Friday, April 12, 2024

ಏರ್ಯ ಆಳ್ವ ಫೌಂಡೇಶನ್ ಆಶ್ರಯದ ಏರ್ಯ ಸಾಹಿತ್ಯ ಸಂಭ್ರಮ

ಬಂಟ್ವಾಳ: ಸಮಾಜವಾದವನ್ನು ನಿಜ ಬದುಕಿನಲ್ಲಿ ಅಳವಡಿಸಿಕೊಂಡು ಪ್ರೀತಿಯ ಜಾಲವನ್ನು ಕಟ್ಟಿಕೊಂಡು ಬದುಕಿದ್ದ ಏರ್ಯರ ಓದನ್ನು ಪರಿಚಯಿಸುವ ನಿಟ್ಟಿನಲ್ಲಿ ಪುಸ್ತಕಗಳ ಪಟ್ಟಿಯನ್ನು ವಿವಿಗಳಿಗೆ ನೀಡಿ ಅದನ್ನು ಜಗತ್ತಿಗೆ ಪರಿಚಯಿಸುವ ಕಾರ್ಯ ಮಾಡಬೇಕು. ಅವರಿಲ್ಲದ ನಾಡು ತಿಳಿವಳಿಕೆಯ ದೃಷ್ಟಿಯಿಂದಲೂ ಅನಾಥವಾಗಿದ್ದು, ಏರ್ಯರ ಋಣ ತೀರಿಸುವ ನೂರು ದಾರಿಗಳಿದ್ದು, ನಾವೆಲ್ಲರೂ ಅದನ್ನು ಮಾಡುವ ಕಾರ್ಯ ಮಾಡಬೇಕಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ನಿವೃತ್ತ ಕುಲಪತಿ ಡಾ| ಬಿ.ಎ.ವಿವೇಕ ರೈ ಹೇಳಿದರು.

ಅವರ ಏರ್ಯ ಬೀಡಿನಲ್ಲಿ ಏರ್ಯ ಆಳ್ವ ಫೌಂಡೇಶನ್ ಆಶ್ರಯದಲ್ಲಿ ನಡೆದ ಏರ್ಯ ಸಾಹಿತ್ಯ ಸಂಭ್ರಮವನ್ನು ಉದ್ಘಾಟಿಸಿದರು.

ಭಾವನಾತ್ಮಕತೆ, ವಿಚಾರತೆ, ಮನುಷ್ಯ ಸಂಬಂಧವನ್ನು ಇಟ್ಟುಕೊಂಡು ಬದುಕುವುದು ಸವಾಲಿನ ವಿಚಾರವಾಗಿದ್ದು, ಅದರಲ್ಲಿ ಏರ್ಯರು ಯಶಸ್ವಿಯಾಗಿದ್ದರು. ಸೇಡಿಯಾಪುನಂತಹ ಘನ ವಿದ್ವಾಂಸರ ಶಿಷ್ಯನಾಗುವ ಭಾಗ್ಯವನ್ನು ಪಡೆದ ಅವರು ಸಾಹಿತ್ಯದ ದೊಡ್ಡ ಪರಂಪರೆಯನ್ನು ಗೌರವಿಸಿ ಓದುತ್ತಿದ್ದರು. ಮುಂದೆ ಅವರ ಜನ್ಮ ಶತಮಾನೋತ್ಸವ ಆಚರಿಸುವ ಸುಸಂದರ್ಭವಿದ್ದು, ಆ ವೇಳೆ ಏರ್ಯರ ಸಮಗ್ರ ಸಾಹಿತ್ಯ ಸಂಪುಟವನ್ನು ಹೊರತರುವ ಕೆಲಸವಾಗಬೇಕು

ಏರ್ಯ ಅವರ ಪತ್ನಿ ಆನಂದಿ ಆಳ್ವ ಅವರು ಡಾ| ವಿವೇಕ ರೈ ಅವರನ್ನು ಗೌರವಿಸಿದರು. ಹಿರಿಯ ಸಾಹಿತಿಗಳಾದ ಡಾ| ತಾಳ್ತಜೆ ವಸಂತಕುಮಾರ್, ಡಾ| ನಾ.ದಾಮೋದರ ಶೆಟ್ಟಿ, ಪ್ರೊ| ಪಿ.ಕೃಷ್ಣಮೂರ್ತಿ, ಡಾ| ಯು.ಮಹೇಶ್ವರಿ, ಡಾ| ತುಕಾರಾಮ್ ಪೂಜಾರಿ, ಡಾ| ಸತ್ಯನಾರಾಯಣ ಮಲ್ಲಿಪಟ್ಟಣ, ಡಾ| ಆರ್.ನರಸಿಂಹಮೂರ್ತಿ, ಡಾ| ಅರುಣಕುಮಾರ್ ಎಸ್.ಆರ್. ಅವರು ಕೃತಿ ವಿಶ್ಲೇಷಣೆ, ಕಿಶೋರ್ ಪೆರ್ಲ ಅವರು ಗಾಯನ ನಡೆಸಿಕೊಟ್ಟರು.

