Friday, April 5, 2024

ರೈಲ್ವೆ ಹಳಿಗೆ ಬಿದ್ದಿದ್ದ ಮರ : ಸಂಭಾವ್ಯ ರೈಲು ಅವಘಡ ತಪ್ಪಿಸಿ ಸಾಹಸ ಮೆರೆದ ವೃದ್ದ ಮಹಿಳೆ

ಮಂಗಳೂರು: ರೈಲ್ವೆ ಹಳಿಗೆ ಮರ ಬಿದ್ದಿದ್ದನ್ನ ಕಂಡ ವೃದ್ದ ಮಹಿಳೆಯೊಬ್ಬರು ಸಂಭಾವ್ಯ ಅನಾಹುತ ತಪ್ಪಿಸಿದ್ದಾರೆ.

ಮಂಗಳೂರು ಹೊರವಲಯದ ಪಚ್ಚನಾಡಿ ಸಮೀಪದ ಮಂದಾರ ಬಳಿ ರೈಲು ಹಳಿಗೆ ಮರ ಬಿದ್ದಿರುವುದನ್ನು 70 ವರ್ಷ ವಯಸ್ಸಿನ ಚಂದ್ರಾವತಿ ಗಮನಿಸಿದ್ದರು. ಅದೇ ವೇಳೆ ಮಂಗಳೂರು-ಮುಂಬೈ ಮತ್ಸ್ಯಗಂಧ ರೈಲು ಸಂಚರಿಸುವುದರಲ್ಲಿತ್ತು. ಇದನ್ನ ಗಮನಿಸಿದ ಚಂದ್ರಾವತಿ ಅವರು ತಕ್ಷಣ ಮನೆಗೆ ಓಡೋಡಿ ಹೋಗಿ ಕೆಂಪು ಬಟ್ಟೆಯೊಂದನ್ನು ತಂದು ರೈಲು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಲೋಕೋಪೈಲೆಟ್ ಅಪಾಯ ಅರಿತು ತಕ್ಷಣ ರೈಲು ನಿಲ್ಲಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಮತ್ತು ಅಧಿಕಾರಿಗಳು ಸುಮಾರು ಅರ್ಧ ತಾಸಿ‌ನ ಬಳಿಕ ಮರವನ್ನು ತೆರವು ಮಾಡಿದ್ದಾರೆ. ವೃದ್ದೆ ಚಂದ್ರಾವತಿ ಅವರ ಸಮಯೋಚಿತ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

More from the blog

ಸೌಜನ್ಯ ಹೋರಾಟ ಸಮಿತಿಯಿಂದ ನೋಟ ಅಭಿಯಾನ

ಮಂಗಳೂರು: ರಾಜಕೀಯ ಪಕ್ಷಗಳು ಮತ್ತು ನ್ಯಾಯಾಂಗ ವ್ಯವಸ್ಥೆಯ ಗಮನ ಸೆಳೆಯುವ ಉದ್ದೇಶದಿಂದ ಸೌಜನ್ಯ ಪರ ಹೋರಾಟ ಸಮಿತಿ ವತಿಯಿಂದ ಮುಂಬರುವ‌ ಲೋಕಸಭಾ ಚುನಾವಣೆಯಲ್ಲಿ ನೋಟಕ್ಕೆ ಮತ ಚಲಾಯಿಸಲು ಜನ ಸಾಮಾನ್ಯರನ್ನು ಪ್ರೇರೇಪಿಸಲು ನೋಟ...

ಕಲ್ಲಡ್ಕ ಶ್ರೀರಾಮ ಭಜನಾ ಮಂದಿರಕ್ಕೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಭೇಟಿ

ಬಂಟ್ವಾಳ ತಾಲೂಕಿನ ಶಕ್ತಿಕೇಂದ್ರವಾದ ಕಲ್ಲಡ್ಕ ಶ್ರೀರಾಮ ಭಜನಾ ಮಂದಿರಕ್ಕೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಆಗಮಿಸಿ ಪ್ರಾರ್ಥನೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕಲ್ಲಡ್ಕ ಡಾ| ಪ್ರಭಾಕರ್ ಭಟ್ ಬಿಜೆಪಿ...

ಬೆಳ್ತಂಗಡಿ: ಆನ್ ಲೈನ್ ಮೂಲಕ ಸಾಲ ನೀಡುವುದಾಗಿ ನಂಬಿಸಿ ವಂಚನೆ : ದೂರು ದಾಖಲು

ಬೆಳ್ತಂಗಡಿ: ಮಹಿಳೆಯೊಬ್ಬರಿಗೆ ಫೇಸ್‌ಬುಕ್‌ ಆಪ್‌ ಮೂಲಕ ಸಾಲ ನೀಡುವುದಾಗಿ ಅಪರಿಚಿತರರು ನಂಬಿಸಿ ವಂಚನೆ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರು ಗ್ರಾಮದಲ್ಲಿ ನಡೆದಿದೆ. ವಂಚನೆಗೊಳಗಾದ ಮಹಿಳೆ ನೆಬಿಸಾ ಅವರು ಈ ಬಗ್ಗೆ ವೇಣೂರು ಪೋಲಿಸ್‌...

ಕುಕ್ಕಾಜೆ ಜಂಕ್ಷನ್ ನ ಬ್ಲೀಸ್ ಫುಲ್ ಆರ್ಕೆಡ್ ನಲ್ಲಿ ನೂತನ ಶುದ್ಧ ಸಸ್ಯಹಾರಿ ಫ್ಯಾಮಿಲಿ ರೆಸ್ಟೋರೆಂಟ್ “ಹೋಟೆಲ್ ಅನ್ನಪೂರ್ಣ” ಶುಭಾರಂಭ

ಬಂಟ್ವಾಳ ತಾಲೂಕಿನ ಕುಕ್ಕಾಜೆ ಜಂಕ್ಷನ್ ನ ಬ್ಲೀಸ್ ಫುಲ್ ಆರ್ಕೆಡ್ ನಲ್ಲಿ ಅರುಣ್ ಕುಮಾರ್, ಮಹೇಶ್ ಕುಮಾರ್, ಜನಾರ್ಧನ್ ಪೊಸೊಳಿಗೆ ಮಾಲಕತ್ವದ ನೂತನ ಶುದ್ಧ ಸಸ್ಯಹಾರಿ ಫ್ಯಾಮಿಲಿ ರೆಸ್ಟೋರೆಂಟ್. "ಹೋಟೆಲ್ ಅನ್ನಪೂರ್ಣ" ಶುಭಾರಂಭಗೊಂಡಿತು. ಶ್ರೀ...