


ಸುಬ್ರಹ್ಮಣ್ಯ: ಸಾಮಾಜಿಕ ಜಾಲತಾಣಗಳಾದ ಫೇಸ್ಟುಕ್, ವಾಟ್ಸಾಪ್, ಇನ್ಸಾಗ್ರಾಮ್, ಟ್ವಿಟ್ಟರ್ ಮುಂತಾದವು ಗಳಲ್ಲಿ ಇತರರ ಬಗ್ಗೆ ಅವಹೇಳನಕಾರಿ ಭಾವಚಿತ್ರ ವಿಡಿಯೋ ಮುಂತಾದ ಪೋಸ್ಟ್ ಗಳನ್ನು ಹಾಕಬಾರದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಾರಾದರೂ ಪೋಸ್ಟ್ ಮಾಡಿದ ಬಗ್ಗೆ ಕಂಡು ಬಂದಲ್ಲಿ ಠಾಣೆಗೆ ಮಾಹಿತಿ ನೀಡಬೇಕು. ಹಾಗೂ ಈ ಬಗ್ಗೆ ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡಬಾರದು. ಅವಹೇಳನಕಾರಿ ಪೋಸ್ಟರ್ ಗಳನ್ನು ಹಾಕಿದಲ್ಲಿ ಹಾಕಿದವರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂಬುದಾಗಿ ಸಾರ್ವಜನಿಕರ ಗಮನಕ್ಕೆ ತಿಳಿಯಪಡಿಸಲಾಗಿದೆ .


