Saturday, April 13, 2024

ಬಲ್ಗೇರಿಯಾದಲ್ಲಿ ಕೆಲಸ ಕೊಡಿಸುವುದಾಗಿ ಮಹಿಳೆಗೆ 6.30 ಲ.ರೂ. ವಂಚನೆ

ಬಂಟ್ವಾಳ: ಕಳ್ಳಿಗೆ ಗ್ರಾಮದ ತೊಡಂಬಿಲದ ಮಹಿಳೆಯೊಬ್ಬರ ಮಕ್ಕಳಿಗೆ ಬಲ್ಗೇರಿಯಾದಲ್ಲಿ ಉದ್ಯೋಗ ಕೊಡಿಸುವುದಾಗಿ 6.30 ಲಕ್ಷ ರೂ. ಮೊತ್ತವನ್ನು ಪಡೆದು ವಂಚಿಸಿದ್ದು, ಜತೆಗೆ ಮಕ್ಕಳನ್ನು ಮುಂಬಯಿಗೆ ಬರ ಹೇಳಿ ಬಳಿಕ ಆರೋಪಿ ಅಲ್ಲಿಂದ ಪರಾರಿಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮಂಗಳೂರು ಬಿಜೈ ಹೊಸ ರಸ್ತೆ 2ನೇ ಅಡ್ಡ ರಸ್ತೆ ನಿವಾಸಿ ವಿ.ಆರ್‌.ಸುಧೀರ್‌ ರಾವ್‌ ಪ್ರಕರಣದ ಆರೋಪಿಯಾಗಿದ್ದು, ತೊಡಂಬಿಲ ನಿವಾಸಿ ನೆಲ್ಲಿ ಲೀನಾ ಮೊಂತೊರೊ ಅವರು ವಂಚನೆಗೊಳಗಾದ ಮಹಿಳೆಯಾಗಿದ್ದಾರೆ.

ಮಹಿಳೆಯ ಸಂಬಂಧಿ ಲವೀನಾ ಲೋಬೊ ಅವರ ಮೂಲಕ ಆರೋಪಿ ಸುಧೀರ್‌ ರಾವ್‌ ನ ಪರಿಚಯವಾಗಿದ್ದು, ಮಕ್ಕಳಿಗೆ ಉದ್ಯೋಗ ನಗದು ಹಾಗೂ ಬ್ಯಾಂಕ್‌ ಖಾತೆಗೆ ಹಲವು ಬಾರಿ ಮೊತ್ತವನ್ನು ಹಾಕಿಸಿಕೊಂಡಿದ್ದಾರೆ.

ಫೆ. 22ರಂದು ಬಿ.ಸಿ.ರೋಡಿನಲ್ಲಿ 2,83,800 ರೂ., 28ರಂದು ಆನ್‌ಲೈನ್‌ ಮೂಲಕ 50 ರೂ. ಹಾಗೂ 84,950 ರೂ, ಜತೆಗೆ ಬೇರೆ ಬೇರೆ ದಿನಗಳಲ್ಲಿ 71 ಸಾವಿರ ರೂ., 60 ಸಾವಿರ ರೂ., 16 ಸಾವಿರ ರೂ., 2,500 ರೂ., 2,100 ರೂ., 49 ಸಾವಿರ ರೂ, 45 ಸಾವಿರ ರೂ.ಗಳನ್ನು ಬ್ಯಾಂಕೊಂದರ ಬೆಂಗಳೂರು ಶಾಖೆಯ ಉಳಿತಾಯ ಖಾತೆಗೆ ಹಾಕಿಸಿಕೊಂಡಿದ್ದಾನೆ. ಮಾ.19ರಂದು ಮಕ್ಕಳನ್ನು ಮುಂಬಯಿಗೆ ಬರ ಹೇಳಿ ಅಲ್ಲಿ ಅವರಿಂದ 15,600 ರೂ. ಪಡೆದು ಬಲ್ಗೇರಿಯಾದಲ್ಲಿ ಚಳಿ ಇದ್ದು ಜಾಕೆಟ್‌ ತರುವುದಾಗಿ ಹೇಳಿ ಹೋದವನು ಪರಾರಿ ಯಾಗಿದ್ದಾನೆ ಎಂದು ಮಹಿಳೆ ತಿಳಿಸಿದ್ದಾರೆ.

