ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಮಂಗಳೂರು ಉತ್ತರ, ಮಂಗಳೂರು ಪೂರ್ವ ಹಾಗೂ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಮಟ್ಕಾ ದಂಧೆ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡಸಿದ್ದಾರೆ.
ಮಂಗಳೂರು ಪೂರ್ವ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ, ಒಟ್ಟು ಐದು ಪ್ರಕರಣಗಳನ್ನು ದಾಖಲಿಸಿದ್ದು, ಶ್ರೀನಿವಾಸ, ಅಶೋಕ್ ಕುಮಾರ್, ಹರೀಶ ಪೂಜಾರಿ, ಮಹಮದ್ ಇಸ್ಮಾಯಿಲ್, ಪುನೀತ್ ರಾವ್, ನಿರೀಕ್ಷಿತ್, ಪ್ರದೀಪ್, ಶರವಣ ಕುಮಾರ್, ಪ್ರದೀಪ್ ಸಾಲ್ಯಾನ್, ದೇವರಾಜ್ ಶೆಟ್ಟಿ, ಚರಣ್ ಕುಮಾರ್, ಹುಸೇನ್ ಉಮರ್, ಸದಾಶಿವ, ಜಯಂತ್, ಗಣೇಶ್ ಎಂ., ಮಹಮ್ಮದ್ ಶರೀಫ್, ವಿಜಿತ್, ಕೀರ್ತಿ, ಧೀರಜ್ ಸಹಿತ 19 ಆರೋಪಿಗಳನ್ನು ಬಂಧಿಸಿ 13,010 ರೂ. ವಶಪಡಿಸಲಾಗಿದೆ.
ಮಂಗಳೂರು ಉತ್ತರ ಠಾಣೆಯಲ್ಲಿ ಸಜಿತ್, ಚೇತನ್ ಕುಮಾರ್ ಹಾಗೂ ಶರತ್ ರಾಜ್ ಎನ್ನುವ ಮೂವರನ್ನು ಬಂಧಿಸಿ 3,890 ರೂ. ವಶಪಡಿಸಿಕೊಳ್ಳಲಾಯಿತು. ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ಮೋಹನ್, ಆಸಿಫ್, ಮಹ್ಮದ್ ಮುಸ್ತಫ ಅವರನ್ನು ಬಂಧಿಸಿ 1,270 ರೂ. ವಶಪಡಿಸಲಾಗಿದೆ.