Wednesday, April 17, 2024

ಕೆರೆಯಲ್ಲಿ ಬಿದ್ದ ಕಾಡಾನೆಗಳು : ರಕ್ಷಣಾ ಕಾರ್ಯಾಚರಣೆ ಯಶಸ್ವಿ

ಸುಳ್ಯ: ಅಜ್ಜಾವರ ಗ್ರಾಮದ ತುದಿಯಡ್ಕದಲ್ಲಿ ಸಂತೋಷ್ ರೈ ಗಳ ತೋಟದ ಕೆರೆಗೆ ಬಿದ್ದ ಕಾಡಾನೆಯನ್ನು ಮೇಲೆತ್ತುವಲ್ಲಿ ಅರಣ್ಯ ಇಲಾಖೆ ಹಾಗೂ ಊರವರು ಯಶಸ್ವಿಯಾಗಿದ್ದಾರೆ.

ಕರೆಯ ಒಂದು ಭಾಗದಲ್ಲಿ ಅಗೆದು ದೊಡ್ಡ ಗಾತ್ರದ ಎರಡು ಆನೆಗಳು ಮೇಲಕ್ಕೆ ಬಂದು ಕಾಡು ಸೇರಿದ್ದು, ಒಂದು ಮರಿಯಾನೆ ಕಷ್ಟದಲ್ಲೇ ಅದೇ ದಾರಿಯಲ್ಲಿ ಮೇಲತ್ತಿತು. ಬಳಿಕ ಒಂದು ಮರಿಯಾನೆ ಕೆರೆಯಲ್ಲೇ ಬಾಕಿಯಾಯಿತು.‌ ಬಳಿಕ ಅದರ ಕತ್ತಿಗೆ ಹಗ್ಗ ಹಾಕಿ‌ ಮೇಲೆತ್ತುವ ಪ್ರಯತ್ನ ನಡೆಯಿತು.‌

ಇನ್ನು ಕೆಲ ಹೊತ್ತು‌ ಕಾರ್ಯಾಚಾರಣೆ ಬಳಿಕ ಅರಣ್ಯ ಇಲಾಖಾ ಸಿಬ್ಬಂದಿಗಳು ಮತ್ತು ಊರಿನ ಕೆಲ ಯುವಕರು ಕೆರೆಗೆ ಇಳಿದು ಆನೆ ಮರಿಯನ್ನು ದೂಡಿ ಮೇಲತ್ತಿಸಿದರು. ಆದರೆ ಆನೆ ಸುಸ್ತಾಗಿದ್ದು ಸರಿಯಾಗಿ ನಡೆದಾಡಲೂ ಸಾಧ್ಯವಾಗದಿದ್ದರಿಂದ ಅದನ್ನು ದೂಡಿಕೊಂಡು ಕಾಡಿಗೆ ಸಾಗಿಸಲಾಯಿತು.

More from the blog

ಬಂಟ್ವಾಳದ ಕರ್ಪೆ ಗ್ರಾಮದಲ್ಲಿ ಮನೆಗಳಿಗೆ ಭೇಟಿ ನೀಡಿ ಮತಯಾಚನೆ ನಡೆಸಿದ ಶಾಸಕ ರಾಜೇಶ್ ನಾಯ್ಕ್

ಲೋಕಸಭಾ ಚುನಾವಣೆಯಲ್ಲಿ ಕ್ಯಾ.ಬ್ರಿಜೇಶ್ ಚೌಟ ಅವರನ್ನು ಬಹುಮತದಿಂದ ಗೆಲ್ಲಿಸಿಕೊಡುವಂತೆ "ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹಾಗೂ ಜಿ.ಪಂ.ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ ಅವರು ಗ್ರಾಮ,ಮನೆ,ಮನ ಸಂಪರ್ಕ ಅಭಿಯಾನ" ಕಾರ್ಯಕ್ರಮದ ಮೂಲಕ ಬಂಟ್ವಾಳದ...

ಕುಡಿದ ಮತ್ತಿನಲ್ಲಿ ರೈಲ್ವೆ ಗೇಟ್ ಗೆ ಡಿಕ್ಕಿ ಹೊಡೆದು ಆವಾಂತರ ಸೃಷ್ಟಿಸಿದ ಮನೋರೋಗ ತಜ್ಞ

ಮಂಗಳೂರಿನ ಹೆಸರಾಂತ ಮನೋರೋಗ ತಜ್ಞರೊಬ್ಬರು ಕುಡಿದ ಮತ್ತಿನಲ್ಲಿ ರೈಲ್ವೆ ಗೇಟ್ ಗೆ ಡಿಕ್ಕಿ ಹೊಡೆದು ಆವಾಂತರ ಸೃಷ್ಟಿಸಿದ ಘಟನೆ ನಗರ ಹೊರ ವಲಯದ ಪರಂಗಿಪೇಟೆ ಬಳಿಯ ಅರ್ಕುಳ ಎಂಬಲ್ಲಿ ನಿನ್ನೆ ರಾತ್ರಿ ಸಂಭವಿಸಿದೆ. ಕುಡಿದ...

ಅಯೋಧ್ಯೆಯಲ್ಲಿ ಅದ್ಧೂರಿ ರಾಮನವಮಿ ; ರಾಮಲಲ್ಲಾ ಹಣೆ ಮೇಲೆ ಸೂರ್ಯ ತಿಲಕ

ಅಯೋಧ್ಯೆ: ಬರೋಬ್ಬರಿ 500 ವರ್ಷಗಳ ಬಳಿಕ ಅಯೋಧ್ಯೆಯಲ್ಲಿ ಮೊದಲ ಶ್ರೀರಾಮನವಮಿಯನ್ನು ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತಿದೆ. ಮೊದಲ ರಾಮನವಮಿಯಂದು ರಾಮಲಲ್ಲಾನಿಗೆ ಸೂರ್ಯನ ತಿಲಕ ಸ್ಪರ್ಶಿಸಿದ್ದು, ಸೂರ್ಯವಂಶಸ್ಥನಿಗೆ ಸೂರ್ಯನ ಅಭಿಷೇಕ ನೆರವೇರಿಸಲಾಗಿದೆ. ರಾಮನವಮಿ ಅಂಗವಾಗಿ ಮಧ್ಯಾಹ್ನ 12 ಗಂಟೆಗೆ...

ಪುಣಚ: ಸೇತುವೆ ಕುಸಿತ ಪ್ರಕರಣ : ಗುತ್ತಿಗೆದಾರರ ವಿರುದ್ದ ಪ್ರಕರಣ

ವಿಟ್ಲ: ವಿಟ್ಲದ ಪುಣಚ ಗ್ರಾಮದ ಬರೆಂಜಾ - ಕುರುಡಕಟ್ಟೆ ಸಂಪರ್ಕ ರಸ್ತೆಯ ಮಲ್ಲಿಪ್ಪಾಡಿಯಲ್ಲಿ ನಿರ್ಮಾಣ ಹಂತದಲ್ಲಿ ಸೇತುವೆ ಕುಸಿದುಬಿದ್ದ ಅವಘಡದಲ್ಲಿ ಗಾಯಗೊಂಡ ಏಳು ಮಂದಿ ಕಾರ್ಮಿಕರು ಆಸ್ಪತ್ರೆಗಳಲ್ಲಿ ಚೇತರಿಸುತ್ತಿದ್ದಾರೆ. ಇನ್ನೊಂದೆಡೆ ಈ ಪ್ರಕರಣಕ್ಕೆ...