ಪುಂಜಾಲಕಟ್ಟೆ : ಇಲ್ಲಿಗೆ ಸಮೀಪದ ಪುರಿಯ ಅಂಗನವಾಡಿ ಕೇಂದ್ರಕ್ಕೆ ಬೆಳ್ತಂಗಡಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವತಿಯಿಂದ ಶಿಶು ಅಭಿವೃದ್ಧಿ ಯೋಜನೆಯಲ್ಲಿ ನಿರ್ಮಿಸಲಾದ ನೂತನ ಕಟ್ಟಡದ ಉದ್ಘಾಟನೆ ನಡೆಯಿತು.
ಕೃಷ್ಣ ಅರಿಮಿಣಿತ್ತಾಯ ಅವರು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಪಡಂಗಡಿ ವಲಯ ಮೇಲ್ವಿಚಾರಕಿ ಸುಮನಾ, ಮಾಲಾಡಿ ಗ್ರಾ.ಪಂ. ಅಧ್ಯಕ್ಷೆ ಸುಸಾನ್, ಉಪಾಧ್ಯಕ್ಷ ದಿನೇಶ್ ಕರ್ಕೇರ ಮತ್ತು ಸದಸ್ಯರು, ಪಿಡಿಒ ರಾಜಶೇಖರ ರೈ, ಮಡಂತ್ಯಾರು ರೋಟರಿ ಕ್ಲಬ್‌ಅಧ್ಯಕ್ಷ ರೊನಾಲ್ಡ್ ಸಿಕ್ವೇರಾ, ಕಾರ್ಯದರ್ಶಿ ಹರ್ಷ ನಾರಾಯಣ್, ಸೆಲೆಸ್ಟೀನ್ ಡಿಸೋಜ,ಸೆ.ಹಾ.ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಕಾರ್ಯನಿರ್ವಹಣಾ ಅಧಿಕಾರಿ ವಲೇರಿಯನ್ ಡಿಸೋಜಾ, ಗ್ರಾಮ ಸಹಾಯ ಗುಣಕರ ಹೆಗ್ಡೆ, ಅಂಗನವಾಡಿ ಕಾರ್ಯಕರ್ತೆ ಮೋಹಿನಿ ಹಾಗೂ ಸಹಾಯಕಿ , ಶ್ರೀದೇವಿ, ಶ್ರೀಕೃಪಾ, ಶ್ರೀ ರಕ್ಷಾ ಸ್ತ್ರೀ ಶಕ್ತಿ ಸಂಘದ ಸದಸ್ಯರು, ಭಜನಾ ಮಂಡಳಿ, ಯುವಕ ಸಂಘದ ಸದಸ್ಯರು, ಮಕ್ಕಳ ಪೋಷಕರು, ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು