Friday, April 5, 2024

ಮಂಗಳೂರಿನಲ್ಲಿ ನಾಳೆ ವಾಹನ ಸಂಚಾರದಲ್ಲಿ ಬದಲಾವಣೆ : ಇಲ್ಲಿದೆ ಮಾಹಿತಿ

ಮಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ಮಂಗಳೂರು ನಗರದ ಟೌನ್‌ಹೌಲ್‌ನಿಂದ ನವಭಾರತ ಸರ್ಕಲ್‌ವರೆಗೆ ರೋಡ್‌ಶೋ ನಡೆಸಲಿರುವ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ.

  • ಉಡುಪಿ-ಮಂಗಳೂರು ರಸ್ತೆಯಲ್ಲಿ ಸಂಚರಿಸುವ ಎಲ್ಲ ಬಸ್‌ಗಳು ಕೊಟ್ಟಾರಚೌಕಿ-ಕೆಪಿಟಿ-ನಂತೂರು-ಶಿವಭಾಗ್-ಬೆಂದೂರ್‌ವೆಲ್-ಕರಾವಳಿ ಸರ್ಕಲ್-ಕಂಕನಾಡಿ ಸರ್ಕಲ್-ವೆಲೆನ್ಸಿಯಾ-ಮಂಗಳಾದೇವಿವರೆಗೆ ಸಂಚರಿಸಬೇಕು ಮತ್ತು ಅದೇ ಮಾರ್ಗದಲ್ಲಿ ವಾಪಸ್ ಹೋಗಬೇಕು.
  • ಉಡುಪಿ ಕಡೆಯಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಾಣಕ್ಕೆ ಬರುವ ಬಸ್‌ಗಳು ಕೊಟ್ಟಾರಚೌಕಿ-ಕೆಪಿಟಿ-ಬಟ್ಟಗುಡ್ಡೆ, ಬಿಜೈ-ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಹೋಗಬೇಕು.
  • ತಲಪಾಡಿ ಮತ್ತು ಪಡೀಲ್ ಕಡೆಯಿಂದ ಸ್ಟೇಟ್‌ಬ್ಯಾಂಕ್ ಕಡೆಗೆ ಬರುವ ಎಲ್ಲ ಬಸ್‌ಗಳು ಪಂಪ್‌ವೆಲ್-ಕರಾವಳಿ ಸರ್ಕಲ್-ಕಂಕನಾಡಿ ಸರ್ಕಲ್-ವೆಲೆನ್ಸಿಯಾ-ಮಂಗಳಾದೇವಿವರೆಗೆ ಸಂಚರಿಸಬೇಕು ಮತ್ತು ಅದೇ ಮಾರ್ಗವಾಗಿ ವಾಪಸ್ ಹೋಗಬೇಕು.
  • ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಹೊರಡುವ ಎಲ್ಲ ಬಸ್‌ಗಳು ಕೆಎಸ್‌ಆರ್‌ಟಿಸಿ-ಕುಂಟಿಕಾನ ಮೂಲಕ ಕೆಪಿಟಿ ಅಥವಾ ಕೊಟ್ಟಾರಚೌಕಿ ಕಡೆಗೆ ಸಂಚರಿಸಬೇಕು.
  • ಕೊಟ್ಟಾರ ಚೌಕಿಯಿಂದ ಸ್ಟೇಟ್‌ಬ್ಯಾಂಕ್ ಕಡೆಗೆ ಬರುವ ಎಲ್ಲಾಾ ಲಘು ವಾಹನಗಳು ಲೇಡಿಹಿಲ್-ಮಣ್ಣಗುಡ್ಡ-ಬಾಲಾಜಿ ಜಂಕ್ಷನ್-ಬಂದರ್ ಜಂಕ್ಷನ್ ಮೂಲಕ ಮುಂದಕ್ಕೆ ಸಂಚರಿಸಬೇಕು.
  • ಲಾಲ್‌ಭಾಗ್ ಕಡೆಯಿಂದ ಬಲ್ಮಠ ಕಡೆಗೆ ಸಂಚರಿಸುವ ಎಲ್ಲ ಲಘು ವಾಹನಗಳು ಬಿ.ಜಿ.ಸ್ಕೂಲ್ ಜಂಕ್ಷನ್ (ಬೆಸೆಂಟ್ ಜಂಕ್ಷನ್)-ಜೈಲು ರಸ್ತೆ-ಕರಂಗಲ್ಪಾಡಿ-ಬಂಟ್‌ಸ್‌ ಹಾಸ್ಟೆಲ್-ಮಲ್ಲಿಕಟ್ಟೆಯಾಗಿ ಅಥವಾ ಪಿವಿಎಸ್-ಬಂಟ್‌ಸ್‌ ಹಾಸ್ಟೆಲ್-ಮಲ್ಲಿಕಟ್ಟೆಯಾಗಿ ಸಂಚರಿಸಬೇಕು.

