Wednesday, April 17, 2024

ಒಂದೇ ವಾಟ್ಸಾಪ್‌ ಖಾತೆಯನ್ನು ನಾಲ್ಕು ಫೋನ್​ಗಳಲ್ಲಿ ಬಳಸಬಹುದು…, ಹೇಗೆ…?

ಒಂದು ವಾಟ್ಸಾಪ್‌ ಖಾತೆಯನ್ನು ಮೊಬೈಲ್, ಲ್ಯಾಪ್​ಟಾಪ್​, ಡೆಸ್ಕ್​ಟಾಪ್​​ಗಳಲ್ಲಿ ಬಳಸಲು ಅವಕಾಶವಿದ್ದರೆ ಒಂದಕ್ಕಿಂತ ಹೆಚ್ಚು ಸ್ಮಾರ್ಟ್​ಫೋನ್​ಗಳಲ್ಲಿ ಬಳಸಲು ಈವರೆಗೆ ಅವಕಾಶವಿರಲಿಲ್ಲ. ಇದೀಗ ಮೆಸೇಜಿಂಗ್ ಆ್ಯಪ್ ಹೊಸ ಆಯ್ಕೆಯನ್ನು ಬಳಕೆದಾರರಿಗೆ ನೀಡಿದ್ದು, ಒಂದೇ ಬಾರಿಗೆ ನಾಲ್ಕು ಫೋನ್​ಗಳಲ್ಲಿ ಒಂದೇ ವಾಟ್ಸಾಪ್‌ ಖಾತೆಯನ್ನು ಬಳಸಬಹುದಾಗಿದೆ. ಈ ವಿಚಾರವಾಗಿ ವಾಟ್ಸ್​​ಆ್ಯಪ್ ಒಡೆತನ ಹೊಂದಿರುವ ಮೆಟಾ ಸಿಇಒ ಮಾರ್ಕ್​ ಝುಕರ್​ಬರ್ಗ್ ಫೇಸ್​​ಬುಕ್​ನಲ್ಲಿ ಮಾಹಿತಿ ನೀಡಿದ್ದಾರೆ.

ಬೇರೆ ಫೋನ್​ನಲ್ಲಿ ವಾಟ್ಸಾಪ್‌ ಖಾತೆ ಬಳಸಬೇಕಿದ್ದರೆ ಹೊಸದಾಗಿ ಇನ್​​ಸ್ಟಾಲ್ ಮಾಡಿಕೊಳ್ಳಬೇಕು. ನಂತರ ಖಾತೆ ಸೆಟಪ್ ಮಾಡುವಾಗ ಫೋನ್ ನಂಬರ್ ನಮೂದಿಸುವ ಬದಲು ‘ಅಸ್ತಿತ್ವದಲ್ಲಿರುವ ಖಾತೆʼ ಆಯ್ಕೆಯನ್ನು ಆಯ್ದುಕೊಳ್ಳಬೇಕು. ಆಗ ಕ್ಯುಆರ್ ಕೋಡ್ ಕಾಣಿಸುತ್ತದೆ. ನಂತರ ನೀವು ಈಗಾಗಲೇ ವಾಟ್ಸಾಪ್‌ ಖಾತೆ ಹೊಂದಿರುವ ಫೋನ್​ನಿಂದ ಸ್ಕ್ಯಾನ್ ಮಾಡುವ ಮೂಲಕ ಲಾಗಿನ್ ಆಗಬಹುದು. ಹೊಸ ಆಯ್ಕೆಯು iOS ಮತ್ತು Android ಸ್ಮಾರ್ಟ್​​ಫೋನ್​ಗಳಲ್ಲಿ ಲಭ್ಯವಿದೆ.


ಮೊದಲು ವಾಟ್ಸ್​ಆ್ಯಪ್​ ಲಾಗಿನ್ ಆಗಿರುವ ಮೊಬೈಲ್​ಫೋನ್ ದೀರ್ಘಕಾಲದವರೆಗೆ ನಿಷ್ಕ್ರಿಯವಾಗಿದ್ದರೆ, ಆ ನಂತರ ವಾಟ್ಸಾಪ್‌ ಲಾಗಿನ್ ಆಗಿರುವ ಎಲ್ಲ ಫೋನ್​ಗಳಿಂದ ಸ್ವಯಂಚಾಲಿತವಾಗಿ ಲಾಗೌಟ್ ಆಗಲಿದೆ. ಏಕ ಕಾಲಕ್ಕೆ ನಾಲ್ಕು ಫೋನ್​ಗಳಲ್ಲಿ ವಾಟ್ಸಾಪ್‌​ನ ಒಂದೇ ಖಾತೆ ಬಳಸುವ ಈ ಆಯ್ಕೆಯಿಂದ ಸಂದೇಶ ಕಳುಹಿಸುವ ಪ್ರಕ್ರಿಯೆ ಇನ್ನಷ್ಟು ಸರಳಗೊಳ್ಳಲಿದೆ. ಸೈನ್ ಔಟ್ ಮಾಡದೆಯೇ ಬೇರೆ ಫೋನ್​ನಿಂದ ಮೆಸೇಜ್ ಕಳುಹಿಸುವುದು, ಅರ್ಧಕ್ಕೆ ನಿಲ್ಲಿಸಿದ್ದ ಚಾಟ್​ಗಳನ್ನು ಮುಂದುವರಿಸಲು ಅನುಕೂಲವಾಗಲಿದೆ. ಮುಂದಿನ ಕೆಲವೇ ದಿನಗಳಲ್ಲಿ ಈ ಅಪ್​ಡೇಟ್​ ವಿಶ್ವದಾದ್ಯಂತ ಎಲ್ಲ ಬಳಕೆದಾರರಿಗೆ ದೊರೆಯಲಿದೆ ಎಂದು ಕಂಪನಿ ತಿಳಿಸಿದೆ.

