ವಿಟ್ಲ: ಮನುಷ್ಯರಲ್ಲಿ ಮಾನವೀಯತೆಯನ್ನು ಬೆಳೆಸುವ ನಿಟ್ಟಿನಲ್ಲಿ ಧಾರ್ಮಿಕ ಶ್ರದ್ಧಾಕೇಂದ್ರಗಳು ಕೆಲಸ ನಿರ್ವಹಿಸಬೇಕಾಗಿದೆ. ಮಾತೃಪ್ರೇಮವನ್ನು ಸಮಾಜಕ್ಕೆ ತೋರಿಸುವ ನಿಟ್ಟಿನಲ್ಲಿ ವರಮಹಾಲಕ್ಷ್ಮೀ ವೃತಾಚರಣೆ ಕ್ಷೇತ್ರದಲ್ಲಿ ನಡೆದುಕೊಂಡು ಬಂದಿದೆ. ಪ್ರತಿ ಮನೆಯ ಮನಸ್ಸಿನ ಉತ್ಸವವಾಗಿ ಬೆಳ್ಳಿಹಬ್ಬದ ಸಂಭ್ರಮೋತ್ಸವ ನಡೆಯಬೇಕಾಗಿದೆ ಎಂದು ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಅವರು ಭಾನುವಾರ ಮಾಣಿಲ ಶ್ರೀ ಧಾಮ ಶ್ರೀ ಮಹಾಲಕ್ಷ್ಮಿ ಕ್ಷೇತ್ರದಲ್ಲಿ ಬೆಳ್ಳಿ ಹಬ್ಬ ಮಹೋತ್ಸವದ ಶ್ರೀ ವರಲಕ್ಷ್ಮಿ ವ್ರತಾಚರಣೆ ಕಾರ್ಯಕ್ರಮದ ಅಂಗವಾಗಿ ಭಾನುವಾರ ಶ್ರೀ ಕ್ಷೇತ್ರದಲ್ಲಿ ಪೂರ್ವಭಾವಿ ವಿಶೇಷ ಸಭೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ದೇಶದಲ್ಲಿ ಮಹಿಳೆಯರು ದೊಡ್ಡ ಶಕ್ತಿಯಾಗಿದ್ದು, ವರಮಹಾಲಕ್ಷ್ಮೀ ವ್ರತಾಚಾರಣೆ ಅವರದ್ದೇ ಕಾರ್ಯಕ್ರಮವಾಗಿದೆ. ಭಕ್ತರ ಭಕ್ತಿಯ ಕಾಣಿಕೆಯ ಮೂಲಕ ಶ್ರೀ ಕ್ಷೇತ್ರ ನಿರ್ಮಾಣವಾಗಿದೆ. ಆರ್ತರ ದೀನರ ಸೇವೆಗಾಗಿ ಬದುಕು ಸಮರ್ಪಿಸುವವರಿಗೆ ಭಯ ಎಂದೂ ಬಾರದು. ಹೃದಯ ಶ್ರೀಮಂತಿಕೆಯಿಂದ ವಿಶಾಲವಾದ ಸೇವೆ ಕ್ಷೇತ್ರದಲ್ಲಿ ನಡೆದುಕೊಂಡು ಬಂದಿದೆ ಎಂದು ತಿಳಿಸಿದರು.
