ಬಂಟ್ವಾಳ: ದ.ಕ.ಜಿಲ್ಲೆಯ ಹೈ ವೋಲ್ಟೇಜ್ ಕ್ಷೇತ್ರವಾಗಿರುವ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಪರ ಪ್ರಚಾರಕ್ಕೆ ಈ ಬಾರಿ ಮತ್ತೆ ಯೋಗಿ ಆದಿತ್ಯನಾಥ್ ಬರುವ ಸಾಧ್ಯತೆ ಇದೆ ಎಂಬ ಮಾಹಿತಿ ಬಿಜೆಪಿ ಮೂಲಗಳಿಂದ ಲಭ್ಯವಾಗಿದೆ.
ಎ.26 ರಂದು ಬುಧವಾರ ಬಂಟ್ವಾಳದಲ್ಲಿ ಶಾಸಕ ರಾಜೇಶ್ ನಾಯ್ಕ್ ಅವರ ಪರವಾಗಿ ಮತಯಾಚನೆಗಾಗಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬರುತ್ತಾರೆ ಎಂಬುದು ತಿಳಿದುಬಂದಿದೆ.
ಕಳೆದ ಬಾರಿ ಕೂಡ ರಾಜೇಶ್ ನಾಯ್ಕ್ ಅವರ ಪರವಾಗಿ ಕೈಕಂಬದಿಂದ ಬಿಸಿರೋಡಿನ ವೃತ್ತದ ವರಗೆ ರೋಡ್ ಶೋ ನಡೆಸಿದ್ದರು.
ಅದೇ ಮಾದರಿಯಲ್ಲಿ ಮತ್ತೆ ಈ ಬಾರಿ ರೋಡ್ ಶೋ ಮೂಲಕ ಯುವಕರ ಸ್ಟಾರ್ ಆಗಿರುವ ಯೋಗಿ ಆದಿತ್ಯನಾಥ್ ಅವರು ರೋಡ್ ಶೋ ಮೂಲಕ ಪ್ರಚಾರ ಮಾಡಲಿದ್ದಾರೆ.
ಹವಾ ಸೃಷ್ಟಿ ಮಾಡುತ್ತಾ ಯೋಗಿ ರೋಡ್ ಶೋ….
ದೇಶದಲ್ಲಿ ಯೋಗಿ ಮಾದರಿ ಆಡಳಿತಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸುವುದು ಒಂದು ಕಡೆಯಾದರೆ ಇನ್ನೊಂದು ಕಡೆ ಯುವಕರ ಅಚ್ಚುಮೆಚ್ಚಿನ ನಾಯಕನಾಗಿಯೂ ಯೋಗಿ ಅವರು ಹೆಸರುವಾಸಿಯಾಗಿದ್ದಾರೆ.
ಹಾಗಾಗಿ ಯೋಗಿ ಆದಿತ್ಯನಾಥ್ ಅವರು ಪ್ರಚಾರಕ್ಕೆ ಹೋದ ಎಲ್ಲಾ ಕಡೆಗಳಲ್ಲಿ ರಾಜಕೀಯ ಹವಾ ಸೃಷ್ಟಿ ಮಾಡಿದೆ.
ಅದೇ ಮಾದರಿಯಲ್ಲಿ ಬಂಟ್ವಾಳದಲ್ಲಿ ಬಿಜೆಪಿ ಹವಾ ಸೃಷ್ಟಿ ಮಾಡುತ್ತಾರಾ? ಯೋಗಿ ಎಂಬುದು ಕಾದುನೋಡಬೇಕಾಗಿದೆ.
ಬಿಜೆಪಿ ಮಾಸ್ ಲೀಡರ್ ಗಳಾದ ಪ್ರಧಾನಿ ನರೇಂದ್ರ ಮೋದಿ ಹಾಗೂ ಯುಪಿ.ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇಬ್ಬರು ರಾಜ್ಯದಲ್ಲಿ ಚುನಾವಣಾ ಪ್ರಚಾರದ ಟಾಪ್ ಲೀಡರ್ ಗಳಾಗಿದ್ದಾರೆ.