ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಮಾಣಿಗುತ್ತು ಶ್ರೀ ಉಳ್ಳಾಲ್ತಿ, ಬೆಮ್ಮೆರ್, ಗುಡ್ಡೆಚಾಮುಂಡಿ, ಪಂಜುರ್ಲಿ, ಮಲೆಕೊರತಿ ದೈವಗಳ ಧರ್ಮಚಾವಡಿಗೆ ಶಿಲಾನ್ಯಾಸವು ಮೇ ತಿಂಗಳ 5ನೇ ತಾರೀಕಿಗೆ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರ ಮಾರ್ಗದರ್ಶನದಂತೆ, ಪಳನೀರು ಅನಂತ ಭಟ್ ರವರ ಪೌರೋಹಿತ್ಯದಲ್ಲಿ ನಡೆದಿದ್ದು, ಜೀರ್ಣೋದ್ಧಾರದ ಪ್ರಕ್ರಿಯೆಯು ಗ್ರಾಮಸ್ಥರ ಅತೀವವಾದ ಉತ್ಸಾಹದೊಂದಿಗೆ ನೂರಾರು ಜನರ ಕೂಡುವಿಕೆಯೊಂದಿಗೆ ನಡೆಯುತ್ತಿದೆ.
ಗತಕಾಲದ ವೈಭವದಂತೆ ನಿರ್ಮಾಣಗೊಳ್ಳಲಿರುವ ನೂತನ ಚಾವಡಿಯು ಹಳೆಯ ಸಂಪ್ರದಾಯವನ್ನು ಮತ್ತೆ ನೆನಪಿಸುವಂತಿದೆ. ಶ್ರಮಾದಾನ ಕಾರ್ಯದಲ್ಲಿ ಊರಿನ ಪ್ರಮುಖರು, ದೈವಪಾರಿಚಾರಕರು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವುದರಿಂದ ಸಂಭ್ರಮದ ವಾತಾವರಣ ಕಾಣಸಿಗುತ್ತಿದೆ.