ತಂತ್ರಿವರ್ಯರಾದ ಪ್ರಸಾದ್ ಪಾಂಗಣ್ಣಾಯ, ವಿಶ್ವಹಿಂದೂ ಪರಿಷತ್ತ್ ಭಜರಂಗದಳ ಸಹಕಾರ್ಯದರ್ಶಿ ಶರಣ್ ಪಂಪ್ ವೆಲ್, ಮಾಜಿ ವಿಧಾನ ಪರಿಷತ್ತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಆಸರೆ ಚಾರಿಟೇಬಲ್ ಟ್ರಸ್ಟಿನ ಆಶಾ ಜ್ಯೋತಿ ರೈ, ಉದ್ಯಮಿ ಭಾಸ್ಕರ ಶೆಟ್ಟಿ ಪುಣೆ, ವಕೀಲ ರವೀಂದ್ರ ಮುನ್ನಿಪ್ಪಾಡಿ, ದೈವ ಪಾತ್ರಿ ಜನಾರ್ಧನ ಬಾಕಿಲಗುತ್ತು, ಮಹಿಳಾ ಸೇವಾ ಸಮಿತಿ ಗೌರವಾಧ್ಯಕ್ಷೆ ರೇವತಿ ಪೆರ್ನೆ, ಗೋಪಾಲ ಕುತ್ತಾರ್, ರಾಜೇಂದ್ರನಾಥ್ ಪೆರುವಾಯಿಗುತ್ತು, ಕೃಷ್ಣಯ್ಯ ಬಲ್ಲಾಳ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಯೋಜನೆಯ ಸೇವಾ ಪ್ರತಿನಿಧಿ ಪರಮೇಶ್ವರ, ಬೋಜ ಕುಲಾಲ್ ಕಾರ್ಕಳ, ರವೀಂದ್ರ ಶೆಟ್ಟಿ ಉಳಿಗುತ್ತು ಉಪಸ್ಥಿತರಿದ್ದರು.
ಶ್ರೇಯಾ, ಪ್ರದೀಕ್ಷಾ ಪ್ರಾರ್ಥಿಸಿದರು. ಮಹಿಳಾ ಸೇವಾ ಸಮಿತಿ ಅಧ್ಯಕ್ಷೆ ವನಿತಾ ವಿ. ಶೆಟ್ಟಿ ಸ್ವಾಗತಿಸಿದರು. ಪತ್ರಕರ್ತ ಶ್ರೇಣಿ ವೇಣುಗೋಪಾಲ ಭಟ್ ಪ್ರಸ್ತಾವನೆಗೈದರು. ಕ್ಷೇತ್ರದ ಟ್ರಸ್ಟಿ ತಾರನಾಥ ಕೊಟ್ಟಾರಿ ಸಮಿತಿ ರಚನೆಯ ಪ್ರಕ್ರಿಯೆ ನಡೆಸಿದರು. ಮಹಾಲಕ್ಷ್ಮೀ ಸೇವಾ ಪ್ರತಿಷ್ಠಾನದ ಮಚ್ಚೇಂದ್ರನಾಥ ಸಾಲ್ಯಾನ್ ವಂದಿಸಿದರು. ಅಶ್ವಿತ್ ಕುಲಾಲ್ ಓಡೀಲು ಕಾರ್ಯಕ್ರಮ ನಿರೂಪಿಸಿದರು
ಬೆಳ್ಳಿ ಹಬ್ಬ ಸಮಿತಿ ರಚನೆ:
ಗೌರವಾಧ್ಯಕ್ಷರಾಗಿ ಸದಾಶಿವ ಶೆಟ್ಟಿ ಕೂಳೂರು, ಗೌರವ ಮಾರ್ಗದರ್ಶಕರಾಗಿ ಪ್ರಸಾದ್ ಪಾಂಗಣ್ಣಾಯ, ಅಧ್ಯಕ್ಷರಾಗಿ ಮೋನಪ್ಪ ಭಂಡಾರಿ, ಕಾರ್ಯಾಧ್ಯಕ್ಷರಾಗಿ ಮಯ್ಯೂರ್ ಉಳ್ಳಾಲ್, ಅಶೋಕ್ ಶೆಟ್ಟಿ ಸರಪಾಡಿ, ಪ್ರಧಾನ ಕಾರ್ಯದರ್ಶಿ ದೇವಪ್ಪ ಪಂಜಿಕಲ್ಲು, ಕೋಶಾಧಿಕಾರಿಯಾಗಿ ಜಯರಾಜ್ ಪ್ರಕಾಶ್, ಸಂಘಟನಾ ಕಾರ್ಯಾದರ್ಶಿಯಾಗಿ ಗೋಪಾಲ ಕುತ್ತಾರು ಆಯ್ಕೆ ಮಾಡಲಾಯಿತು. ಗೌರವ ಸಲಹೆಗಾರರು, ಉಪಾಧ್ಯಕ್ಷರು, ಸ್ಮರಣ ಸಂಚಿಕೆ ಸಮಿತಿ, ವಿವಿಧ ಉಪಸಮಿತಿಗಳ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.