More from the blog

ನರಿಕೊಂಬು: ನವಜೀವನ ವ್ಯಾಯಾಮ ಶಾಲೆ: 21ರಂದು ಹನುಮಾನ್ ಮಂದಿರ ಲೋಕಾರ್ಪಣೆ

ಬಂಟ್ವಾಳ: ಇಲ್ಲಿನ ನರಿಕೊಂಬು ಗ್ರಾಮದ ನವಜೀವನ ವ್ಯಾಯಾಮ ಶಾಲೆ ವತಿಯಿಂದ ರೂ 1 ಕೋಟಿ ವೆಚ್ಚದಲ್ಲಿ ಪುನರ್ ನಿಮರ್ಾಣಗೊಂಡ ಶ್ರೀ ಹನುಮಾನ್ ಮಂದಿರ ಲೋಕಾರ್ಪಣೆ ಮತ್ತು ಶ್ರೀ ಆಂಜನೇಯ ಬಿಂಬ ಪುನರ್ ಪ್ರತಿಷ್ಠೆ...

ಜಿಲ್ಲೆಯಲ್ಲಿ ಜೆ.ಡಿ.ಎಸ್.ಪಕ್ಷ ನಿಷ್ಕ್ರಿಯವಾಗಲು ಕಾರಣರಾದ ಜೆ.ಡಿ.ಎಸ್.ಜಿಲ್ಲಾಧ್ಯಕ್ಷ ಮಾದವ ಗೌಡರು ರಾಜೀನಾಮೆ ನೀಡುವಂತೆ ಒತ್ತಾಯ

ಜೆ.ಡಿ.ಎಸ್.ಪಕ್ಷ ಜಿಲ್ಲೆಯಲ್ಲಿ ನಿಷ್ಕ್ರಿಯವಾಗಲು ಜೆ.ಡಿ.ಎಸ್.ಜಿಲ್ಲಾಧ್ಯಕ್ಷ ಮಾದವ ಗೌಡ ಅವರೇ ಕಾರಣರಾಗಿದ್ದು, ನೈತಿಕ ಹೊಣೆ ಹೊತ್ತು ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಜೆಡಿಎಸ್ ಮುಖಂಡ ಅಬುಬಕ್ಕರ್ ಅಮ್ಮಂಜೆ ಅವರು ಪತ್ರಿಕಾ ಹೇಳಿಕೆ ನೀಡಿದ್ದಾರೆ. ಜಿಲ್ಲೆಯಲ್ಲಿ ಅಧ್ಯಕ್ಷ...

ಹಿಂದೂ ಸಂಘಟನೆ ಮುಖಂಡನಿಗೆ ಚೂರಿ ಇರಿದ ಪ್ರಕರಣ : ಆರೋಪಿ ಅರೆಸ್ಟ್

ಬಂಟ್ವಾಳ: ಹಿಂದೂ ಸಂಘಟನೆಯ ಮುಖಂಡನೋರ್ವನಿಗೆ ಚೂರಿ ಇರಿದು ಪರಾರಿಯಾಗಿದ್ದ ಆರೋಪಿಯನ್ನು ಬಂಟ್ವಾಳ ನಗರ ಠಾಣೆಯ ಪೋಲೀಸರು ಬಂಧಿಸಿದ ಘಟನೆ ಇಂದು ನಡೆದಿದೆ. ಬಂಟ್ವಾಳ ನಿವಾಸಿ ರವಿ ಯಾನೆ ರವೀಂದ್ರ ಬಂಧಿತ ಆರೋಪಿಯಾಗಿದ್ದಾನೆ. ಎ.14 ರಂದು ಆದಿತ್ಯವಾರ...

ಬಂಟ್ವಾಳ: ಕರ್ಪೆ ಗ್ರಾಮದ ಮನೆಗಳಿಗೆ ಭೇಟಿ ನೀಡಿ ಮತಯಾಚನೆ ನಡೆಸಿದ ಶಾಸಕ ರಾಜೇಶ್ ನಾಯ್ಕ್

ಲೋಕಸಭಾ ಚುನಾವಣೆಯಲ್ಲಿ ಕ್ಯಾ.ಬ್ರಿಜೇಶ್ ಚೌಟ ಅವರನ್ನು ಬಹುಮತದಿಂದ ಗೆಲ್ಲಿಸಿಕೊಡುವಂತೆ "ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹಾಗೂ ಜಿ.ಪಂ.ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ ಅವರು ಗ್ರಾಮ,ಮನೆ,ಮನ ಸಂಪರ್ಕ ಅಭಿಯಾನ" ಕಾರ್ಯಕ್ರಮದ ಮೂಲಕ ಬಂಟ್ವಾಳದ...