ಬಂಟ್ವಾಳ: ವಾಮದಪದವು ಯುವಸ್ಪಂದನ ಸಂಘಟನೆ ವತಿಯಿಂದ ಯುವಸ್ಪಂದನ ಸಹಾಯಹಸ್ತದ ಐದನೇ ಸರಣಿ ಕಾರ್ಯಕ್ರಮದ ಅಂಗವಾಗಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಬಂಟ್ವಾಳ ತಾಲೂಕಿನ ಇರ್ವತ್ತೂರು ಗ್ರಾಮದ ರಮೇಶ್ ಆಚಾರ್ಯ ಅವರಿಗೆ ಯುವಸ್ಪಂದನ ಸಂಘಟನೆಯ ಸದಸ್ಯರಿಂದ ಸಂಗ್ರಹಿಸಲಾದ 20 ಸಾವಿರ ರೂ.ಮೊತ್ತವನ್ನು ಸಹಾಯಧನವಾಗಿ ಅವರ ನಿವಾಸದಲ್ಲಿ ಹಸ್ತಾಂತರಿಸಲಾಯಿತು.
ಯುವಸ್ಪಂದನ ಸಂಘಟನೆಯ ಪ್ರಮುಖರು ಮತ್ತು ಸದಸ್ಯರು ಉಪಸ್ಥಿತರಿದ್ದರು