Sunday, April 7, 2024

ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ : ಹಿಟ್‌ ಸ್ಕ್ವಾಡ್‌ ನ ಕರ್ನಾಟಕ ಮುಖ್ಯಸ್ಥನಾಗಿದ್ದ ಆರೋಪಿ ತುಫೈಲ್‌

ಬೆಂಗಳೂರು: ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಇತ್ತೀಚೆಗಷ್ಟೇ ಬಂಧನಕ್ಕೊಳಗಾದ ಕೊಡಗು ಮೂಲದ ತುಫೈಲ್‌ ಪಿಎಫ್ಐ ಸಂಘಟನೆಯ ʼಹಿಟ್‌ ಸ್ಕ್ವಾಡ್‌’ನ ಕರ್ನಾಟಕ ಮುಖ್ಯಸ್ಥನಾಗಿದ್ದ. ಜತೆಗೆ ಈತನೇ ಇತರೆ ಕಾರ್ಯಕರ್ತರಿಗೆ ಶಸ್ತ್ರಾಸ್ತ್ರ ಮತ್ತು ಇತರೆ ಸಮರ ಕಲೆಗಳ ತರಬೇತಿ ನೀಡುತ್ತಿದ್ದ ಎಂಬ ಮಾಹಿತಿ ಎನ್‌ಐಎ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಕೊಡಗು ಜಿಲ್ಲೆಯ ಪಿಎಫ್ಐನ ಮಾಜಿ ಕಾರ್ಯದರ್ಶಿಯಾಗಿದ್ದ ತುಫೈಲ್‌ ಶಸ್ತ್ರಾಸ್ತ್ರ ಬಳಕೆ, ಕುಫ‌ೂ, ಕರಾಟೆ, ಮಾರ್ಷಲ್‌ ಆರ್ಟ್ಸ್ ಹಾಗೂ ಇತರೆ ಸಮರ ಕಲೆಗಳಲ್ಲಿ ಪ್ರಾವೀಣ್ಯತೆ ಹೊಂದಿದ್ದ. ಹೀಗಾಗಿ ಸಂಘಟನೆ ಹಿರಿಯರು ಈತನನ್ನು ಹಿಟ್‌ ಸ್ಕ್ವಾಡ್‌ನ‌ ಕರ್ನಾಟಕದ ಮುಖ್ಯಸ್ಥನಾಗಿ ನೇಮಿಸಿದ್ದರು. ಈ ಸ್ಕ್ವಾಡ್‌ಗಾಗಿ ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಿರುವ ಯುವಕರನ್ನು ಆಯ್ಕೆ ಮಾಡಿಕೊಂಡಿದ್ದ ತುಫೈಲ್‌, ಅವರಿಗೆ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರದ ಗಡಿ ಭಾಗದ ಅರಣ್ಯ ಪ್ರದೇಶಗಳಲ್ಲಿ ಖುದ್ದು ತರಬೇತಿ ನೀಡುತ್ತಿದ್ದ. ಮಾರಕಾಸ್ತ್ರ ಮತ್ತು ಗನ್‌ ಅಥವಾ ಪಿಸ್ತೂಲ್‌ ಬಳಕೆ ಹೇಗೆ ಎಂಬುದನ್ನು ಬೀದಿ ನಾಯಿಗಳ ಹತ್ಯೆ ಮಾಡುವ ಮೂಲಕ ಕಠಿಣ ತರಬೇತಿ ನೀಡುತ್ತಿದ್ದ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಇನ್ನು ಈತನ ಮುಂದಾಳತ್ವದಲ್ಲಿ ರಾಜ್ಯದ ಪ್ರತಿ ಜಿಲ್ಲೆಯಲ್ಲೂ 20 ಮಂದಿಯ ಹಿಟ್‌ ಸ್ಕ್ವಾಡ್‌ ರಚಿಸಲಾಗಿತ್ತು. ಈ ತಂಡದಲ್ಲೇ ಕೆಲ ಯುವಕರನ್ನು ಆಯ್ಕೆ ಮಾಡಿ, ಅವರಿಗೆ ಶಸ್ತ್ರಾಸ್ತ್ರ ತರಬೇತಿ ನೀಡಿ ಹಿಂದೂ ಮುಖಂಡರನ್ನು ಹತ್ಯೆಗೈಯಲಾಗುತ್ತಿತ್ತು. ಈ ಮೂಲಕ ಹಿಂದೂ ಮುಖಂಡರು, ಕಾರ್ಯಕರ್ತರ ಧ್ವನಿ ಅಡಗಿಸುವುದು ಹಾಗೂ ಜನರ ಮನಸ್ಸಿನಲ್ಲಿ ಭಯ ಉಂಟು ಮಾಡಲಾಗಿತ್ತು.

