Sunday, April 14, 2024

ಕ್ರಿಸ್ಟಿಯನ್ ರ ವಿರುದ್ಧ ದ್ವೇಷ ಭಾಷಣ ಮಾಡಿರುವುದಾಗಿ ಆರೋಪಿಸಿ ಡಾ. ಪ್ರಸಾದ್ ಭಂಡಾರಿಯವರ ವಿರುದ್ಧ ಜಿಲ್ಲಾ ಎಸ್.ಪಿ ಗೆ ಕೆಥೋಲಿಕ್ ಸಭಾ ಮಂಗಳೂರು ಪ್ರದೇಶ್‌ನಿಂದ ದೂರು

ಪುತ್ತೂರು: ಪುತ್ತೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಡಾ. ಪ್ರಸಾದ್ ಭಂಡಾರಿ ಅವರು ದ್ವೇಷಪೂರಿತ ಭಾಷಣ ಮಾಡಿರುವುದಾಗಿ ಆರೋಪಿಸಿ ಅವರ ವಿರುದ್ಧ ಜಿಲ್ಲಾ ಎಸ್.ಪಿ ಅವರಿಗೆ ಕೆಥೋಲಿಕ್ ಸಭಾ ಮಂಗಳೂರು ಪ್ರದೇಶದ ವತಿಯಿಂದ ದೂರು ನೀಡಲಾಗಿದೆ.

ಬಿಷಪ್ ಮತ್ತು ಕೆಥೋಲಿಕ್ ಚರ್ಚ್ ಪರವಾಗಿ ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿಗಳಾದ ವಂ|ಫಾ|ಡಾ|.ಜೆ.ಬಿ.ಸಲ್ದಾನ್ಹಾ ಮತ್ತು ರಾಯ್ ಕ್ಯಾಸ್ತಲಿನೊ ಹಾಗೂ ಕೆಥೋಲಿಕ್ ಸಭಾ ಮಂಗಳೂರು ಪ್ರದೇಶ (ರಿ.) ಅಧ್ಯಕ್ಷರಾದ ಸ್ಟ್ಯಾನಿ ಲೋಬೋ ಅವರು ದಕ್ಷಿಣ ಕನ್ನಡ ಜಿಲ್ಲೆಯ ಎಸ್.ಪಿ. ಯವರನ್ನು ಭೇಟಿ ಮಾಡಿ, ಪುತ್ತೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಡಾ|ಪ್ರಸಾದ್ ಭಂಡಾರಿ ಅವರು ದ್ವೇಷಪೂರಿತ ಭಾಷಣ ಮಾಡಿದ್ದಕ್ಕಾಗಿ ಅವರ ವಿರುದ್ಧ ದೂರು ದಾಖಲಿಸಿದ್ದಾರೆ. ಅಗತ್ಯ ಕ್ರಮ ಕೈಗೊಳ್ಳುವುದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಎಸ್. ಪಿ. ವಿಕ್ರಂ ಆಮೆ ಐ.ಎ.ಎಸ್. ಭರವಸೆ ನೀಡಿದರು.

ನಿಯೋಗದಲ್ಲಿ ಕ್ಯಾಥೋಲಿಕ್ ಸಭಾ ಪದಾಧಿಕಾರಿಗಳಾದ ನೊರೀನ್ ಪಿಂಟೋ ಪ್ರಧಾನ ಕಾರ್ಯದರ್ಶಿ, ಅಲ್ಲೋನ್ಸ್ ಫೆರ್ನಾಂಡಿಸ್ ಖಜಾಂಚಿ, ವಿನೋದ್ ಪಿಂಟೊ ಉಪಾಧ್ಯಕ್ಷರು, ಫ್ರಾನ್ಸಿಸ್ ಸೆರಾರಾವ್ ಜಂಟಿ ಖಜಾಂಚಿ, ಆರ್ಥರ್ ಡಿ’ಸೋಜಾ ಬಂಟ್ವಾಳ ವಲಯದ ಅಧ್ಯಕ್ಷರು, ಲ್ಯಾನ್ಸಿ ಮಸ್ಕರೇನಸ್ ಪುತ್ತೂರು ವಲಯದ ಅಧ್ಯಕ್ಷರು, ಕಾಲಿನ್ ಮಿರಾಂದಾ ಸಿಟಿ ವಲಯದ ಅಧ್ಯಕ್ಷರು, ಸ್ಪ್ಯಾನಿ ಬಂಟ್ವಾಳ್ ಮಾಧ್ಯಮ ಸಂಯೋಜಕರು ಉಪಸ್ಥಿತರಿದ್ದರು.