ವಾಹನ ಸಂಚಾರ ನಿಷೇಧ

ರೋಡ್ ಶೋ ನಡೆಸಲಿರುವ ಟೌನ್‌ಹಾಲ್-ಕ್ಲಾಕ್‌ಟವರ್-ಕೆ.ಬಿ.ಕಟ್ಟೆ-ಹಂಪನಕಟ್ಟೆ-ಕೆಎಸ್‌ಆರ್ ರಸ್ತೆ-ಎಂ.ಗೋವಿಂದ ಪೈ (ನವಭಾರತ) ವೃತ್ತ-ಪಿವಿಎಸ್‌ವರೆಗೆ ತುರ್ತು ಸೇವೆಯ ವಾಹನಗಳನ್ನು ಹೊರತುಪಡಿಸಿ ಉಳಿದ ಎಲ್ಲ ರೀತಿಯ ವಾಹನ ಸಂಚಾರವನ್ನು ಅಪರಾಹ್ನ 3ರಿಂದ ರಾತ್ರಿ 7ರವರೆಗೆ ನಿಷೇಧಿಸಲಾಗಿದೆ.

ರಾವ್ ಆ್ಯಂಡ್ ರಾವ್ ಸರ್ಕಲ್-ಲೇಡಿಗೋಷನ್ ಆಸ್ಪತ್ರೆ ರಸ್ತೆ, ಸೆಂಟ್ರಲ್ ಮಾರ್ಕೆಟ್-ಲೇಡಿಗೋಷನ್ ಆಸ್ಪತ್ರೆ ರಸ್ತೆ, ಸೆಂಟ್ರಲ್ ಮಾರ್ಕೆಟ್-ಕ್ಲಾಕ್ ಟವರ್ ರಸ್ತೆ, ಜಿ.ಎಚ್.ಎಸ್ ರಸ್ತೆ-ಕೆ.ಬಿ.ಕಟ್ಟೆ ರಸ್ತೆ, ಪಿ.ಎಂ ರಸ್ತೆ-ಕೆ.ಎಸ್.ರಾವ್ ರಸ್ತೆ, ಶರವು ದೇವಸ್ಥಾನದಿಂದ ಕೆಎಸ್ ರಾವ್ ರಸ್ತೆ, ಬಾವುಟಗುಡ್ಡೆಯಿಂದ (ಸಿಟಿಸೆಂಟರ್ ಬಳಿ) ಕೆ.ಎಸ್.ರಾವ್ ರಸ್ತೆ, ವಿ.ಟಿ ರಸ್ತೆ-ಬಿಷಪ್ ಹೌಸ್ ಕಡೆಯ ರಸ್ತೆ(ಯೆನೆಪೋಯ ಆಸ್ಪತ್ರೆ ಬಳಿ), ಗದ್ದೆಗೆರಿ ರಸ್ತೆಯಿಂದ ಎಂ.ಗೋವಿಂದ ಪೈ ಸರ್ಕಲ್, ಶಾರದಾ ಶಾಲೆಯಿಂದ ಎಂ.ಗೋವಿಂದ ಪೈ ಸರ್ಕಲ್, ಶಾರದಾ ಶಾಲೆಯಿಂದ ಎಂ.ಗೋವಿಂದ ಪೈ ಸರ್ಕಲ್, ಪಿವಿಎಸ್ ಜಂಕ್ಷನ್‌ನಿಂದ ಎಂ.ಗೋವಿಂದ ಪೈ ಸರ್ಕಲ್, ಮಿಲಾಗ್ರಿಸ್ ರಸ್ತೆಯಿಂದ ಹಂಪನಕಟ್ಟೆ ಜಂಕ್ಷನ್, ಫೋರಂ ಮಾಲ್‌ನಿಂದ ಎ.ಬಿ.ಶೆಟ್ಟಿ ಸರ್ಕಲ್ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ.

