ಬಂಟ್ವಾಳ: ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ ಅವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ ಮಾತುಕತೆ ನಡೆಸಿದರು. ಬಳಿಕ ದಿನೇಶ್ ಗುಂಡೂರಾವ್ ಅವರು ಮಾಜಿ ಸಚಿವ ಬಿ.ರಮಾನಾಥ ರೈ ಅವರ ಮನೆಗೂ ಭೇಟಿ ನೀಡಿದರು.
ದಿ| ಇಂದಿರಾ ಗಾಂಽಯವರು ಪ್ರಧಾನಿಯಾಗಿದ್ದಾಗ ತಾನು ಮಾಜಿ ಸಿಎಂ ಗುಂಡೂರಾವ್ ಜತೆಯಾಗಿ ಕೆಲಸ ಮಾಡಿದ್ದೆವು. ದ.ಕ.ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಜಿಲ್ಲೆಯ ಅಭಿವೃದ್ಧಿಗೆ ನಿಷ್ಠೆ, ಪ್ರಾಮಾಣಿಕತೆಯಿಂದ ಕೆಲಸ ಮಾಡುವಂತೆ ಪೂಜಾರಿಯವರು ತಿಳಿಸಿದರು. ನಿಮ್ಮ ಮಾರ್ಗದರ್ಶನ ಪಡೆಯುವುದೇ ನಮ್ಮ ಸೌಭಾಗ್ಯ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಕೆ.ಹರೀಶ್‌ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಪದ್ಮರಾಜ್ ಆರ್, ಮಿಥುನ್ ರೈ, ಕೆಪಿಸಿಸಿ ಸಂಯೋಜಕ ಕರುಣಾಕರ ಶೆಟ್ಟಿ, ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್, ಸುದೀಪ್‌ಕುಮಾರ್ ಶೆಟ್ಟಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ, ಬಂಟ್ವಾಳ ಯುವ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಜೋರ, ಮನಪಾ ಸದಸ್ಯರಾದ ನವೀನ್ ಡಿಸೋಜ, ಎ.ಸಿ.ವಿನಯರಾಜ್, ಪ್ರವೀಣ್‌ಚಂದ್ರ ಶೆಟ್ಟಿ, ಅನಿಲ್‌ಕುಮಾರ್, ಪ್ರಮುಖರಾದ ಸಂಜೀವ ಪೂಜಾರಿ, ಮಾಯಿಲಪ್ಪ ಸಾಲ್ಯಾನ್, ಶಬೀರ್ ಸಿದ್ದಕಟ್ಟೆ, ಪದ್ಮನಾಭ ರೈ, ವೆಂಕಪ್ಪ ಪೂಜಾರಿ, ಡಾಲಿ, ಅಬ್ಬಾಸ್ ಆಲಿ, ಅಬೂಬಕ್ಕರ್ ಸಿದ್ದೀಕ್, ಜನಾರ್ದನ ಚಂಡ್ತಿಮಾರ್, ವಾಸು ಪೂಜಾರಿ, ದಿನೇಶ್ ಪೂಜಾರಿ, ಲಾರೆನ್ಸ್, ಸಂತೋಷ್‌ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು