ಅಮ್ಟಾಡಿ ವ್ಯವಸಾಯ ಸೇವಾ ಸಹಕಾರಿ ಸಂಘ (ನಿ.) ಇದರ ನೂತನ ಕಡೆಗೋಳಿ ಶಾಖೆಯ ಶುಭಾರಂಭ ಕಾರ್ಯಕ್ರಮ ಜೂ.25 ರಂದು ಬೆಳಿಗ್ಗೆ 10.30ಕ್ಕೆ ತುಂಬೆ ಕಡೆಗೋಳಿ ಸಾಯಿ ಕಾಂಪ್ಲೆಕ್ಸ್ ನಲ್ಲಿ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ತುಂಬೆ ಗ್ರಾಮ ಪಂಚಾಯತ್ ಅಧ್ಯಕ್ಷರು ಪ್ರವೀಣ್ ಬಿ. ತುಂಬೆ, ಸಹಕಾರ ಸಂಘಗಳ ಸಹಾಯಕ ನಿಬಂಧಕರು ಸುಧೀರ್ ಕುಮಾರ್ ಜೆ., ಮಾಜಿ ಸದಸ್ಯರು ಚಂದ್ರಪ್ರಕಾಶ್ ಶೆಟ್ಟಿ, ಆಡಳಿತ ಟ್ರಸ್ಟಿ, ಸೇವಾಂಜಲಿ ಪ್ರತಿಷ್ಠಾನ, ಫರಂಗಿಪೇಟೆ ಕೆ. ಕೃಷ್ಣ ಕುಮಾರ್ ಪೂಂಜ, ಫರಂಗಿಪೇಟೆ ವಿ.ಎಸ್.ಎಸ್.ಬ್ಯಾಂಕ್ ಅಧ್ಯಕ್ಷರು ಸುಬ್ರಹ್ಮಣ್ಯ ಭಟ್, ಕಟ್ಟಡ ಮಾಲಕರು ವಿನಯ್ ಕುಮಾರ್ ಕಡೆಗೋಳಿ, ಚೌಟ ಇಂಡೇನ್ ಗ್ಯಾಸ್ ಡಿಸ್ಟ್ರಿಬ್ಯೂಟರ್ ಮಾಲಕರು ಜಗನ್ನಾಥ ಚೌಟ, ಬಂಟ್ವಾಳ ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷರು ಅರುಣ್ ರೋಶನ್ ಡಿ’ಸೋಜ, ಬಂಟ್ವಾಳ ಸಹಕಾರ ಅಭಿವೃದ್ಧಿ ಅಧಿಕಾರಿ ಎನ್. ಜೆ. ಗೋಪಾಲ್ ಬಾಗವಹಿಸಲಿದ್ದಾರೆ