ಬಂಟ್ವಾಳ: ಕರ್ನಾಟಕ ರಾಜ್ಯ ವಿಧಾನಸಭೆಗೆ ಬೆಳಿಗ್ಗೆ 7 ಗಂಟೆಯಿಂದ ಮತದಾನ ಆರಂಭಗೊಂಡಿದ್ದು, ಎಲ್ಲೆಡೆ ಬಿರುಸಿನ ಮತದಾನ ನಡೆಯುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನ ಸರತಿಯ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿದ್ದಾರೆ.
ಇನ್ನು ಬಂಟ್ವಾಳದಲ್ಲೂ ಮತದಾನ ಬಿರುಸು ಪಡೆದುಕೊಂಡಿದ್ದು, 7 ಗಂಟೆಯಿಂದ 9 ಗಂಟೆಯವರೆಗೆ 11.24 % ಮತದಾನವಾಗಿದೆ. 9 ಗಂಟೆಯಿಂದ 11 ಗಂಟೆಯವರೆಗೆ 29.51 % ಮತದಾನವಾಗಿದ್ದು, ಇನ್ನು 11 ಗಂಟೆಯಿಂದ 1 ಗಂಟೆಯವರೆಗೆ 47.02% ಮತದಾನವಾಗಿದೆ.
ಸಧ್ಯಕರಾವಳಿ ಜಿಲ್ಲೆಗಳಾದ ದಕ್ಷಿಣಕನ್ನಡ, ಉಡುಪಿ ಬೆಳಗ್ಗೆ 11 ಗಂಟೆವರೆಗೆ ಕ್ರಮವಾಗಿ ಶೇ.28.16 ಮತ್ತು 30.26%ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. ಬೆಳ್ತಂಗಡಿ 28.89%, ಮಂಗಳೂರು 26.54%, ಮಂಗಳೂರು ಉತ್ತರ 27.31%, ಮಂಗಳೂರು ದಕ್ಷಿಣ 25.57%, ಮೂಡುಬಿದಿರೆ 27.52%, ಸುಳ್ಯ 30.52%, ಪುತ್ತೂರು 29.79% ರಷ್ಟು ಮತದಾನವಾಗಿದೆ