Thursday, April 11, 2024

ಮಾಣಿಗುತ್ತು ಶ್ರೀ ಉಳ್ಳಾಲ್ತಿ, ಬೆಮ್ಮೆರ್, ಗುಡ್ಡೆಚಾಮುಂಡಿ, ಪಂಜುರ್ಲಿ ಮಲೆಕೊರತಿ ದೈವಗಳ ನೂತನ ಧರ್ಮಚಾಡಿಗೆ ಶಿಲಾನ್ಯಾಸ ಕಾರ್ಯಕ್ರಮ

ಗತಕಾಲದ ವೈಭವದಂತೆ ನೂತನವಾಗಿ ನಿರ್ಮಾಣಗೊಳ್ಳಲಿರುವ ಮಾಣಿಗುತ್ತು ಶ್ರೀ ಉಳ್ಳಾಲ್ತಿ, ಬೆಮ್ಮೆರ್, ಗುಡ್ಡೆಚಾಮುಂಡಿ, ಪಂಜುರ್ಲಿ ಮಲೆಕೊರತಿ ದೈವಗಳ ಧರ್ಮಚಾಡಿಗೆ ಶಿಲಾನ್ಯಾಸ ಕಾರ್ಯಕ್ರಮ ಅರ್ಚಕರಾದ ಪಳನೀರು ಅನಂತ ಭಟ್ಟರ ಪೌರೋಹಿತ್ಯದೊಂದಿಗೆ ವೈದಿಕ ವಿಧಿವಿಧಾನದ ಮೂಲಕ ನಡೆಯಿತು.

ಅನಾದಿಕಾಲದ ಇತಿಹಾಸವನ್ನು ಹೊಂದಿರುವ ಒಬ್ಬಳು ಉಳ್ಲಾಲ್ತಿ ಮೂವರು ದೈವಗಳು ಎನ್ನುವ ಪರಂಪರೆಯನ್ನು ಹೊಂದಿರುವ ಮಾಣಿ ಗ್ರಾಮದಲ್ಲಿ ಉಳ್ಳಾಲ್ತಿಗೆ ವರ್ಷಾವಧಿ ಒಂದು ಮೆಚ್ಚಿ ಜಾತ್ರೆಯಾದರೆ, ದೈವಗಳಿಗೆ ವರ್ಷದಲ್ಲಿ ಏಳು ಕಡೆ ನೇಮಗಳು ನಡೆಯುತ್ತದೆ. ಗ್ರಾಮದ ಈ ಎಲ್ಲಾ ಸೇವೆಗಳಿಗೆ ಮಾಣಿಗುತ್ತು ಭಂಡಾರದ ಮನೆಯಿಂದ ಭಂಡಾರ ಹೋಗುವುದು ರೂಢಿಯಾಗಿರುತ್ತದೆ.

ಹಳೆಯ ಚಾವಡಿಗೆ ಅನೇಕ ವರ್ಷಗಳು ಕಳೆದಿದ್ದು ಅಜೀರ್ಣಾವಸ್ಥೆಯಲ್ಲಿದ್ದಾಗ, ಇಪ್ಪತ್ತು ವರ್ಷಗಳ ಹಿಂದೆ ನೂತನ ಚಾವಡಿಯನ್ನು ಕಿರುದಾಗಿ ನಿರ್ಮಿಸಲಾಗಿತ್ತು. ಆದರೆ ಪ್ರಶ್ನಾಚಿಂತನೆಯಲ್ಲಿ ಮತ್ತು ದೈವಗಳ ನುಡಿಯಲ್ಲಿ ಕಂಡುಬಂದ ಪ್ರಕಾರ ಚಾವಡಿಯನ್ನು ನೂತನವಾಗಿ ಹಳೆಯ ಸಂಪ್ರದಾಯದಂತೆ ರಚಿಸುವ ಉದ್ದೇಶದಿಂದ ನಿರ್ಮಾಣ ಕಾರ್ಯಕ್ಕೆ ಗುತ್ತಿನವರು ಮತ್ತು ಗ್ರಾಮಸ್ಥರು ಮುಂದಾಗಿರುತ್ತಾರೆ.