ಪಿಎಫ್ಐನ ಹಿಟ್‌ ಸ್ಕ್ವಾಡ್‌ನ‌ಲ್ಲೇ ಕೆಲ ಯುವಕರನ್ನು ವರದಿಗಾರ‌ ಎಂದು ಆಯ್ದುಕೊಳ್ಳಲಾಗಿತ್ತು. ಈ ವರದಿಗಾರ ಹಿಂದೂ ಮುಖಂಡರು, ವಾಗ್ಮಿಗಳ ಪಟ್ಟಿ ಸಿದ್ಧಪಡಿಸಬೇಕು. ಅವರು ಭಾಗವಹಿಸುವ ಕಾರ್ಯಕ್ರಮಗಳು, ಅವರ ಭಾಷಣಗಳ ತುಣುಕುಗಳನ್ನು ಸಂಗ್ರಹಿಸುತ್ತಿದ್ದರು. ಈ ವೇಳೆ ತಮ್ಮ ಸಮುದಾಯದ ವಿರುದ್ಧ ಯಾವುದಾದರೂ ಆಕ್ಷೇಪಾರ್ಹ ಹೇಳಿಕೆಗಳಿದ್ದರೆ, ಅದನ್ನು ಉಲ್ಲೇಖಿಸಿ ತುಫೈಲ್‌ಗೆ ವರದಿ ಮಾಡುತ್ತಿದ್ದರು. ಆನಂತರ ಆತನ ಬಗ್ಗೆ ಇನ್ನಷ್ಟು ಮಾಹಿತಿ ಸಂಗ್ರಹಿಸಿ, ಹಲ್ಲೆ ಅಥವಾ ಹತ್ಯೆಗೆ ಸಂಚು ರೂಪಿಸಲಾಗಿತ್ತು. ಈ ರೀತಿ ವರದಿಗಾರನಂತೆ ಕೆಲಸ ಮಾಡುತ್ತಿದ್ದ ಪಿಎಫ್ಐ ಕಾರ್ಯಕರ್ತ, ಕೇರಳ ಮೂಲದ ಮೊಹಮ್ಮದ್‌ ಸಾದಿಕ್‌ನನ್ನು ಕಳೆದ ಜನವರಿಯಲ್ಲಿ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಬಂಧಿಸಲಾಗಿತ್ತು.

More from the blog

ಬಂಟ್ವಾಳ: ನಿಯಮ ಮೀರಿ ಚಾಲನೆ ಮಾಡಿ ಪೋಲೀಸರ ಕೈಗೆ ಸಿಕ್ಕಿಬಿದ್ದರೆ ದಂಡ ಗ್ಯಾರಂಟಿ….

ಬಂಟ್ವಾಳ: ರಸ್ತೆಯಲ್ಲಿ ಟ್ರಾಫಿಕ್ ಪೋಲೀಸರು ದಂಡ ವಸೂಲಿ ಮಾಡುವ ವೇಳೆ ಸುಳ್ಳು ಹೇಳಿಬಚಾವಾಗಲು ಸಾಧ್ಯವಿಲ್ಲ, ಜೊತೆಗೆ ಅಸಭ್ಯ ವರ್ತನೆ ಮಾಡಿದರೆ ಜೋಕೆ, ಅವರ ಶರೀರದಲ್ಲಿ ಕಣ್ಗಾವಲು ಕ್ಯಾಮರಾ ಅಳವಡಿಸಿಲಾಗಿದ್ದು, ಸೂಕ್ಷ್ಮವಾಗಿ ಎಲ್ಲವನ್ನು ಸೆರೆ...

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ : ಚೆಂಡಿನ ಗದ್ದೆಯಲ್ಲಿ ಪ್ರಥಮ ಚೆಂಡು

ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ದೇವಳದ ಚೆಂಡಿನ ಗದ್ದೆಯಲ್ಲಿ ಇಂದು ಪ್ರಥಮ ಚೆಂಡು ನಡೆಯಿತು. ‌ ಇವತ್ತಿನಿಂದ ಮುಂದಿನ ಐದು ದಿನಗಳ ಕಾಲ ಇಲ್ಲಿ ಚೆಂಡು...

ಏಪ್ರಿಲ್ 7ರಂದು ಕರ್ನಾಟಕ ಜಾನಪದ ಪರಿಷತ್ತು ದ.ಕ.ಜಿಲ್ಲಾ ಬಂಟ್ವಾಳ ತಾಲೂಕು ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ

ಬಂಟ್ವಾಳ: ಏಪ್ರಿಲ್ 7ರಂದು ಅಪರಾಹ್ನ 3 ಗಂಟೆಗೆ ಬಿ.ಸಿ.ರೋಡು ರಂಗೋಲಿ ಸಭಾಂಗಣದಲ್ಲಿ ಕರ್ನಾಟಕ ಜಾನಪದ ಪರಿಷತ್ತು ದ.ಕ.ಜಿಲ್ಲಾ ಬಂಟ್ವಾಳ ತಾಲೂಕು ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ ನಡೆಯಲಿದೆ ಎಂದು ತಾಲೂಕು ಘಟಕದ...

ದ್ವಿಚಕ್ರ ವಾಹನಕ್ಕೆ ರಿಕ್ಷಾ ಡಿಕ್ಕಿ : ಸಹಸವಾರ ಸ್ಥಳದಲ್ಲೇ ಮೃತ್ಯು

ಬಂಟ್ವಾಳ: ರಿಕ್ಷಾ ಡಿಕ್ಕಿಯಾಗಿ ದ್ವಿಚಕ್ರ ವಾಹನದಲ್ಲಿ ಸಂಚಾರ ಮಾಡುತ್ತಿದ್ದ ಸಹಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನರಿಕೊಂಬು ಎಂಬಲ್ಲಿ ನಡೆದಿದೆ. ನರಿಕೊಂಬು ನಿವಾಸಿ ನೀಲಪ್ಪ ಪೂಜಾರಿ ಅವರ ಮಗ ಪವನ್ ( 17) ಮೃತಪಟ್ಟ ಬಾಲಕ. ಮನೆಯಿಂದ...