ವಾಹನ ಪಾರ್ಕಿಂಗ್ ನಿಷೇಧ

  • ಮೇರಿಹಿಲ್ ಹೆಲಿಪ್ಯಾಡ್‌ನಿಂದ ಕೆಪಿಟಿ ಜಂಕ್ಷನ್-ಬಟ್ಟಗುಡ್ಡ-ಕದ್ರಿಕಂಬ್ಳ-ಬಂಟ್ಸ್‌‌ಹಾಸ್ಟೆಲ್-ಅಂಬೇಡ್ಕರ್ ವೃತ್ತ-ಹಂಪನಕಟ್ಟೆ ಜಂಕ್ಷನ್-ಎ.ಬಿ.ಶೆಟ್ಟಿ ವೃತ್ತದವರೆಗೆ ಹಾಗೂ ಹಂಪನಕಟ್ಟೆ-ರೈಲ್ವೆ ನಿಲ್ದಾಾಣ ರಸ್ತೆ-ಟೌನ್‌ಹಾಲ್ ರಸ್ತೆಯ ಎರಡೂ ಬದಿಯಲ್ಲಿ ಬೆಳಗ್ಗೆ 7ರಿಂದ ಕಾರ್ಯಕ್ರಮ ಮುಗಿಯುವವರೆಗೆ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ.
  • ಟೌನ್‌ಹಾಲ್-ಕ್ಲಾಕ್ ಟವರ್-ಕೆ.ಬಿ.ಕಟ್ಟೆ-ಹಂಪನಕಟ್ಟೆ-ಕೆ.ಎಸ್.ಆರ್ ರಸ್ತೆ-ಎಂ.ಗೋವಿಂದ ಪೈ(ನವಭಾರತ) ವೃತ್ತ-ಪಿವಿಎಸ್‌ವರೆಗಿನ ರಸ್ತೆೆಯ ಎರಡೂ ಬದಿಗಳಲ್ಲಿ ಬೆಳಗ್ಗೆೆ 7ರಿಂದ ಸಂಜೆ ಕಾರ್ಯಕ್ರಮ ಮುಗಿಯುವವರೆಗೆ ಎಲ್ಲ ರೀತಿಯ ವಾಹನ ನಿಲುಗಡೆ ನಿಷೇಧಿಸಲಾಗಿದೆ.

ಪಾರ್ಕಿಂಗ್ ಸ್ಥಳ

ಕಾರ್ಯಕ್ರಮಕ್ಕೆ ಬರುವ ವಾಹನಗಳನ್ನು ಡೊಂಗರಕೇರಿ ಕೆನರಾ ಹೈಸ್ಕೂಲ್ ಮೈದಾನ, ಬಾವುಟಗುಡ್ಡೆ ಸಂತ ಅಲೋಶಿಯಸ್ ಶಾಲಾ ಮೈದಾನ, ಪಾಂಡೇಶ್ವರ ರೊಜಾರಿಯೋ ಶಾಲಾ ಮೈದಾನದಲ್ಲಿ ನಿಲುಗಡೆ ಮಾಡಬೇಕು ಎಂದು ಮಂಗಳೂರು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್.ಜೈನ್ ಅವರು ತಿಳಿಸಿದ್ದಾರೆ.

