2022-23ರಲ್ಲಿ ಉತ್ತೀರ್ಣರಾಗಿ ನಿರುದ್ಯೋಗಿಗಳಾಗಿರುವ ನೋಂದಾಯಿತ ಪದವೀಧರರಿಗೆ 24 ತಿಂಗಳ ವರೆಗೆ ಮಾಸಿಕ 3000 ಸಾವಿರ ರೂ. ನಿರೊದ್ಯೋಗ ಭತ್ಯೆ ನೀಡಲಾಗುವುದು. ಮಂಗಳಮುಖಿಯರಿಗೂ ಇದು ಅನ್ವಯವಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೀಘ್ರದಲ್ಲೇ ಯುವ ನಿಧಿ ಯೋಜನೆಗೆ ಅರ್ಜಿ ಆಹ್ವಾನಿಸಲಾಗುವುದು. 2022-23 ರಲ್ಲಿ ವ್ಯಾಸಂಗ ಮಾಡಿ ಪಾಸ್ ಆಗಿರುವ ಎಲ್ಲಾ ಪದವೀಧರರಿಗೆ 24 ತಿಂಗಳವರೆಗೆ ಪ್ರತಿ ತಿಂಗಳು 3000 ರೂ. ಪದವೀಧರರಿಗೆ, 1500 ಡಿಪ್ಲೋಮಾ ಹೋಲ್ಡರ್ಸ್ಗಳಿಗೆ ಪಾವತಿ ಮಾಡಲಾಗುವುದು. ಮಂಗಳಮುಖಿಯರಿಗೂ ಈ ಸೌಲಭ್ಯವಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
24 ತಿಂಗಳ ಒಳಗೆ ಖಾಸಗಿ ಅಥವಾ ಸರ್ಕಾರಿ ನೌಕರಿ ಪಡೆದರೆ ಅಂತಹ ಪದವೀಧರರಿಗೆ ಅಥವಾ ಡಿಪ್ಲೋಮಾ ಹೋಲ್ಡರ್ಸ್ಗಳಿಗೆ ಹಣ ಪಾವತಿ ಮಾಡಲಾಗುವುದಿಲ್ಲ. ನಿರುದ್ಯೋಗಿ ಅಂತಾ ಅರ್ಜಿ ಹಾಕಿ ನೋಂದಣಿ ಮಾಡಿಕೊಂಡವರಿಗೆ ಮಾತ್ರ ಹಣ ಪಾವತಿ ಮಾಡಲಾಗುತ್ತದೆ. ನೋಂದಣಿ ಮಾಡಿಕೊಂಡ 24 ತಿಂಗಳವರೆಗೆ ಮಾತ್ರ ಭತ್ಯೆ ನೀಡಲಾಗುತ್ತದೆ ಎಂದು ಹೇಳಿದರು.