Saturday, April 13, 2024

ಸಬ್​ ಇನ್ಸ್​ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ : 1 ಲಕ್ಷಕ್ಕೂ ಹೆಚ್ಚು ಸಂಬಳ, ಇಲ್ಲಿದೆ ಡಿಟೈಲ್ಸ್‌

ಇಂಡೋ-ಟೆಬೆಟಿಯನ್ ಗಡಿ ಪೊಲೀಸ್ ಪಡೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 9 ಸಬ್​ ಇನ್ಸ್​ಪೆಕ್ಟರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್​ಲೈನ್ ಮೂಲಕ ಅರ್ಜಿ ಹಾಕಬೇಕು.  ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಇಲ್ಲಿದೆ ಮಾಹಿತಿ.

ಹುದ್ದೆಯ ಮಾಹಿತಿ:
ಸಬ್​ ಇನ್ಸ್​ಪೆಕ್ಟರ್ (ಪುರುಷ)- 8
ಸಬ್​ ಇನ್ಸ್​ಪೆಕ್ಟರ್ (ಮಹಿಳೆ)-1

ವಿದ್ಯಾರ್ಹತೆ:

ಇಂಡೋ-ಟೆಬೆಟಿಯನ್ ಗಡಿ ಪೊಲೀಸ್ ಪಡೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿರಬೇಕು.

ವಯೋಮಿತಿ:
ಇಂಡೋ-ಟೆಬೆಟಿಯನ್ ಗಡಿ ಪೊಲೀಸ್ ಪಡೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಜೂನ್ 17, 2023ಕ್ಕೆ ಕನಿಷ್ಠ 20 ವರ್ಷ ಮತ್ತು ಗರಿಷ್ಠ 25 ವರ್ಷ ಮೀರಿರಬಾರದು.

ಅರ್ಜಿ ಶುಲ್ಕ:
SC/ ಮಾಜಿ ಸೈನಿಕ/ ಮಹಿಳಾ ಅಭ್ಯರ್ಥಿಗಳು- ಅರ್ಜಿ ಶುಲ್ಕ ಇಲ್ಲ
ಉಳಿದ ಅಭ್ಯರ್ಥಿಗಳು- 200 ರೂ.
ಪಾವತಿಸುವ ಬಗೆ- ಆನ್​ಲೈನ್

ವೇತನ:
ಮಾಸಿಕ 35,400-1,12,400

ಉದ್ಯೋಗದ ಸ್ಥಳ:
ಭಾರತದಲ್ಲಿ ಎಲ್ಲಿ ಬೇಕಾದರೂ.

ಆಯ್ಕೆ ಪ್ರಕ್ರಿಯೆ:
ದೈಹಿಕ ದಕ್ಷತೆಯ ಪರೀಕ್ಷೆ
ದೈಹಿಕ ಪ್ರಮಾಣಿತ ಪರೀಕ್ಷೆ
ಲಿಖಿತ ಪರೀಕ್ಷೆ
ದಾಖಲೆಗಳ ಪರಿಶೀಲನೆ
DME/RME

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 19/05/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಜೂನ್ 17, 2023

More from the blog

ಲೋಕಸಭಾ ಚುನಾವಣೆ : ಮತಯಂತ್ರಗಳ ಕಮಿಷನಿಂಗ್‌ ಕಾರ್ಯ…. ಸ್ಥಳಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್‌ ಭೇಟಿ

ಬಂಟ್ವಾಳ :ಮೊಡಂಕಾಪಿನಲ್ಲಿರುವ ಇನ್ಫೆಂಟ್‌ ಜೀಸಸ್‌ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈ ದಿನ ಲೋಕಸಭಾ ಚುನಾವಣೆ 2024 ಕ್ಕೆ ಸಂಬಂಧಿಸಿದಂತೆ 205 ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಬಳಸಲಾಗುವ ಮತಯಂತ್ರಗಳ ಕಮಿಷನಿಂಗ್‌ ಕಾರ್ಯವು ನಡೆಯಿತು. ಈ ಸಂದರ್ಭದಲ್ಲಿ...

ಯುವಮೋರ್ಚಾ ಬಂಟ್ವಾಳ ವತಿಯಿಂದ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲೆಂದು ಬಿ. ಸಿ ರೋಡಿನ ರಕ್ತೇಶ್ವರಿ ದೇವಸ್ಥಾನದಲ್ಲಿ ಪ್ರಾರ್ಥನೆ

ಯುವಮೋರ್ಚಾ ಬಂಟ್ವಾಳ ವತಿಯಿಂದ ನರೇಂದ್ರ ಮೋದಿ ಮತೊಮ್ಮೆ ಪ್ರಧಾನಿಯಾಗಲೆಂದು ರಕ್ತೇಶ್ವರಿ ದೇವಸ್ಥಾನ ಬಿ. ಸಿ ರೋಡಿನಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.

ಆಯತಪ್ಪಿ ಬಾವಿಗೆ‌ ಬಿದ್ದ ಮಹಿಳೆ… ಅಗ್ನಿಶಾಮಕ ಸಿಬ್ಬಂದಿಗಳಿಂದ ರಕ್ಷಣೆ

ಮಂಗಳೂರು: ಬಾವಿಯಿಂದ ನೀರು ಸೇದುತ್ತಿದ್ದಾಗ ಆಯತಪ್ಪಿ ಬಾವಿಗೆ ಬಿದ್ದ ಮಹಿಳೆಯೋರ್ವರನ್ನು ಗುರುವಾರ ಕದ್ರಿ ಅಗ್ನಿಶಾಮಕ ಠಾಣೆಯವರು ರಕ್ಷಿಸಿದ್ದಾರೆ ಬಿಕ್ಕರ್ನಕಟ್ಟೆ ಸಮೀಪದ ನಿವಾಸಿ ಟ್ರೆಸ್ಸಿ ಡಿಸೋಜಾ ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ರಕ್ಷಿಸಲ್ಪಟ್ಟ ಮಹಿಳೆ. ಸಂಜೆ 5 ಗಂಟೆ...

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ವಾರ್ಷಿಕ ಜಾತ್ರೆ..ಮಹಾರಥೋತ್ಸವ ಕಣ್ಣುಂಬಿಕೊಂಡ ಸಾವಿರಾರು ಭಕ್ತರು

ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆಯಲ್ಲಿ ಎ. ೧೧ರಂದು ಸಂಜೆ ರಥೋತ್ಸವ ನಡೆಯಿತು. ಜಾತ್ರೆಯಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ಮಹಾಪೂಜೆಯ ಬಳಿಕ ದೇವರು ರಥಾರೋಹಣಗೊಂಡು ಸಾಂಕೇತಿಕವಾಗಿ ರಥವನ್ನು ಎಳೆಯಲಾಯಿತು. ಮಧ್ಯಾಹ್ನ ರಥಕ್ಕೆ...