ಬಂಟ್ವಾಳ: ಟ್ರಾಫಿಕ್ ಪೊಲೀಸ್ ಠಾಣೆಯಾಗಿ ಕಾರ್ಯಚರಿಸುತ್ತಿದ್ದ ಮೆಲ್ಕಾರ್ ನ ಬಾಡಿಗೆ ಕಟ್ಟಡಕ್ಕೆ ಮುಕ್ತಿ ದೊರಕಿದೆ.
ಬಂಟ್ವಾಳದಲ್ಲಿ ಸಂಚಾರಿ ಠಾಣೆ ಆರಂಭಕ್ಕೆ ಸ್ಥಳ ಅವಕಾಶ ನೀಡಿದ ಮನೆ ಇನ್ನು ನೆನಪು ಮಾತ್ರ…
ಬಿಸಿರೋಡಿನಿಂದ ಅಡ್ಡಹೊಳೆವರಗೆ ನಡೆಯುವ ಚತುಷ್ಪತ ರಸ್ತೆ ಕಾಮಗಾರಿಯ ಹಿನ್ನೆಲೆಯಲ್ಲಿ ರಸ್ತೆಯ ಎರಡು ಭಾಗದಲ್ಲಿ ಅಗಲೀಕರಣ ಕಾರ್ಯಗಳು ನಡೆಯುತ್ತಿದೆ
ಮೆಲ್ಕಾರ್ ಟ್ರಾಫಿಕ್ ಪೊಲೀಸ್ ಠಾಣೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಮನೆ ಮತ್ತು ಜಾಗವನ್ನು ರಸ್ತೆ ಕಾಮಗಾರಿಯ ಅವಶ್ಯಕತೆಗಾಗಿ ಕೆಡವಲಾಗುವುದರಿಂದ ಠಾಣೆಯನ್ನು ಸ್ಥಳಾಂತರ ಮಾಡುವುದು ಇಲಾಖೆಗೆ ಅನಿವಾರ್ಯ ವಾಗಿತ್ತು.
ಈ ಹಿನ್ನೆಲೆಯಲ್ಲಿ ಕಳೆದ ಏಳು ವರ್ಷಗಳಲ್ಲಿ ಟ್ತಾಫಿಕ್ ಠಾಣೆಯಾಗಿ ಜನರಿಗೆ ಸೇವೆ ನೀಡಿದ್ದ ಮನೆಯನ್ನು ಬಿಟ್ಟು ಮಾರ್ನಬೈಲಿನಲ್ಲಿರುವ ಬಾಡಿಗೆ ಮನೆಗೆ ಸ್ಥಳಾಂತರ ಮಾಡಲಾಗಿದೆ.
10.4.2015 ರಲ್ಲಿ ಮೆಲ್ಕಾರ್ ನ ಬಾಡಿಗೆ ಮನೆಯೊಂದರಲ್ಲಿ ಆರಂಭವಾಗಿದ್ದ ಸಂಚಾರಿ ಪೊಲೀಸ್ ಠಾಣೆ ಇಂದು ಕಾರಣಾಂತರಗಳಿಂದ ತಾತ್ಕಾಲಿಕವಾಗಿ ಮಾರ್ನಬೈಲು ಮಾರಣ ಗುಳಿಗನ ಕಟ್ಟೆಯ ಮುಂಭಾಗದಲ್ಲಿರುವ ದಿ.ಚಂದ್ರಶೇಖರ ಇಂಜಿನಿಯರ್ ಅವರ ಬಾಡಿಗೆ ಮನೆಗೆ ಸ್ಥಳಾಂತರ ಮಾಡಲಾಗಿದೆ.
ಸ್ವಂತ ಕಟ್ಟಡದ ಕಾಮಗಾರಿ ಭರದಿಂದ ನಡೆಯುತ್ತಿದೆ. ರಸ್ತೆ ಕಾಮಗಾರಿ ಆರಂಭವಾದ ದಿನದಂದು ಟ್ರಾಫಿಕ್ ಪೊಲೀಸ್ ಸ್ಟೇಷನ್ ನ್ನು ಸ್ಥಳಾಂತರ ಮಾಡುವಂತೆ ಹೆದ್ದಾರಿ ಇಲಾಖೆ ಹಾಗೂ ಮನೆಯ ಮಾಲಕರು ಒತ್ತಾಯ ಮಾಡುತ್ತಾ ಬಂದಿದ್ದರು.
ಜೊತೆಗೆ ಈ ಕಟ್ಟಡಲ್ಲಿ ಮಳೆಗಾಲ ಆರಂಭವಾಗುತ್ತಿದ್ದಂತೆ ಕುಳಿತು ಕೊಳ್ಳಲು ಸಾಧ್ಯವಾಗದ ರೀತಿಯಲ್ಲಿ ನೀರು ಸೋರಿಕೆಯಾಗುತ್ತಿತ್ತು. ಬದಲಿ ವ್ಯವಸ್ಥೆ ಸರಿಯಾಗಿ ಸಿಗದ ಹಿನ್ನೆಲೆಯಲ್ಲಿ ಇಷ್ಟು ವರ್ಷ ಅದೇ ಹಳೆಯ ಕಟ್ಟಡದಲ್ಲಿ ಉಳಿದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ ಟ್ರಾಫಿಕ್ ಪೊಲಿಸ್ ಠಾಣೆಗೆ ಪಾಣೆಮಂಗಳೂರು ಹಳೆಯ ಸೇತುವೆ ಸಮೀಪ ಅಕರಂಗಡಿ ಜುಮಾ ಮಸೀದಿ ಮುಂಭಾಗದ ಜಾಗದಲ್ಲಿ ಸರಕಾರದ ಅನುದಾನದ ಮೂಲಕ ಸ್ವಂತ ಕಟ್ಟಡದ ನಿರ್ಮಾಣ ಕಾರ್ಯ ನಡೆಯುತ್ತಿದೆ.
ಸುಸಜ್ಜಿತ ರೀತಿಯಲ್ಲಿ ಕಟ್ಟಡದ ನಿರ್ಮಾಣ ವಾಗಲಿದ್ದು ,ಅಂದಾಜು ಒಂದು ವರ್ಷದೊಳಗೆ ಕಾಮಗಾರಿ ಪೂರ್ಣಗೊಂಡು ಟ್ರಾಫಿಕ್ ಪೊಲೀಸ್ ಠಾಣೆ ಕಾರ್ಯಚರಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾಹಿತಿ ಟ್ರಾಫಿಕ್ ಪೊಲೀಸ್ ಠಾಣೆಯನ್ನು ಮೆಲ್ಕಾರ್ ನಿಂದ ಮಾರ್ನಬೈಲು ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರ ಮಾಡಿರುವುದರಿಂದ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಮಾರ್ನಬೈಲಿಗೆ ಬರಲು ಅಧಿಕಾರಿಗಳು ತಿಳಿಸಿದ್ದಾರೆ.