Thursday, April 11, 2024

ಲೋರೆಟ್ಟೋ ಮಾತಾ ಚರ್ಚ್ ನಲ್ಲಿ ಗರಿಗಳ ಭಾನುವಾರ ಆಚರಣೆ

ಬಂಟ್ವಾಳ: ಲೋರೆಟ್ಟೋ ಮಾತಾ ಚರ್ಚ್ ನಲ್ಲಿ ಗರಿಗಳ ಭಾನುವಾರ ವನ್ನು ಭಕ್ತಿ, ಶ್ರದ್ಧೆಯಿಂದ ಆಚರಿಸಲಾಯಿತು.

ಈದರೊಂದಿಗೆ ಪವಿತ್ರ ವಾರಕ್ಕೆ ಅತ್ಯಂತ ಭಕ್ತಿ ಪೂರ್ವಕವಾಗಿ ಆರಂಭ ನೀಡಲಾಯಿತು. ಲೊರೆಟ್ಟೊ ಶಾಲಾ ವಠಾರದಲ್ಲಿ ಆರಂಭಗೊಂಡ ಪ್ರಾರ್ಥನಾ ವಿದಿಯ ಮೆರವಣಿಗೆಯಲ್ಲಿ ನೂರಾರು ಭಕ್ತಾದಿಗಳು, ಮಕ್ಕಳು ಭಕ್ತಿಯಿಂದ ಪಾಲ್ಗೊಂಡು, ಚರ್ಚ್ ಧರ್ಮಗುರುಗಳಾದ ವಂ. ಫ್ರಾನ್ಸಿಸ್ ಕ್ರಾಸ್ತಾ ಪ್ರಾರ್ಥನಾ ವಿಧಿ ಹಾಗೂ ಪ್ರಧಾನ ಧರ್ಮಗುರುಗಳಾಗಿ ವಂ ಜೇಸನ್ಪ ಮೊನಿಸ್ ರವರು ಪವಿತ್ರ ಬಲಿ ಪೂಜೆಯನ್ನು ಭಕ್ತಾದಿಗಳೊಂದಿಗೆ ಅರ್ಪಿಸಿದರು.

ಚರ್ಚ್ ಪಾಲನಾ ಮಂಡಳಿ ಮೇಲುಸ್ತುವಾರಿ ವಹಿಸಿತ್ತು. ತಪಸ್ಸುಕಾಲದಲ್ಲಿ spiritual renewal ಗೊಸ್ಕರ ಮೂರು ದಿನಗಳ ದ್ಯಾನಕೂಟವನ್ನು ಸೋಮವಾರದಿಂದ ಬುಧವಾರ ತನಕ ಸಂಜೆ 4.00 ರಿಂದ 8:00 ವರೆಗೆ ಶಿವಮೊಗ್ಗ ಧರ್ಮ ಪ್ರಾಂತ್ಯದ ವಂದನಿಯ ರೋಮನ್ ಪಿಂಟೊ ರವರು ನಡೆಸಿಕೊಡಲಿದ್ದಾರೆ.

More from the blog

ಲೋಕಸಭಾ ಚುನಾವಣೆಯ ಹಿನ್ನೆಲೆ : ಚಾರ್ಮಾಡಿಯ ಮೂವರು ಗಡಿಪಾರು

ಬೆಳ್ತಂಗಡಿ: ಚುನಾವಣ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಹಾಗೂ ಕೋಮು ಗಲಭೆಗಳಲ್ಲಿ ಭಾಗವಹಿಸುವ ಸಾಧ್ಯತೆ ಇರುವ ಕಾರಣ ಮೂವರು ರೌಡಿಶೀಟರ್‌ಗಳನ್ನು ಧರ್ಮಸ್ಥಳ ಪೊಲೀಸರು ಗಡಿಪಾರು ಮಾಡಿದ್ದಾರೆ. ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ನಿವಾಸಿಗಳಾದ...

ಎಳನೀರು ಕುಡಿದು ಅಸ್ವಸ್ಥ ಪ್ರಕರಣ : ಫ್ಯಾಕ್ಟರಿಗೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ

ಮಂಗಳೂರು: ನಗರದ ಹೊರವಲಯದ ಎಳನೀರು ಫ್ಯಾಕ್ಟರಿಯೊಂದರಿಂದ ತಂದ ಎಳನೀರು ಕುಡಿದು ಕೆಲವರು ಅಸ್ವಸ್ಥರಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವರದಿ ಆಧಾರದಲ್ಲಿ ದ.ಕ ಜಿಲ್ಲಾ ಆರೋಗ್ಯಾಧಿಕಾರಿ ಡಾ| ತಿಮ್ಮಯ್ಯ ಅವರು ಫ್ಯಾಕ್ಟರಿಗೆ ಭೇಟಿ...

ಹಿತೈಷಿ ತರಬೇತಿ ಕೇಂದ್ರದ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಫಲಿತಾಂಶದೊಂದಿಗೆ ತೇರ್ಗಡೆ

2023-24ನೇ ಸಾಲಿನ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಪಾಣೆಮಂಗಳೂರು, ನರಿಕೊಂಬುವಿನಲ್ಲಿರುವ ಹಿತೈಷಿ ತರಬೇತಿ ಕೇಂದ್ರದ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ. ಕು.ಕೀರ್ತನ ಶೇ.95.6% ಅಂಕಗಳೊಂದಿಗೆ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ ಎಂದು ಸಂಸ್ಥೆಯ ಪ್ರಕಟನೆಯಲ್ಲಿ ತಿಳಿಸಲಾಗಿದೆ. 2024-25ನೇ...

ಬಂಟ್ವಾಳದ ಉಳಿ ಗ್ರಾಮದಲ್ಲಿ ಮತದಾರರ ಮನೆಗೆ ಭೇಟಿ ನೀಡಿ ಮತಯಾಚನೆ ನಡೆಸಿದ ಶಾಸಕ ರಾಜೇಶ್ ನಾಯ್ಕ್

ಲೋಕ ಸಭಾ ಚುನಾವಣೆಯ ಹಿನ್ನಲೆಯಲ್ಲಿ ಕ್ಯಾ.ಬ್ರಿಜೇಶ್ ಚೌಟ ಅವರ ಗೆಲುವಿಗಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಗ್ರಾಮ,ಮನೆ,ಮನ ಅಭಿಯಾನದ ಅಂಗವಾಗಿ ಬಂಟ್ವಾಳದ ಉಳಿ ಗ್ರಾಮದಲ್ಲಿ ಮತದಾರರ ಮನೆಗೆ ಬೇಟಿ ನೀಡಿ...