ಮಾಣಿಗುತ್ತಿನಲ್ಲಿ ಜರುಗಿದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಶಾಸಕ ರಾಜೇಶ್ ನಾಯ್ಕ್, ಮಾಜಿ ಸಚಿವ ಬಿ. ರಮಾನಾಥ ರೈ, ವಕೀಲರಾದ ಅಶ್ವನಿ ಕುಮಾರ್ ರೈ, ಬಾಳ್ತಿಲಬೀಡು ಬೃಜೇಶ್ ಬಂಗ, ಪೂಂಜಲ್ಮಾರಗುತ್ತು ಮೋಹನ ಕುಮಾರ್ ಚೌಟ, ಪೆರಾಜೆಗುತ್ತು ಶ್ರೀಕಾಂತ್ ಆಳ್ವ, ಮಾಣಿಗುತ್ತು ನಾಗೇಶ್ ಶೆಟ್ಟಿ, ಮಾಣಿಗುತ್ತು ಸಚಿನ್ ರೈ, ಸಂತೋಷ್ ಶೆಟ್ಟಿ ಅರೆಬೆಟ್ಟು, ಜಗನ್ನಾಥ ಚೌಟ ಬದಿಗುಡ್ಡೆ, ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ, ಮಧುಸೂಧನ ಭಟ್ ಭರಣೀಕೆರೆ, ರಾಮಚಂದ್ರ ಪೂಜಾರಿ ಪಾದೆ, ವಿಜೇತ್ ಶೆಟ್ಟಿ ಅರೆಬೆಟ್ಟು, ರವೀಂದ್ರ ರೈ ಖಂಡಿಗ, ರವೀಂದ್ರ ರೈ ಮಂಜೊಟ್ಟಿ, ಗಣೇಶ್ ಭಟ್ ಮಕರಂದ, ಸಂದೀಪ್ ಶೆಟ್ಟಿ ಅರಿಯಡ್ಕ,ಗಂಗಾಧರ್ ರೈ ತುಂಗೆರೆಕೊಡಿ,ಅಮಿತ್ ಕುಮಾರ್ ಜೈನ್ ಕನ್ನೋಟ್ಟುಗುತ್ತು ಮೋಹನ್ ಪೈ ಮಾಣಿ, ಮತ್ತಿತರ ಪ್ರಮುಖರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

More from the blog

ಲೋಕಸಭಾ ಚುನಾವಣೆಯ ಹಿನ್ನೆಲೆ : ಚಾರ್ಮಾಡಿಯ ಮೂವರು ಗಡಿಪಾರು

ಬೆಳ್ತಂಗಡಿ: ಚುನಾವಣ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಹಾಗೂ ಕೋಮು ಗಲಭೆಗಳಲ್ಲಿ ಭಾಗವಹಿಸುವ ಸಾಧ್ಯತೆ ಇರುವ ಕಾರಣ ಮೂವರು ರೌಡಿಶೀಟರ್‌ಗಳನ್ನು ಧರ್ಮಸ್ಥಳ ಪೊಲೀಸರು ಗಡಿಪಾರು ಮಾಡಿದ್ದಾರೆ. ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ನಿವಾಸಿಗಳಾದ...

ಎಳನೀರು ಕುಡಿದು ಅಸ್ವಸ್ಥ ಪ್ರಕರಣ : ಫ್ಯಾಕ್ಟರಿಗೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ

ಮಂಗಳೂರು: ನಗರದ ಹೊರವಲಯದ ಎಳನೀರು ಫ್ಯಾಕ್ಟರಿಯೊಂದರಿಂದ ತಂದ ಎಳನೀರು ಕುಡಿದು ಕೆಲವರು ಅಸ್ವಸ್ಥರಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವರದಿ ಆಧಾರದಲ್ಲಿ ದ.ಕ ಜಿಲ್ಲಾ ಆರೋಗ್ಯಾಧಿಕಾರಿ ಡಾ| ತಿಮ್ಮಯ್ಯ ಅವರು ಫ್ಯಾಕ್ಟರಿಗೆ ಭೇಟಿ...

ಹಿತೈಷಿ ತರಬೇತಿ ಕೇಂದ್ರದ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಫಲಿತಾಂಶದೊಂದಿಗೆ ತೇರ್ಗಡೆ

2023-24ನೇ ಸಾಲಿನ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಪಾಣೆಮಂಗಳೂರು, ನರಿಕೊಂಬುವಿನಲ್ಲಿರುವ ಹಿತೈಷಿ ತರಬೇತಿ ಕೇಂದ್ರದ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ. ಕು.ಕೀರ್ತನ ಶೇ.95.6% ಅಂಕಗಳೊಂದಿಗೆ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ ಎಂದು ಸಂಸ್ಥೆಯ ಪ್ರಕಟನೆಯಲ್ಲಿ ತಿಳಿಸಲಾಗಿದೆ. 2024-25ನೇ...

ಬಂಟ್ವಾಳದ ಉಳಿ ಗ್ರಾಮದಲ್ಲಿ ಮತದಾರರ ಮನೆಗೆ ಭೇಟಿ ನೀಡಿ ಮತಯಾಚನೆ ನಡೆಸಿದ ಶಾಸಕ ರಾಜೇಶ್ ನಾಯ್ಕ್

ಲೋಕ ಸಭಾ ಚುನಾವಣೆಯ ಹಿನ್ನಲೆಯಲ್ಲಿ ಕ್ಯಾ.ಬ್ರಿಜೇಶ್ ಚೌಟ ಅವರ ಗೆಲುವಿಗಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಗ್ರಾಮ,ಮನೆ,ಮನ ಅಭಿಯಾನದ ಅಂಗವಾಗಿ ಬಂಟ್ವಾಳದ ಉಳಿ ಗ್ರಾಮದಲ್ಲಿ ಮತದಾರರ ಮನೆಗೆ ಬೇಟಿ ನೀಡಿ...