ಅಹಮದಾಬಾದ್: 2023ರ ಐಪಿಎಲ್ ಪಂದ್ಯಾಟ ಎರಡು ತಿಂಗಳು, 12 ಕ್ರೀಡಾಂಗಣಗಳು, 75 ಪಂದ್ಯಗಳ ಬಳಿಕ ಅಭೂತಪೂರ್ವ ಅಂತ್ಯ ಕಂಡಿದೆ. ಚಾಂಪಿಯನ್ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐದನೇ ಬಾರಿಗೆ ಟ್ರೋಫಿ ಗೆದ್ದು ಬೀಗಿದೆ.
ಪ್ರಶಸ್ತಿಗಳ ವಿವರ ಇಲ್ಲಿದೆ.
ವಿಜೇತರು: ಚೆನ್ನೈ ಸೂಪರ್ ಕಿಂಗ್ಸ್ 20 ಕೋಟಿ ರೂ. + ಟ್ರೋಫಿ
ರನ್ನರ್ ಅಪ್: ಗುಜರಾತ್ ಟೈಟಾನ್ಸ್, 13 ಕೋಟಿ ರೂ.
ಮೂರನೇ ಸ್ಥಾನ: ಮುಂಬೈ ಇಂಡಿಯನ್ಸ್, 7 ಕೋಟಿ ರೂ.
ನಾಲ್ಕನೇ ಸ್ಥಾನ: ಲಕ್ನೋ ಸೂಪರ್ ಜೈಂಟ್ಸ್, 6.5 ಕೋಟಿ ರೂ.
ಋತುವಿನ ಅತ್ಯುತ್ತಮ ಕ್ರೀಡಾಂಗಣಗಳು: ಈಡನ್ ಗಾರ್ಡನ್ಸ್ ಮತ್ತು ವಾಂಖೆಡೆ ಸ್ಟೇಡಿಯಂ
ಐಪಿಎಲ್ ಫೇರ್ ಪ್ಲೇ ಪ್ರಶಸ್ತಿ: ಡೆಲ್ಲಿ ಕ್ಯಾಪಿಟಲ್ಸ್
ಆರೆಂಜ್ ಕ್ಯಾಪ್ (ಅತಿ ಹೆಚ್ಚು ರನ್ ಸ್ಕೋರರ್): ಶುಭಮನ್ ಗಿಲ್ (ಗುಜರಾತ್) 890 ರನ್-ಆರೆಂಜ್ ಕ್ಯಾಪ್ + 15 ಲಕ್ಷ ರೂ.
ಪರ್ಪಲ್ ಕ್ಯಾಪ್ (ಪ್ರಮುಖ ವಿಕೆಟ್ ಟೇಕರ್): ಮೊಹಮ್ಮದ್ ಶಮಿ (ಗುಜರಾತ್) 28 ವಿಕೆಟ್, ಪರ್ಪಲ್ ಕ್ಯಾಪ್ + 15 ಲಕ್ಷ ರೂ.
ಟೂರ್ನಮೆಂಟ್ ನ ಸೂಪರ್ ಸ್ಟ್ರೈಕರ್: ಗ್ಲೆನ್ ಮ್ಯಾಕ್ಸ್ವೆಲ್, ಟ್ರೋಫಿ + 10 ಲಕ್ಷ ರೂ.
ಗೇಮ್ ಟೂರ್ನಮೆಂಟ್ ಚೇಂಜರ್: ಶುಭಮನ್ ಗಿಲ್
ಪ್ಲೇಯರ್ ಆಫ್ ದಿ ಫೈನಲ್ ಮ್ಯಾಚ್: ಡೆವೊನ್ ಕಾನ್ವೆ, ಟ್ರೋಫಿ + 1 ಲಕ್ಷ ರೂ.
ಪಂದ್ಯಾವಳಿಯ ವಾಲ್ಯೂಯೇಬಲ್ ಅಸೆಟ್: ಶುಭ್ಮನ್ ಗಿಲ್, ಟ್ರೋಫಿ + 12 ಲಕ್ಷ ರೂ.
ಹೆಚ್ಚು ಬೌಂಡರಿಗಳ ಪ್ರಶಸ್ತಿ: ಶುಭಮನ್ ಗಿಲ್
ಅತೀ ಉದ್ದದ ಸಿಕ್ಸ್ ಪ್ರಶಸ್ತಿ: ಫಾಫ್ ಡು ಪ್ಲೆಸಿಸ್ (115 ಮೀ), ಟ್ರೋಫಿ + 12 ಲಕ್ಷ ರೂ.
ಕ್ಯಾಚ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ: ರಶೀದ್ ಖಾನ್
ಉದಯೋನ್ಮುಖ ಆಟಗಾರ: ಯಶಸ್ವಿ ಜೈಸ್ವಾಲ್, ಟ್ರೋಫಿ + 20 ಲಕ್ಷ ರೂ.