More from the blog

ಲೋಕಸಭಾ ಚುನಾವಣೆ : ‘ಸಂಕಲ್ಪ ಪತ್ರ’ ಹೆಸರಿನಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ

ನವದೆಹಲಿ: ದೆಹಲಿಯಲ್ಲಿರುವ ಬಿಜೆಪಿಯ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೋಕಸಭೆ ಚುನಾವಣೆಗಾಗಿ ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ‘ಸಂಕಲ್ಪ ಪತ್ರ’ ಹೆಸರಲ್ಲಿ ದೇಶದ ಜನರಿಗೆ ಪ್ರಧಾನಿ ಮೋದಿ ಆಶ್ವಾಸನೆಗಳನ್ನು ನೀಡಿದ್ದು ಮೊದಲ ಸಂಕಲ್ಪ...

ಬಾಲಿವುಡ್ ನಟ ಸಲ್ಮಾನ್​ ಖಾನ್ ಮನೆ ಮುಂದೆ ಗುಂಡಿನ ದಾಳಿ

ಮುಂಬೈ: ಬಾಲಿವುಡ್ ಆ್ಯಕ್ಟರ್​ ಸಲ್ಮಾನ್ ಖಾನ್ ಅವರ ನಿವಾಸದ ಮೇಲೆ ಇಂದು ಬೆಳಗಿನ ಜಾವ 5 ಗಂಟೆಗೆ ದುಷ್ಕರ್ಮಿಗಳು ಬೈಕ್​ನಲ್ಲಿ ಬಂದು 5 ಸುತ್ತು ಫೈರಿಂಗ್ ಮಾಡಿ ಎಸ್ಕೇಪ್ ಆಗಿದ್ದಾರೆ. ಮುಂಬೈನ ಬಾಂದ್ರಾ ಪ್ರದೇಶದಲ್ಲಿರುವ...

ಪ್ರಧಾನಿ ಮೋದಿ ರೋಡ್ ಶೋಗೆ ಸಿದ್ಧತೆ : ರಸ್ತೆಗಳಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌

ಮಂಗಳೂರು: ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ರೋಡ್‌ ಶೋ ಇರುವ ಹಿನ್ನೆಲೆಯಲ್ಲಿ ಭಾರೀ ಪೊಲೀಸ್‌ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಶನಿವಾರ ಸಂಜೆಯಿಂದಲೇ ಪೊಲೀಸರು ಕಾರ್ಯ ನಿರತರಾಗಿದ್ದು, ಹೊಸದಿಲ್ಲಿಯಿಂದ ಆಗಮಿಸಿರುವ ಎಸ್‌ಪಿಜಿ ಅಧಿಕಾರಿಗಳು ರೋಡ್‌ ಶೋ...

ಮೊಸಳೆಯ ಹೊಟ್ಟೆಯಲ್ಲಿ 1 ಕೆ.ಜಿ ಪ್ಲಾಸ್ಟಿಕ್ ಪತ್ತೆ….! ತ್ಯಾಜ್ಯ ಜೀರ್ಣವಾಗದೆ ಮೊಸಳೆ ಸಾವು

ಸುಬ್ರಹ್ಮಣ್ಯ: ಕಡಬ ಸಮೀಪದ ಪುಳಿಕುಕ್ಕು ಎಂಬಲ್ಲಿ ಕುಮಾರಧಾರಾ ನದಿಯಲ್ಲಿ ಮೊಸಳೆ ಸಾವಿಗೆ ತ್ಯಾಜ್ಯ ಸೇವನೆ ಹಾಗೂ ಪ್ಲಾಸ್ಟಿಕ್‌ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ. ಕಡಬ-ಪಂಜ ಸಂಪರ್ಕ ರಸ್ತೆಯ ಪಂಜ ವಲಯ ಅರಣ್ಯ ವ್ಯಾಪ್ತಿಯ ಪುಳಿಕುಕ್ಕು...