Wednesday, April 10, 2024

ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿ ನಾಪತ್ತೆ

ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿ ತಾಯಿ ಮನೆಗೆ ಹೋದವರು ನಾಪತ್ತೆಯಾದ ಘಟನೆ ಬಂಟ್ವಾಳ ತಾಲೂಕು ಅನಂತಾಡಿ ಗ್ರಾಮದ ದರ್ಖಾಸು ಎಂಬಲ್ಲಿ ನಡೆದಿದೆ

ಬಂಟ್ವಾಳ ತಾಲೂಕಿನ ಸಜಿಪಮುಡ ಗ್ರಾಮದ ಕಾರಾಜೆ ನಿವಾಸಿ ಹರಿಣಾಕ್ಷಿ ಅವರ ಪತಿ ಲೋಕನಾಥ ಪೂಜಾರಿ ನಾಪತ್ತೆಯಾಗಿದ್ದು, ಎ.17 ರಂದು ಕಾರಾಜೆಯಿಂದ ತಾಯಿ ಮನೆಯಾದ ಬಂಟ್ವಾಳ ತಾಲೂಕು ಅನಂತಾಡಿ ಗ್ರಾಮದ ಅನಂತಾಡಿ ದರ್ಖಾಸು ಎಂಬಲ್ಲಿಗೆ ಬಂದಿದ್ದು ಆ ದಿನ ಅಲ್ಲೇ ಉಳಿದುಕೊಂಡಿದ್ದಾರೆ. ಬಳಿಕ ಎ.18 ರಂದು ಬೆಳಿಗ್ಗೆ 8.00 ಗಂಟೆಗೆ ಅನಂತಾಡಿ ದರ್ಖಾಸಿನಿಂದ ಕಾರಾಜೆಗೆ ಹೋಗುತ್ತೇನೆ ಎಂದು ಹೇಳಿ ಹೋದವರು ಈ ವೆರೆಗೂ ಮನೆಗೆ ವಾಪಸ್‌ ಬಂದಿರುವುದಿಲ್ಲ. ಅಲ್ಲದೇ ಲೋಕನಾಥ ಪೂಜಾರಿ ಸ್ವಲ್ಪ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು ಅದಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಮನೆಯಿಂದ ಹೊರಡುವ ಸಮಯ ಪೊಬೈಲ್ ಫೋನ್ ಬಿಟ್ಟು ಹೋಗಿದ್ದು, ಬಳಿಕ ಸಂಬಂಧಿಕರ ಮನೆಗಳಿಗೆ ಪೋನ್ ಮಾಡಿ ವಿಚಾರಿಸಿದ್ದಲ್ಲಿ ಹಾಗೂ ಎಲ್ಲಾ ಕಡೆ ಹುಡುಕಾಡಿದ್ದಲ್ಲಿ ಪತ್ತೆಯಾಗದೇ ಇದ್ದು ಅಲ್ಲದೇ ಮನೆಗೂ ಬಾರದೇ ನಾಪತ್ತೆಯಾಗಿದ್ದಾರೆ.

More from the blog

ದ್ವಿತೀಯ ಪಿಯು ಫಲಿತಾಂಶ ಪ್ರಕಟ : ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ಸ್ಥಾನ

ಬೆಂಗಳೂರು: ಮಾರ್ಚ್ 1ರಿಂದ ಮಾರ್ಚ್ 22ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಬುಧವಾರ ಪ್ರಕಟಗೊಂಡಿದೆ. ಬೆಂಗಳೂರಿನಲ್ಲಿ ಶಿಕ್ಷಣ ಇಲಾಖೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದೆ. ಈ ಬಾರಿ, ಶೇ 81.15 ಮಂದಿ ಉತ್ತೀರ್ಣರಾಗಿದ್ದಾರೆ....

ಶಾಲಾ ಸಮುದಾಯದತ್ತ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಮಾಣಿ: ಶೈಕ್ಷಣಿಕ ವಿಚಾರಗಳ ಸಂಬಂಧಿತವಾದ ಒಳ್ಳೆಯ ಚಚೆ೯ಗಳು ಮೂಡಿಬಂದಾಗ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾದ ಕೆಲಸಗಳು ಮೂಡಲು ಸಾಧ್ಯ ‌. ಪ್ರತಿಯೊಬ್ಬ ವಿದ್ಯಾರ್ಥಿ, ಪೋಷಕರು,ತನ್ನ ಶಾಲೆಯ ಬಗ್ಗೆ ಒಳ್ಳೆಯ ಭಾವನೆ, ಸಂಬಂಧ ಇರಬೇಕು...

ದ.ಕ. ಉಡುಪಿ ಜಿಲ್ಲೆಗೆ ಇಂದು ರಜೆ ಘೋಷಣೆ : ನಿಗದಿತ ವೇಳಾಪಟ್ಟಿಯಂತೆ ಪರೀಕ್ಷೆ

ಮಂಗಳೂರು: ಈದ್ ಉಲ್-ಫಿತರ್ ಪ್ರಯುಕ್ತ ಏಪ್ರಿಲ್ 10ರಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಾರ್ವಜನಿಕ ರಜೆ ಘೋಷಿಸಲಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಧಿಕಾರಿಗಳ ಕಚೇರಿಯಿಂದ ಅಧಿಕೃತ ಆದೇಶ ಹೊರಡಿಸಲಾಗಿದ್ದು, ರಾಜ್ಯ ಸರ್ಕಾರದ...

ಮೈಟ್ ಎಜುಕೇಶನ್ ಸಂಸ್ಥೆಯ ವತಿಯಿಂದ 2024ರ ಪ್ರಾಕ್ಟಿಕಲ್ ಪರೀಕ್ಷೆ

ಮಂಗಳೂರು ಹಾಗೂ ಬಿಸಿರೋಡ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮೈಟ್ ಎಜುಕೇಶನ್ ಸಂಸ್ಥೆಯ ವತಿಯಿಂದ 2024ರ ಪ್ರಾಕ್ಟಿಕಲ್ ಪರೀಕ್ಷೆ ಸೋಮವಾರ ಬಿಸಿರೋಡ್ ಶಾಖೆಯಲ್ಲಿ ನಡೆಯಿತು. ಟೀಚರ್ಸ್ ಟ್ರೈನಿಂಗ್ ವಿಭಾಗದ ವಿದ್ಯಾರ್ಥಿನಿಯರಿಂದ ಪ್ರಸ್ತುತ ವರ್ಷದಲ್ಲಿ ತಯಾರಿಸಿದ ಎಲ್ಲಾ ಕಲಿಕಾ...