ಪುತ್ತೂರು ಹಿಂದೂ ಕಾರ್ಯಕರ್ತರ ಮೇಲಿನ ಪೋಲೀಸ್ ದೌರ್ಜನ್ಯವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಖಂಡಿಸಿದ್ದಾರೆ.
ಅವರು ಘಟನೆಯನ್ನು ಖಂಡಿಸಿದ್ದಲ್ಲದೆ ಕಾನೂನು ಮೀರಿ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸಿ ಅವರ ಮೇಲೆ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.
ಈಗಾಗಲೇ ಯುವಕರ ಮೇಲೆ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಲಾಧಿಕಾರಿಗಳು ಓರ್ವ ಎಸ್.ಐ.ಹಾಗೂ ಪೋಲೀಸ್ ನ್ನು ಸಸ್ಪಂಡ್ ಮಾಡಿದ್ದಾರೆ, ಆದರೆ ಕೇವಲ ಸಸ್ಪಂಡ್ ಮಾಡಿದರೆ ಸಾಲದು ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸಿ ಅವರ ಮೇಲೆ ಕ್ರಮ ಕೈಗೊಳ್ಳಲು ಅವರು ಒತ್ತಾಯಿಸಿದ್ದಾರೆ.
ಇಂತಹ ಪೋಲೀಸ್ ದೌರ್ಜನ್ಯ ಘಟನೆಗಳು ನಡೆಯಬಾರದು ಎಂದು ತಿಳಿಸಿರುವ ಅವರು ಹಿಂದೂ ಕಾರ್ಯಕರ್ತರ ಜೊತೆಗೆ ಯಾವತ್ತು ನಾವಿದ್ದೇವೆ ,ಯಾವುದೇ ಭಯಬೇಡ ಎಂದು ಅವರು ಭರವಸೆ ನೀಡಿದ್ದಾರೆ.