ಏರ್ಯರ ಪುತ್ರಿ ಸುಖಧಾ ಬಾಲಕೃಷ್ಣ ಹೆಗ್ಡೆ, ಮೊಮ್ಮಗಳು ಭಕ್ತಿ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು. ಅಳಿಯ ಬಾಲಕೃಷ್ಣ ಹೆಗ್ಡೆ ಸ್ವಾಗತಿಸಿದರು. ನಿವೃತ್ತ ಪ್ರಾಧ್ಯಾಪಕ ಮಹಾಬಲೇಶ್ವರ ಹೆಬ್ಬಾರ್ ಹಾಗೂ ಕೇಶವ ಎಚ್. ಕಾರ್ಯಕ್ರಮ ನಿರ್ವಹಿಸಿದರು.

More from the blog

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ವಾರ್ಷಿಕ ಜಾತ್ರೆ..ಮಹಾರಥೋತ್ಸವ ಕಣ್ಣುಂಬಿಕೊಂಡ ಸಾವಿರಾರು ಭಕ್ತರು

ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆಯಲ್ಲಿ ಎ. ೧೧ರಂದು ಸಂಜೆ ರಥೋತ್ಸವ ನಡೆಯಿತು. ಜಾತ್ರೆಯಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ಮಹಾಪೂಜೆಯ ಬಳಿಕ ದೇವರು ರಥಾರೋಹಣಗೊಂಡು ಸಾಂಕೇತಿಕವಾಗಿ ರಥವನ್ನು ಎಳೆಯಲಾಯಿತು. ಮಧ್ಯಾಹ್ನ ರಥಕ್ಕೆ...

ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಯ ನಕಲಿ ಸುದ್ದಿ ಪ್ರಕಟ : ಕ್ರಮ ಕೈಗೊಳ್ಳುವಂತೆ ಸುಬ್ರಹ್ಮಣ್ಯ ಕಾಂಗ್ರೆಸ್ ವತಿಯಿಂದ ಪೊಲೀಸ್ ದೂರು

ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಕೋಮು ಭಾವನೆಯ ಹೇಳಿಕೆ ನೀಡಿದ್ದಾರೆಂಬ ನಕಲಿ ಸುದ್ದಿಯನ್ನು ವಾಟ್ಸಾಪ್ ಗ್ರೂಪ್ ಗಳಲ್ಲಿ ಪ್ರಚಾರ ಮಾಡುತ್ತಿರುವವರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸುಬ್ರಹ್ಮಣ್ಯ ಕಾಂಗ್ರೆಸ್ ವತಿಯಿಂದ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ...

ಬಂಟ್ವಾಳದ ಬಡಗಕಜೆಕಾರು, ತೆಂಕಕಜೆಕಾರು ಗ್ರಾಮದಲ್ಲಿ ಮತದಾರರ ಮನೆಗೆ ಭೇಟಿ ನೀಡಿ ಮತಯಾಚನೆ ನಡೆಸಿದ ಶಾಸಕ ರಾಜೇಶ್ ನಾಯ್ಕ್

ಲೋಕ ಸಭಾ ಚುನಾವಣೆಯ ಹಿನ್ನಲೆಯಲ್ಲಿ ಕ್ಯಾ.ಬ್ರಿಜೇಶ್ ಚೌಟ ಅವರ ಗೆಲುವಿಗಾಗಿ "ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಗ್ರಾಮ,ಮನೆ,ಮನ ಸಂಪರ್ಕ ಅಭಿಯಾನ"ದ ಅಂಗವಾಗಿ ಬಂಟ್ವಾಳದ ಬಡಗಕಜೆಕಾರು, ತೆಂಕಕಜೆಕಾರು ಗ್ರಾಮದಲ್ಲಿ ಮತದಾರರ ಮನೆಗೆ...

ಲೋಕಸಭಾ ಚುನಾವಣೆಯ ಹಿನ್ನೆಲೆ : ಚಾರ್ಮಾಡಿಯ ಮೂವರು ಗಡಿಪಾರು

ಬೆಳ್ತಂಗಡಿ: ಚುನಾವಣ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಹಾಗೂ ಕೋಮು ಗಲಭೆಗಳಲ್ಲಿ ಭಾಗವಹಿಸುವ ಸಾಧ್ಯತೆ ಇರುವ ಕಾರಣ ಮೂವರು ರೌಡಿಶೀಟರ್‌ಗಳನ್ನು ಧರ್ಮಸ್ಥಳ ಪೊಲೀಸರು ಗಡಿಪಾರು ಮಾಡಿದ್ದಾರೆ. ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ನಿವಾಸಿಗಳಾದ...