲಿರುವುದಾಗಿ ಪತ್ರಿಕಾಗೋಷ್ಠಿಯಲ್ಲಿ ನಿಯೋಜಿತ ಅಧ್ಯಕ್ಷ ಗಣೇಶ್ ಶೆಟ್ಟಿ ಗೋಳ್ತಮಜಲು ತಿಳಿಸಿದ್ದಾರೆ.
ಈ ಬಾರಿ ಮಧುಸೂಧನ ಶೆಣೈ ಕಾರ್ಯದರ್ಶಿಯಾಗಿ, ಜ್ಯೋತೀಂದ್ರ ಶೆಟ್ಟಿ ಕೋಶಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಲಿದ್ದು, ಪದಗ್ರಹಣ ಕಾರ್ಯವನ್ನು ಪೂರ್ವ ಜಿಲ್ಲಾ ಗವರ್ನರ್ ಎಂ.ರಂಗನಾಥ ಭಟ್ ನೆರವೇರಿಸುವರು. ಅತಿಥಿಗಳಾಗಿ ಸಹಾಯಕ ಗವರ್ನರ್ ಲಾರೆನ್ಸ್ ಗೋನ್ಸಾಲ್ವಿಸ್, ಜೋನಲ್ ಲೆಫ್ಟಿನೆಂಟ್ ರವೀಂದ್ರ ದರ್ಬೆ, ಜಿಎಸ್ ಆರ್ ಪದ್ಮನಾಭ ರೈ ಭಾಗವಹಿಸುವರು ಎಂದವರು ತಿಳಿಸಿದ್ದು, ಅಂಗನವಾಡಿ, ಶಾಲೆಗಳಿಗೆ ನೆರವು ಸಹಿತ ವಿವಿಧ ಸೇವಾಕಾರ್ಯಗಳನ್ನು ಈ ಬಾರಿಯೂ ಮುಂದುವರಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನಿರ್ಗಮನ ಅಧ್ಯಕ್ಷೆ ಪಲ್ಲವಿ ಕಾರಂತ, ಜಿಎಸ್ ಆರ್ ಪದ್ಮನಾಭ ರೈ, ಸ್ಥಾಪಕಾಧ್ಯಕ್ಷ ಸತೀಶ್ ಕುಮಾರ್ ಕೆ, ನಿಯೋಜಿತ ಕಾರ್ಯದರ್ಶಿ ಮಧುಸೂಧನ ಶೆಣೈ, ಮುಂದಿನ ಸಾಲಿನ ಅಧ್ಯಕ್ಷ ಶೇಷಪ್ಪ ಮೂಲ್ಯ, ಜ್ಯೋತೀಂದ್ರ ಶೆಟ್ಟಿ, ಪ್ರಶಾಂತ್ ಕಾರಂತ್ ಮತ್ತಿತರರು ಉಪಸ್ಥಿತರಿದ್ದರು