More from the blog

ಸೌಜನ್ಯ ಹೋರಾಟ ಸಮಿತಿಯಿಂದ ನೋಟ ಅಭಿಯಾನ

ಮಂಗಳೂರು: ರಾಜಕೀಯ ಪಕ್ಷಗಳು ಮತ್ತು ನ್ಯಾಯಾಂಗ ವ್ಯವಸ್ಥೆಯ ಗಮನ ಸೆಳೆಯುವ ಉದ್ದೇಶದಿಂದ ಸೌಜನ್ಯ ಪರ ಹೋರಾಟ ಸಮಿತಿ ವತಿಯಿಂದ ಮುಂಬರುವ‌ ಲೋಕಸಭಾ ಚುನಾವಣೆಯಲ್ಲಿ ನೋಟಕ್ಕೆ ಮತ ಚಲಾಯಿಸಲು ಜನ ಸಾಮಾನ್ಯರನ್ನು ಪ್ರೇರೇಪಿಸಲು ನೋಟ...

ಕಲ್ಲಡ್ಕ ಶ್ರೀರಾಮ ಭಜನಾ ಮಂದಿರಕ್ಕೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಭೇಟಿ

ಬಂಟ್ವಾಳ ತಾಲೂಕಿನ ಶಕ್ತಿಕೇಂದ್ರವಾದ ಕಲ್ಲಡ್ಕ ಶ್ರೀರಾಮ ಭಜನಾ ಮಂದಿರಕ್ಕೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಆಗಮಿಸಿ ಪ್ರಾರ್ಥನೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕಲ್ಲಡ್ಕ ಡಾ| ಪ್ರಭಾಕರ್ ಭಟ್ ಬಿಜೆಪಿ...

ಬೆಳ್ತಂಗಡಿ: ಆನ್ ಲೈನ್ ಮೂಲಕ ಸಾಲ ನೀಡುವುದಾಗಿ ನಂಬಿಸಿ ವಂಚನೆ : ದೂರು ದಾಖಲು

ಬೆಳ್ತಂಗಡಿ: ಮಹಿಳೆಯೊಬ್ಬರಿಗೆ ಫೇಸ್‌ಬುಕ್‌ ಆಪ್‌ ಮೂಲಕ ಸಾಲ ನೀಡುವುದಾಗಿ ಅಪರಿಚಿತರರು ನಂಬಿಸಿ ವಂಚನೆ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರು ಗ್ರಾಮದಲ್ಲಿ ನಡೆದಿದೆ. ವಂಚನೆಗೊಳಗಾದ ಮಹಿಳೆ ನೆಬಿಸಾ ಅವರು ಈ ಬಗ್ಗೆ ವೇಣೂರು ಪೋಲಿಸ್‌...

ಕುಕ್ಕಾಜೆ ಜಂಕ್ಷನ್ ನ ಬ್ಲೀಸ್ ಫುಲ್ ಆರ್ಕೆಡ್ ನಲ್ಲಿ ನೂತನ ಶುದ್ಧ ಸಸ್ಯಹಾರಿ ಫ್ಯಾಮಿಲಿ ರೆಸ್ಟೋರೆಂಟ್ “ಹೋಟೆಲ್ ಅನ್ನಪೂರ್ಣ” ಶುಭಾರಂಭ

ಬಂಟ್ವಾಳ ತಾಲೂಕಿನ ಕುಕ್ಕಾಜೆ ಜಂಕ್ಷನ್ ನ ಬ್ಲೀಸ್ ಫುಲ್ ಆರ್ಕೆಡ್ ನಲ್ಲಿ ಅರುಣ್ ಕುಮಾರ್, ಮಹೇಶ್ ಕುಮಾರ್, ಜನಾರ್ಧನ್ ಪೊಸೊಳಿಗೆ ಮಾಲಕತ್ವದ ನೂತನ ಶುದ್ಧ ಸಸ್ಯಹಾರಿ ಫ್ಯಾಮಿಲಿ ರೆಸ್ಟೋರೆಂಟ್. "ಹೋಟೆಲ್ ಅನ್ನಪೂರ್ಣ" ಶುಭಾರಂಭಗೊಂಡಿತು. ಶ್ರೀ...