ಆತನ ಮೊಬೈಲ್‌ ಸಂಖ್ಯೆಗೆ ಕರೆ ಮಾಡಿದರೆ ಸ್ವಿಟ್ಚ್ಡ್ ಆಫ್‌ ಬರುತ್ತಿದೆ ಎನ್ನಲಾಗಿದ್ದು, ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆಯುತ್ತಿದೆ.

More from the blog

ಮತದಾರರ ಜಾಗೃತಿ ಕಾರ್ಯಕ್ರಮ, ಕಾಲ್ನಡಿಗೆ ಜಾಥಾ ಹಾಗೂ ಬೀದಿನಾಟಕ

ತಾಲೂಕು ಪಂಚಾಯತ್‌ ಬಂಟ್ವಾಳ, ತಾಲೂಕು ಸ್ವೀಪ್‌ ಸಮಿತಿ, ಕಂದಾಯ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ, ಬಂಟ್ವಾಳ ಪುರಸಭೆ, ರಾಷ್ಟ್ರೀಯ ಸೇವಾ ಯೋಜನೆ, ಮತದಾರರ ಸಾಕ್ಷರತಾ...

ಕಾಸರಗೋಡು ಜಿಲ್ಲೆಯಲ್ಲಿ ರಾಜಕೀಯ ಲಾಭಕ್ಕಾಗಿ ಬ್ರಹ್ಮ ಶ್ರೀ ನಾರಾಯಣ ಗುರುಗಳ ಪೋಟೋ ಬಳಕೆ ಖಂಡನೀಯ-ಜಗದೀಶ್ ಕೊಯಿಲ

ಬಂಟ್ವಾಳ: ಕಾಸರಗೋಡು ಜಿಲ್ಲೆಯಲ್ಲಿ ರಾಜಕೀಯ ಲಾಭಕ್ಕಾಗಿ ಬ್ರಹ್ಮ ಶ್ರೀ ನಾರಾಯಣ ಗುರುಗಳ ಪೋಟೋ ಬಳಕೆ ಮಾಡಿದ್ದು ಖಂಡನೀಯ ಎಂದು ಜಗದೀಶ್ ಕೊಯಿಲ ತಿಳಿಸಿದ್ದಾರೆ. ಅವರು ಬಿಸಿರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ರಾಷ್ಟ್ರೀಯ...

ಕೆ.ಎಸ್.ಆರ್.ಟಿ.ಸಿ.ಬಸ್ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಬೈಕ್ : ಮೂವರಿಗೆ ಗಾಯ

ಬಂಟ್ವಾಳ: ಕೆ.ಎಸ್.ಆರ್.ಟಿ.ಸಿ.ಬಸ್ ಗೆ ಹಿಂಬದಿಯಿಂದ ಬೈಕ್ ಡಿಕ್ಕಿಯಾಗಿ ಬೈಕಿನಲ್ಲಿದ್ದ ಮೂವರು ಗಾಯಗೊಂಡ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ತುಂಬೆ ಸಮೀಪದ ಕಡೆಗೋಳಿ ಎಂಬಲ್ಲಿ ನಡೆದಿದೆ. ಮಂಗಳೂರಿನಿಂದ ಬರುತ್ತಿದ್ದ ಕೆ.ಎಸ್.ಆರ್.ಟಿ‌.ಸಿ.ಬಸ್ ಗೆ ಹೆಲ್ಮೆಟ್ ಧರಿಸಿದೆ...

ಮನೆ ಮನೆಗೆ ತೆರಳಿ ಲೋಕಸಭಾ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಪರ ಮತಯಾಚನೆ

ನಮ್ಮ ಬೂತ್ ನಮ್ಮ ಹೊಣೆ ಘೋಷನೇಯಂತೆ ಬೂತ್ ಸಂಖ್ಯೆ 126 ವಾರ್ಡ್ 12 ರ ಅಜ್ಜೀಬೆಟ್ಟು ನಲ್ಲಿ ಮನೆ ಮನೆಗೆ ತೆರಲಿ ಲೋಕ ಸಭಾ ಅಭ್ಯರ್ಥಿ ಪದ್ಮರಾಜ್ ಪೂಜಾರಿಯವರ ಪರವಾಗಿ ಮತ ಯಾಚನೆ...